ರೈಲ್ವೇ ಖಾಸಗೀಕರಣ ಮತ್ತು ವಿದ್ಯುತ್ ಖಾಸಗೀಕರಣ ವಿರೋಧಿಸಿ| ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ರೈಲ್ವೇ ಖಾಸಗೀಕರಣ ಮತ್ತು ವಿದ್ಯುತ್ ಖಾಸಗೀಕರಣ ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ಸಿಐಟಿಯು, ಕೆಪಿಆರ್‌ಎಸ್‌, ಡಿಎಸ್‌ಎಸ್‌, ಕೆಆರ್‌ಆರ್‌ಎಸ್‌, ಎಐಎಡಬ್ಲೂಯೂ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸಲಾಯಿತು. ವಿದ್ಯುತ್ 

ದೇಶದ ಆರ್ಥಿಕತೆಯ ಜೀವಾಳ ಹಾಗೂ ಜನತೆಯ ಜೀವನಾಡಿ ರೈಲ್ವೇ ವಲಯದ ಖಾಸಗೀಕರಣ ಖಂಡಿಸಿ ರೈತ ಕಾರ್ಮಿಕರ ನೇತ್ರತ್ವದಲ್ಲಿ ಇಂದು(ನವೆಂಬರ್ 3) ದೇಶಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣದೆದುರು ಪ್ರತಿಭಟನೆ ನಡೆಸಬೇಕೆಂಬ ತೀರ್ಮಾನದ ಮೇರೆಗೆ ದ.ಕ.ಜಿಲ್ಲೆಯ ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ನಗರದ ಮಂಗಳೂರು ಸೆಂಟ್ರಲ್ ಹಾಗೂ ಕಬಕ ಪುತ್ತೂರು ರೈಲ್ವೇ ನಿಲ್ದಾಣದೆದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಇದನ್ನೂ ಓದಿ:ವಿದ್ಯುತ್ ಖಾಸಗೀಕರಣಗೊಂಡರೆ ಉಚಿತ ವಿದ್ಯುತ್ ಯೋಜನೆಗೆ ಉಳಿವಿಲ್ಲ: ಸಿಪಿಐಎಂ ನಾಯಕ ಕೆ.ಪ್ರಕಾಶ್ ಎಚ್ಚರಿಕೆ

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೇಂದ್ರದ ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.

ಕೇಂದ್ರದ ನರೇಂದ್ರ ಮೋದಿ ಸರಕಾರವು ನವ ಉದಾರೀಕರಣ ನೀತಿಗಳನ್ನು ಅತ್ಯಂತ ವೇಗವಾಗಿ ಜಾರಿಗೊಳಿಸುತ್ತಿರುವ ಪರಿಣಾಮವಾಗಿ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಗಳ ಕೈಗೊಪ್ಪಿಸುವ ತವಕದಲ್ಲಿದೆ. ರೈಲ್ವೇ ಖಾಸಗೀಕರಣದಿಂದಾಗಿ ರೈಲ್ವೇಯಲ್ಲಿ ದುಡಿಯುವ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ಮಾತ್ರವಲ್ಲದೆ ಜನಸಾಮಾನ್ಯರ ಬದುಕು ಕೂಡ ಅಪಾಯದ ಅಂಚಿನತ್ತ ಸಾಗಲಿದೆ.ಹಾಗೂ ರೈಲ್ವೇ ತಯಾರಿಕಾ ಕಾರ್ಖಾನೆಗಳನ್ನು ನವರತ್ನಗಳಂತಿರುವ ರೈಲ್ವೇ ಉತ್ಪಾದನಾ ಘಟಕಗಳನ್ನು ನಾಶ ಮಾಡುತ್ತಿದೆ. ರೈಲ್ವೇ ಪ್ರಯಾಣ ದರಗಳು ವಿಪರೀತವಾಗಿ ಹೆಚ್ಚಲಿದ್ದು, ರೈಲ್ವೇ ಭೂಮಿಗಳೂ ಕೂಡ ಕಾರ್ಪೊರೇಟ್ ಕಂಪೆನಿಗಳ ಪಾಲಾಗಲಿದೆ.ಒಟ್ಟಿನಲ್ಲಿ ರೈಲ್ವೇ ಖಾಸಗೀಕರಣದ ಮೂಲಕ ದೇಶವನ್ನೇ ಮಾರಲು ಹೊರಟ ನರೇಂದ್ರ ಮೋದಿ ಸರಕಾರವನ್ನು ಕಿತ್ತೊಗೆಯದೆ ದೇಶಕ್ಕೆ ಭವಿಷ್ಯವಿಲ್ಲ. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ರಚಿಸಿದ ಬಿಬೇಕ್ ರಾಯ್ ಸಮಿತಿ ಶಿಫಾರಸ್ಸಿನಂತೆ ರೈಲ್ವೇಯನ್ನು 4 ವಿಭಾಗಗಳನ್ನಾಗಿ ವಿಭಜಿಸಿ ಖಾಸಗೀಕರಣಕ್ಕೆ ಮುಂದಾಗಿರುವುದು ನವ ಉದಾರೀಕರಣ ನೀತಿಯ ಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೇ ವಲಯವನ್ನು ವಿಭಜಿಸಿ ಖಾಸಗೀಕರಣಗೊಳಿಸುತ್ತಿರುವ ಆಡಳಿತ ವರ್ಗದ ಪ್ರಮುಖ ನೀತಿ ದೇಶಕ್ಕೆ ವಿನಾಶಕಾರಿಯಾಗಿದೆ.ಇದು ರೈಲ್ವೇ ಕ್ಷೇತ್ರದ ಸರ್ವನಾಶವಲ್ಲದೆ ಪ್ರಯಾಣಿಕರ ಹಾಗೂ ಸಿಬ್ಬಂದಿಗಳ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿದೆ. ನವ ಉದಾರೀಕರಣ ವ್ಯವಸ್ಥೆಯಲ್ಲಿ ಖಾಸಗೀಕರಣ ಪ್ರಮುಖ ಪ್ರಕ್ರಿಯೆಯಾಗಿದ್ದು, ಅದು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸುವುದರ ಜೊತೆಗೆ ಅಗತ್ಯ ವಲಯಗಳಾದ ಆರೋಗ್ಯ ಶಿಕ್ಷಣ ಸಾರಿಗೆ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ ಗಣಿ ಅರಣ್ಯ ನೀರು ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ಗಳ ಕೈಗೆ ಹಸ್ತಾಂತರಿಸುವುದಾಗಿದೆ ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಡಿಯೋ ನೋಡಿ:ರಸ್ತೆ ಸಾರಿಗೆ ಕಾರ್ಮಿಕರನ್ನು ಶೋಷಿಸುವ ಮೋಟಾರು ತಿದ್ದುಪಡಿ ಕಾಯ್ದೆ ವಾಪಸ್ಸಾಗಲಿ Janashakthi Media

Donate Janashakthi Media

Leave a Reply

Your email address will not be published. Required fields are marked *