ಹಣಕಾಸು ಯೋಜನೆಯಡಿ ₹37 ಲಕ್ಷ ಅವ್ಯವಹಾರ: ಗ್ರಾ. ಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಲಬುರಗಿ: ಅಕ್ಟೋಬರ್‌ 29ರಂದು ಬಹುಜನ ಸಮಾಜ ಪಕ್ಷದ ಕಲಬುರಗಿ ಗ್ರಾಮೀಣ ಘಟಕದ ವತಿಯಿಂದ ‘ತಾಲ್ಲೂಕಿನ ಹಾಗರಗಾ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ₹37.79 ಲಕ್ಷ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಹಾಗರಗಾ ಗ್ರಾ.ಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು. ಹಣಕಾಸು

‘ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದನದ ಕೊಟ್ಟಿಗೆ, ಕುರಿದೊಡ್ಡಿ, ಬದು ನಿರ್ಮಾಣಕ್ಕೆ ಅಂದಾಜು ಪಟ್ಟಿ ಮಾಡಿ ಕೆಲಸ ಮಾಡದೆ ಹಣ ದುರ್ಬಳಕೆ ಆಗಿದೆ. ಇದನ್ನು ಕೂಡ ತನಿಖೆ ಮಾಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಇದನ್ನೂ ಓದಿ: ಆರ್ ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗೆ ನಿರೀಕ್ಷಣಾ ಜಾಮೀನು ನೀಡದಂತೆ ಆಕ್ಷೇಪಣಾ ಅರ್ಜಿ – ನವೆಂಬರ್ 4ಕ್ಕೆ ವಿಚಾರಣೆ

‘ಹಾಗರಗಾ ಗ್ರಾಮದ ಬುದ್ಧ ನಗರ ಮತ್ತು ಸರಸ್ವತಿ ನಗರದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. 2023-24ನೇ ಸಾಲಿನಲ್ಲಿ ಬಸವ ಮತ್ತು ಅಂಬೇಡ್ಕರ್‌ ಮನೆಗಳು ನಿರ್ಮಿಸಿಕೊಂಡಿರುವ ಬಿಲ್‌ಗಳನ್ನು ಪಾವತಿಸಬೇಕು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆದಾರರು ಮತ್ತು ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಜೊತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಬರೆದ ಒಟ್ಟು 18 ಬೇಡಿಕೆಗಳ ಮನವಿ ಪತ್ರವನ್ನು ತಾ.ಪಂ ಲೆಕ್ಕಾಧಿಕಾರಿಗೆ ಸಲ್ಲಿಸಲಾಯಿತು.

ಬಿಎಸ್‌ಪಿ ಗ್ರಾಮೀಣ ಅಧ್ಯಕ್ಷ ಅಂಬಾರಾಯ ದಸ್ತಾಪುರ, ಜಿಲ್ಲಾ ಘಟಕದ ಕಾರ್ಯದರ್ಶಿ ರವಿ ಆರ್‌.ಕೋರಿ, ವಿಜಯಕುಮಾರ ಅಂಕಲಗಿ, ವಿಠ್ಠಲ ಕೋಣೆಕರ್‌, ಶರಣಬಸಪ್ಪ ಕೋರಿ, ಅರುಣಕುಮಾರ ಹುಗ್ಗಿ, ಮಲ್ಲಿಕಾರ್ಜುನ ಕೋರಿ, ನಾಗರಾಜ ಭಜಂತ್ರಿ, ಅವಿನಾಶ ತಿಪ್ಪಾ, ಅನೀಲ ಜಮಾದಾರ, ಶಶಿಕುಮಾರ ಕೋರಿ, ಧರ್ಮಸಿಂಗ್‌ ತಿವಾರಿ ಇದ್ದರು.

ಇದನ್ನೂ ನೋಡಿ: ನಿರಂಜನ |ಕ್ರಿಯಾ ಮಾಧ್ಯಮದ ಕೆಲಸ ವಿಶೇಷವಾದುದು – ಎಲ್.ಎನ್.ಮುಕುಂದರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *