ಸಬ್ಸಿಡಿ ಯೋಜನೆಗಳ ಸೌಲಭ್ಯ ಕೊಡಿಸುವುದಾಗಿ ವಂಚನೆ; ಸಿ.ಎಸ್. ನಾಗರಾಜ್‌ ಬಂಧನಕ್ಕೆ ಪ್ರತಿಭಟನೆ

ಹೊಳೆನರಸೀಪುರ: ತಾಲ್ಲೂಕಿನಲ್ಲಿ ದಲಿತರು, ಅಲ್ಪಸಂಖ್ಯಾತರ ಸಬ್ಸಿಡಿ ಯೋಜನೆಗಳಲ್ಲಿ ನೀಡುವ ಸೌಲತ್ತುಗಳನ್ನು ರೈತರಿಗೆ ಕೊಡಿಸುವುದಾಗಿ ವಂಚನೆ ಮಾಡಿರುವ ಸಿ.ಎಸ್. ನಾಗರಾಜ್‌ನನ್ನು ಕೂಡಲೇ ಬಂಧಿಸಬೇಕು ಮತ್ತು ಇಡೀ ಪ್ರಕರಣವನ್ನು ಸೂಕ್ತವಾದ ತನಿಖೆ ನಡೆಸಬೇಕು ಹಾಗೂ ನೊಂದ ರೈತರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ನವೀನ್ ಕುಮಾರ್ ಹಾಗೂ ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಎಂ.ಜಿ.ಪೃಥ್ವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಚಾಕೇನಹಳ್ಳಿ ಕಟ್ಟೆ ಗ್ರಾಮದ ವಾಸಿಯಾದ ಸಣ್ಣೆಗೌಡ (ಶಿವಣ್ಣ) ರವರ ಮಗನಾದ ನಾಗರಾಜು ಸಿ.ಎಸ್. ಎಂಬುವವನು “ನಾನು ಹಾಸನ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನಾನು ನಿಮಗೆ ಸಬ್ಸಿಡಿ ರೂಪದಲ್ಲಿ ಟ್ಯಾಕ್ಟರ್ ಮತ್ತು ರೋಟಾ ವೇಟರ್ ಮನೆ ಸಾಲ ಹಾಗೂ ಕಾರುಗಳನ್ನು ಸಬ್ಸಿಡಿ ರೂಪದಲ್ಲಿ ಕೊಡಿಸುತ್ತೇನೆ. ಮತ್ತು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಕೊಡಿಸುತ್ತೇನೆ. ಮತ್ತು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆಬಾವಿ ಮತ್ತಿತರೆ ಸೌಲಭ್ಯಗಳನ್ನು ಕೊಡಿಸುತ್ತೇನೆ. ಜೊತೆಗೆ ದರಖಾಸ್ತು ಜಮೀನು ಮಾಡಿಸಿಕೊಡುತ್ತೇನೆ. ಮತ್ತು ಗುಂಪುಗಳ ಸಾಲ ಮತ್ತು ವೈಯಕ್ತಿಕ ಸಾಲ, ಕೊಟ್ಟಿಗೆ ನಿರ್ಮಾಣ ಸಾಲ ಇವುಗಳನ್ನು ಕೊಡಿಸುತ್ತೇನೆ” ಎಂದು ರೈತರಿಂದ ಪೋನ್ ಪೇ ಮೂಲಕ, ನಗದು ರೂಪದಲ್ಲಿ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್, ತೆರಣ್ಯ ಶಾಖೆಯ ನಾಗರಾಜು ಸಿ.ಎಸ್ ಅವರ ಬ್ಯಾಂಕ್ ಖಾತೆಗೆ ಸುಮಾರು ಒಟ್ಟು ರೂ. 60 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕೊಡುವ ಹಲವು ಸಬ್ಸಿಡಿ ಯೋಜನೆಗಳನ್ನು ನಾಗರಾಜು ಸಿ.ಎಸ್ ತನ್ನ ತಂದೆ ಸಣ್ಣೇಗೌಡ (ಶಿವಣ್ಣ) ಸ್ಥಳೀಯ ಪ್ರಭಾವಿ ರಾಜಕಾರಣಿ ಮತ್ತು ತಾಯಿ ಹರಿಹರಪುರ ಗ್ರಾಮಪಂಚಾಯಿತಿಯ ಅಧ್ಯಕ್ಷೆ ಇವರುಗಳ ಪ್ರಭಾವವನ್ನು ಬಳಸಿಕೊಂಡು ನೈಜ ಫಲಾನುಭವಿಗಳಾಗಿರುವ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಮೋಸಮಾಡಿ ಆ ಯೋಜನೆಗಳನ್ನು ರೈತರಿಗೆ ಕೊಡಿಸುವುದಾಗಿ ವಂಚಿಸಿ ಹಣವನ್ನು ಮೋಸಮಾಡಿದ್ದಾನೆ. ಇತನ ವಿರುದ್ದ ಹೊಳೆನರಸೀಪುರ ನಗರ ಪೋಲೀಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ನಾಲ್ಕು ದೂರುಗಳು ದಾಖಲಾಗಿದ್ದು, ಎಫ್‌ಐಆರ್ ದಾಖಲಾಗಿವೆ.

ಇದನ್ನೂ ಓದಿ: ಬಂಡವಾಳಶಾಹಿಯ ಒಳಗೆ-ಹೊರಗೆ ಮತ್ತು ‘ಮಾನವೀಯ’ ಸಮಾಜ’ದ ನಿರ್ಮಾಣ

ನಾಗರಾಜು ಸಿ.ಎಸ್ ಮೇಲೆ ಇದುವರೆಗೂ ನಾಲ್ಕು ದೂರುಗಳು ದಾಖಲಾಗಿದ್ದರೂ ಸಂಬಂಧಪಟ್ಟ ಹೊಳೆನರಸೀಪುರ ಪೊಲೀಸರು ಯಾವುದೇ ಕ್ರಮವನ್ನು ಕೈಗೊಳ್ಳದೆ, ಬಂಧಿಸದಿರುವುದು, ವಂಚಕರ ಪರವಾದ ನಿಲುವನ್ನು ಹೊಂದಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ದಲಿತರ ಹೆಸರಿನಲ್ಲಿರುವ ಯೋಜನೆಗಳನ್ನು ಇತರರಿಗೆ ಕೊಡಿಸುವುದಾಗಿ ಹಣದ ವಂಚನೆ ಮಾಡಿರುವ ನಾಗರಾಜು ಸಿ.ಎಸ್ ನೇರವಾಗಿ ದಲಿತರಿಗೆ ಮೋಸ ಮಾಡಿದ್ದು ಇವನ ವಿರುದ್ಧ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ಆತನನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಜೊತೆಗೆ ಮೋಸಕ್ಕೆ ಒಳಗಾಗಿರುವ ರೈತರಿಗೆ ಹಣವನ್ನು ವಾಪಸ್ ಕೊಡಿಸಬೇಕು ಎಂದು ಪ್ರತಿಭಟನೆಕಾರರು ಮನವಿ ಮಾಡಿದ್ದಾರೆ.

ಇಡೀ ಪ್ರಕರಣವನ್ನು ನೋಡಿದರೆ ಈ ಕೆಲಸ ಕೇವಲ ನಾಗರಾಜು ಸಿ.ಎಸ್ ಒಬ್ಬನಿಂದ ಮಾತ್ರವಲ್ಲದೇ ಇದರಲ್ಲಿ ಅವನ ತಂದೆ ಸಣ್ಣೇಗೌಡ (ಶಿವಣ್ಣ) ಮತ್ತು ನಾಗರಾಜು ಸಿ.ಎಸ್ ಕೆಲಸ ಮಾಡುತ್ತಿದ್ದ ನಾಗರೀಕ್ 360 ಸಂಸ್ಥೆ ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತಿದೆ. ನಾಗರಾಜ್ ಕೇವಲ ವಿವಿಧ ರಾಜಕಾರಣಗಳ ಹೆಸರುಗಳನ್ನು ಬಳಸಿಕೊಂಡಿರುವುದು ಮಾತ್ರವಲ್ಲದೆ, ತಹಸಿಲ್ದಾರ್‌ರವರುಗಳ ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ರೈತರನ್ನು ನಂಬಿಸಿ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಸಿ.ಎಸ್ ನಾಗರಾಜ್ ಹೊಳೆನರಸೀಪುರ ತಾಲ್ಲೂಕಿನ ರೈತರಿಗೆ ಮೋಸ ಮಾಡಿರುವುದು ಮಾತ್ರವಲ್ಲದೇ ಇದೇ ರೀತಿ ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ಮೋಸ ಮಾಡಿ ಹಣವನ್ನು ವಂಚಿಸಿರುತ್ತಾನೆ. ಇದರ ಕುರಿತು ಬುವನಹಳ್ಳಿಯ ತುಳಸಿರಾಮ್ ಎಂಬುವವರಿಗೆ 5.35,000 ರೂ ಮೋಸ ಮಾಡಿರುವ ಕುರಿತು ದಿನಾಂಕ 6.12.2024 ರಂದು ಹಾಸನದ ಬಡಾಬವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಎಫ್ ಐಆರ್ ಕೂಡ ಆಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಇದನ್ನು ಗಮನಿಸಿದರೆ ಇಂತಹ ಜಾಲದಲ್ಲಿ ಹಲವರು ಸಿಕ್ಕಿಹಾಕಿಕೊಂಡು ಮೋಸಹೋಗಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ವಿವಿಧ ರೈತರಿಂದ ಹಣ ಹಣಪಡೆದ ವಿವರ

1 ಗೋಪಾಲಕೃಷ್ಣ ಬಿನ್ ಗೋವಿಂದೇಗೌಡ, ಕರಗನಹಳ್ಳಿ 17,16,000/-
2 ಮಧು ಬಿಎಸ್ ಬಿನ್ ಶಿವಪ್ಪ, ಪಡವಲಿಪ್ಪೆ 35,00,000/-
3 ಶೃತಿ ಕೋಮ್ ಲೋಕೇಶ್, ಕರಗನಹಳ್ಳಿ 4,05,400/-
4 ಅಭಿಲಾಶ ಕೋಮ್ ಪ್ರಕಾಶ, ಮಾರಶೆಟ್ಟಿಹಳ್ಳಿ 3,04,000/-
5 ಯೋಗಣ್ಣ ಬಿನ್ ಈರೇಗೌಡ, ಉದ್ದೂರು ಹೊಸಹಳ್ಳಿ 1,30,000/-
ಒಟ್ಟು 60,55,400/-

ಈ  ಪ್ರಕರಣವನ್ನು ಮಾನ್ಯ ಜಿಲ್ಲಾಧಿಕಾರಿಗಳು ಗಂಬೀರವಾಗಿ ಪರಿಗಣಿಸಿ ದಲಿತರು ಮತ್ತು ರೈತರಿಗೆ ಮೋಸ, ವಂಚನೆ ಮಾಡಿರುವ ಸಿ.ಎಸ್.ನಾಗರಾಜು ನನ್ನು ಕೂಡಲೇ ಬಂದಿಸಬೇಕು ಮತ್ತು ಈ ಕೃತ್ಯದಲ್ಲಿ ಸಹಕರಿಸಿದ ಅವರ ತಂದೆ ತಾಯಿ ಮತ್ತಿತರರನ್ನು ತನಿಖೆಗೊಳಪಡಿಸಿ ಸೂಕ್ತ ಕಾನುನು ಕ್ರಮ ಜರುಗಿಸಿ ಹಣ ಕಳೆದುಕೊಂಡ ರೈತರಿಗೆ ಹಣವನ್ನು ವಾಪಸ್ ಕೊಡಿಸಬೇಕು ಹಾಗು ನೈಜ ಫಲಾನುಭವಿಗಳಾದ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಯೋಜನೆಗಳಲ್ಲಿ ಮೋಸವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ರಾಜಶೇಖರ್ ಹುಲಿಕಲ್, ಸಿಐಟಿಯು ಮುಖಂಡರಾದ, ಅರವಿಂದ್, ಶೈಲಜಾ, ವೀಣ, ಎಸ್.ಎಫ್ಐ ಮುಖಂಡ ರಮೇಶ್ ಮತ್ತು ನೊಂದ ರೈತರಾದ ಮಧು ಪಿ.ಎಸ್, ಗೋಪಾಲಕೃಷ್ಣ, ಶೃತಿ, ಲೋಕೇಶ್, ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ನೋಡಿ: ದೇವದಾಸಿ, ಒಂಟಿ ಮಹಿಳೆ, ಮಸಣ ಕಾರ್ಮಿಕರಿಗೆ 6000 ರೂ ಮಾಸಿಕ ಪಿಂಚಣಿ ನೀಡಿ Janashakthi Media

Donate Janashakthi Media

Leave a Reply

Your email address will not be published. Required fields are marked *