ಆನೇಕಲ್: ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಾಲ್ಲೂಕಿನ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಪಟ್ಟಣದ ಲೋಕೋಪಯೋಗಿ ಇಲಾಖೆ ಮುಂಭಾಗದಲ್ಲಿ ನವೆಂಬರ್ 21ರಂದು ಪ್ರತಿಭಟನೆ ನಡೆಸಿದರು.
‘ಏತಕ್ಕಾಗಿ ಹೋರಾಟ ರಸ್ತೆಗಾಗಿ ಹೋರಾಟ’, ‘ಬೇಕೇ ಬೇಕು ರಸ್ತೆ ಬೇಕು’ ಎಂಬಿತ್ಯಾದಿ ಘೋಷಣೆಗಳು ಪ್ರತಿಭಟನೆಯಲ್ಲಿ ಮುಳಗಿದವು.
ಆನೇಕಲ್ ತಾಲೂಕಿನ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಇದರಿಂದ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಪ್ರತಿದಿನ ರಸ್ತೆ ಗುಂಡಿಗಳಿಂದಾಗಿ ನರಕ ಯಾತನೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: ಶ್ರಮ ಶಕ್ತಿ ನೀತಿ 2025: ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಹತಾಶ ಪ್ರಯತ್ನ
ಪ್ರತಿದಿನ ಇದೇ ರಸ್ತೆಗಳಲ್ಲಿ ಸಂಚರಿಸುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಪ್ರಭಾಕರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಡಾಂಬರೀಕರಣ ಕಾರ್ಯಕ್ಕೆ ವೇಗ ನೀಡಬೇಕು. ಇಲ್ಲವಾದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಯ ಕರ್ನಾಟಕ ಸಂಘಟನೆಯ ಆನೇಕಲ್ ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷ ಯಾಸ್ಮಿನ್ ತಾಜ್, ಮುಖಂಡರಾದ ವಿನೋದ್, ಮೂರ್ತಿ, ಮಧು, ನಾಗರಾಜ್, ಮಂಜುನಾಥ್, ಸೀಮಾ, ಲಕ್ಷ್ಮಿ, ಶಾಹಿನ್, ಬಂಗಾರ ಬಾಬು, ರಮೇಶ್ ಬಾಬು, ದಿಲ್ಶದ್, ಹರ್ಷದ್ ಇದ್ದರು.
ಇದನ್ನೂ ನೋಡಿ: ದಿನಪೂರ್ತಿ ಕೆಲಸ ಕಮ್ಮಿ ವೇತನ : ಅಂಗನವಾಡಿ, ಬಿಸಿಯೂಟದವರ ಬದುಕಿನ ಕಥೆ Janashakthi Media
