ಬೆಂಗಳೂರು | PTCL ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ

ಬೆಂಗಳೂರು : PTCL ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರುದ್ಧ ,ಭ್ರಷ್ಟ ಕಂದಾಯ ಇಲಾಖೆಯ AC, DC ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ PTCL ಮಂಜುನಾಥ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಸರ್ಕಾರ ಮಂಜೂರು ಮಾಡಿದ ಜಮೀನುಗಳನ್ನು ರಕ್ಷಿಸುವ ಉದ್ದೇಶದಿಂದ 1978ರಲ್ಲಿ ಜಾರಿಗೆ ಬಂದ ಕರ್ನಾಟಕ ಪರಿಶಿಷ್ಟ ಜಾತಿ  ಹಾಗೂ ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ (PTCL Act) ಅನ್ನು ಸಂರಕ್ಷಿಸುವುದು ಸಾಮಾಜಿಕ ನ್ಯಾಯದ ಮೂಲಭೂತ ಭಾಗವಾಗಿದೆ. ಆದರೆ 2023ರ ತಿದ್ದುಪಡಿ ಕಾಯ್ದೆಯ ನಂತರದಲ್ಲಿ ರಾಜ್ಯ ಸರ್ಕಾರ, ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ AC, DC ಗಳು ಹಾಗೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ನಡೆಯುತ್ತಿರುವ ಕೆಲವು ವ್ಯಾಖ್ಯಾನಗಳು ಮತ್ತು ಆದೇಶಗಳಿಂದ ಪರಿಶಿಷ್ಟ ಜಾತಿ / ಪಂಗಡದವರಿಗೆ ಉದ್ದೇಶಪೂರ್ವಕವಾಗಿ ಅನ್ಯಾಯ ಆಗುತ್ತಿರುವುದನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಕೊಟ್ಟೂರು | ಪುಸ್ತಕ ಗೂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿ

ಈ ಕೆಳಗಿನ ಬೇಡಿಕೆಗಳೊಂದಿಗೆ ಮನವಿ ಸಲ್ಲಿಸಿದರು: 

1) ಮುಖ್ಯವಾಗಿ ಪಿ.ಟಿ.ಸಿ.ಎಲ್. ಕಾಯ್ದೆ ಕಲಂ 3(1)ಬಿ.ಯಲ್ಲಿ ಬರುವ ಮಂಜೂರು ಜಮೀನುಗಳ ವಿಚಾರಗಳಲ್ಲಿ ಗೊಂದಲಗಳು ಇರುವುದರಿಂದ ಉದ್ದೇಶ ಪೂರ್ವಕವಾಗಿ ನ್ಯಾಯಾಲಯಗಳು ಸರ್ಕಾರದಿಂದ ಮಂಜೂರಾಗಿದ್ದರೂ ಸಹ (ಇನಾಂ, ಜಿ.ಎಂ.ಎಫ್, ಕನಿಷ್ಠ ಬೆಲೆ, ಮಾರುಕಟ್ಟೆ ಬೆಲಗಿಂತ ಕಡಿಮೆ ಬೆಲೆ, ನಿರ್ದಿಷ್ಟ ಬೆಲೆ ಇತ್ಯಾಧಿ. ಭೂಮಿಗಳನ್ನು ಉದ್ದೇಶ ಪೂರ್ವಕವಾಗಿ ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ವಜಾ ಮಾಡುತ್ತಿದ್ದಾರೆ. ಕಲಂ 3(1)ಬಿ.ಯಲ್ಲಿ ಎಲ್ಲಾ ಸರ್ಕಾರದಿಂದ ಮಂಜೂರಾದ ಜಮೀನುಗಳು ಎಂದು ಇದ್ದರೂ ಸಹ ನ್ಯಾಯಾಲಯಗಳು ದುರುದ್ವೇಷದಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಮಂಜೂರಾದ ಭೂಮಿಗಳ ಬಗ್ಗೆ ಸ್ಪಷ್ಟಪಡಿಸಿ ತಿದ್ದುಪಡಿ ಮಾಡಬೇಕು ಎಂದರು.

2) ಎಲ್ಲಾ ನ್ಯಾಯಾಲಯಗಳಲ್ಲಿ ಶೇಖಡ 90% ಸರ್ಕಾರಿ ವಕೀಲರುಗಳು ಸರ್ಕಾರದ ಕಾಯ್ದೆಗಳು/ ಆದೇಶಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರಿಯಾಗಿ ವಾದ ಮಂಡಿಸುತ್ತಿಲ್ಲವಾದ್ದರಿಂದ, ಸರ್ಕಾರ ತಂದಿರುವ ಕಾನೂನುಗಳು ಸೋಲುತ್ತಿವೆ. ಇದಕ್ಕೆ ನೇರ ಕಾರಣ ಸರ್ಕಾರಿ ವಕೀಲರೇ ಆಗಿರುವುದರಿಂದ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.

3) ಎ.ಸಿ/ಡಿ.ಸಿ/ಹೈಕೋರ್ಟ್.ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪಿ.ಟಿ.ಸಿ.ಎಲ್. ಕಾಯ್ದೆ ವಿರುದ್ದವಾಗಿ ಆಗುತ್ತಿರುವ ಆದೇಶಗಳನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸಿ ನ್ಯಾಯ ಒದಗಿಸಬೇಕು.

4) ಅತಿ ಮುಖ್ಯವಾಗಿ ಕಾಲಮಿತಿ ಅನ್ವಯಿಸಿ ನೆಕ್ಕಂಟಿ ರಾಮಲಕ್ಷ್ಮೀ ಪ್ರಕರಣದಿಂದ ವಜಾ ಆಗಿರುವ 2023ರ ತಿದ್ದುಪಡಿ ಪೂರ್ವದಲ್ಲಿ ಆಗಿರುವ ಪ್ರಕರಣಗಳು ಬರುವುದಿಲ್ಲವೆಂದು 2023ರ ಪಿ.ಟಿ.ಸಿ.ಎಲ್. ಕಾಯ್ದೆ 5(1)ಡಿ,ತಿದ್ದುಪಡಿಯನ್ನು ರದ್ದುಗೊಳಿಸಿ ಕಾಲಮಿತಿ ಆಧಾರದಲ್ಲಿ ವಜಾಗೊಂಡಿರುವ ಎಲ್ಲ ಪ್ರಕರಣ ಒಳಪಡಿಸಬೇಕು.

ಈ ಪ್ರತಿಭಟನೆಯಲ್ಲಿ BM ವೆಂಕಟೇಶ್ , ಜಗದೀಶ್, ಚಂದ್ರಣ್ಣ, ಈಶ್ವರಪ್ಪ, ಚನ್ನಕೇಶವ್ ಅವರು ಭಾಗವಹಿಸಿದರು.

ಇದನ್ನೂ ನೋಡಿ : “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media

Donate Janashakthi Media

Leave a Reply

Your email address will not be published. Required fields are marked *