ಗಜೇಂದ್ರಗಡ: ನಗರದ ದುರ್ಗಾ ಸರ್ಕಲ್ ನಿಂದ ಬಸ್ ನಿಲ್ದಾಣ ತನಕ ಬಸ್ ನಿಲ್ದಾಣದಿಂದ ಕೆ ಕೆ ಸರ್ಕಲ್ ತನಕ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಸಂಘ(ರಿ) (ಸಿಐಟಿಯು ಸಂಯೋಜಿತ) ಗಜೇಂದ್ರಗಡ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಇಂದು ಸಂವಿಧಾನ ಪೀಠಿಕೆ ಮತ್ತು ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಿ ದುಡಿಯುವ ಜನರ ಪರವಾದ ಭಾರತ ಸಂವಿಧಾನ ರಕ್ಷಣೆ ಆಗಬೇಕು ಅದೇ ನಿಜವಾದ ಪ್ರಜಾಪ್ರಭುತ್ವ ಎಂದು ಘೋಷಣೆ ಕೂಗಿದರು. ಶೋಷಿತ
ಕೆ ಕೆ ಸರ್ಕಲ್ ನ ಬಹಿರಂಗ ಸಭೆಯಲ್ಲಿ ತಾಲ್ಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳು ರಕ್ಷಣೆ ಆಗಬೇಕೆಂದು ನಾವು ಸೌಹಾರ್ದವಾಗಿ ಸಂವಿಧಾನ ಆಶಯದಂತೆ ಸಹಬಾಳ್ವೆಗಾಗಿ ಈ ಒಂದು ಮೆರವಣಿಗೆಯನ್ನು ಮಾಡಿ ಜನರಿಗೆ ಸಂವಿಧಾನ ಪೀಠಿಕೆಯ ಪರಿಚಯ ಮಾಡಿ ಕೊಡುವ ಕೆಲಸ ಮಾಡುತ್ತಿದ್ದೆವೆ ಎಂದರು.ಶೋಷಿತ
ನಂತರ ವಕೀಲರು ಮತ್ತು ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡರಾದ ಎಂ ಎಸ್ ಹಡಪದ ಮಾತನಾಡಿ ಇಂದು ಸಂವಿಧಾನವನ್ನು ರಕ್ಷಣೆ ಮಾಡುವ ಅಗತ್ಯ ಇದ್ದು ಸಂವಿಧಾನವನ್ನು ವಿರೋಧಿಸುವ ಜನರೇ ಇಂದು ಸಂವಿಧಾನ ಮೂಲಕ ಪ್ರಭುತ್ವವನ್ನು ಸಾಧಿಸಿ ಅದೇ ಸಂವಿಧಾನವನ್ನು ನಾಶ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಇದನ್ನು ನಾವು ಜಾಗೃತ ಮನಸ್ಸಿನ ಎಲ್ಲಾ ಸಮಾಜದ ಸಮುದಾಯ ಜನರು ಅರ್ಥ ಮಾಡಿಕೊಂಡು ಸಂವಿಧಾನ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ ಆ ಮಾತ್ರ ಈ ಗಣರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ ಎಂದರು.ಶೋಷಿತ
ಇದನ್ನೂ ಓದಿ: ಕೆಪಿಎಸ್ಸಿ ಹಾಗೂ ಸಿಪಿಸಿ ಒಂದೇ ದಿನ ಪರೀಕ್ಷೆ: ಸಿಪಿಸಿ ಕಾನೂನು ಪದವಿ ಪರೀಕ್ಷೆಗಳನ್ನ ಮುಂದೂಡಲು ಎಸ್ಎಫ್ಐ ಮನವಿ
ನಂತರ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷರಾದ ಬಾಲು ರಾಠೋಡ ಮಾತನಾಡಿ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ನಮ್ಮ ಭಾರತದ ಹೆಮ್ಮೆಯ ಸಂವಿಧಾನ ಅದನ್ನು ಜಾರಿ ಮಾಡಿದ ದಿನ ನೆನಪಿನಲ್ಲಿ ಇಡೀ ದೇಶವೇ ಸಂಭ್ರಮ ಪಡುತ್ತಿರುವಾಗಲೇ ಅದನ್ನು ಅಲ್ಲಗಳೆದು ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ದ ಎಂದು ಇಂದು ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಾಹಾಕುಂಭ ಮೇಳೆದಲ್ಲಿ ಸಂತರೊಬ್ಬರು ಹೇಳಿದ್ದಾರೆ ಎಂದು ಪ್ರಜಾವಾಣಿ ಪತ್ರಿಕೆಯಲ್ಲಿ ಇಂದು ವರದಿಯಾಗಿದೆ ಇದು ದೇಶದ ಪ್ರತಿಯೊಬ್ಬ ಪ್ರಜೆಯೂ ಖಂಡಿಸುವ ನೀತಿಯಾಗಿದೆ. ಇಂತಹ ಸಂವಿಧಾನ ವಿರೋಧಿಗಳನ್ನು ತಿರಸ್ಕರಿಸೋಣ, ಒಡಕು ಮನಸ್ಸುಗಳನ್ನು ಕಿತ್ತು ಹಾಕೋಣ ಎಂದು ಪಣ ತೊಡೋಣ.
ಸಂವಿಧಾನ ಬೇರುಗಳನ್ನು ಗಟ್ಟಿಗೊಳಿಸಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ, ದುಡಿಯುವ ಜನರ ಜನರ ಹಕ್ಕುಗಳ ರಕ್ಷಣೆ ಮಾಡುವ, ಶೋಷಿತ ವರ್ಗದ ಜನರ ಹಕ್ಕುಗಳ ರಕ್ಷಣೆ ಮಾಡುವ ಕೆಲಸವನ್ನು ಮಾಡುವ ಸಲುವಾಗಿ, ಪ್ರಭುತ್ವ ಮತ್ತು ವಿಕೃತ ಮನಸ್ಸುಗಳನ್ನು ಎಚ್ಚರಿಸುವುದಕ್ಕಾಗಿ ಈ ಒಂದು ಮೆರವಣಿಗೆಯನ್ನು ದುಡಿಯುವ ಜನರು ಮಾಡಿದ್ದೆವೆ ಎಂದರು.
ಸಂವಿಧಾನ ಪೀಠಿಕೆಯನ್ನು ಹಿರಿಯರಾದ ರಂವಿದ್ರ ಹೊನ್ನಾವಾಡ ಅವರು ಎಲ್ಲರಿಗೂ ಬೋಧಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಗಣೇಶ ರಾಠೋಡ ವಂದಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಶಾಮೀದ್ ಅಲಿ ದಿಂಡವಾಡ, ಪರಶುರಾಮ ಬಡಿಗೇರ್, ಮಂದಾರ ರಾಠೋಡ, ಅಮರೇಶ ಚವ್ಹಾಣ, ಮುತ್ತು ರಾಠೋಡ, ಮಂಜುಳಾ ಪವಾರ, ಚೌಡಮ್ಮ ಯಲ್ಪೊ, ರೇಣವ್ವ ರಾಠೋಡ, ಅನ್ವರ್ ಹೀರೆಕೊಪ್ಪ, ವಿಷ್ಣು ಚಂದನಕರ್, ಕಳಕೇಶ ಮಾಳೋತ್ತರ, ದಾನಪ್ಪ ರಾಠೋಡ, ಮುತ್ತಣ್ಣ ರಾಠೋಡ, ಬಾಷಾಸಾಬ್ ಮಾಲಾದ್ದಾರ್, ಶಂಕರಪ್ಪ ಪಾತರೊಟ್ಟಿ, ಮಾರುತಿ ಗೊಂದೆ, ರೇಣವ್ವ ಕಲಾಲ, ಬಸಮ್ಮ ಕಾಟಾಪುರ, ಹಸೀನಾ ಬೇಗಂ ಬಳ್ಳೊಳ್ಳಿ, ನಾಗರಾಜ ದಿವಾನದ್, ಗಂಗಾವ್ವ ಸವನೂರು, ಕಾಳವ್ವ ಚವ್ಹಾಣ, ಪಾರವ್ವ ಪಮ್ಮಾರ್, ಶಾರವ್ವ ರಾಠೋಡ, ಜ್ಯೋತಿ ಜಾಟೋತ್ತರ, ಲಕ್ಷ್ಮವ್ವ ಪಮ್ಮಾರ್, ಶಾರದಾ ಮಾಳೋತ್ತರ, ಸುನೀಲ್ ಕುಂಬಾರ್, ಸುರೇಶ ಅಕ್ಕಸಾಲಿಗ, ಪಿರೋಜಾ ಮತ್ತು ಇತರರು ಹಾಜರಿದ್ದರು.
ಇದನ್ನೂ ನೋಡಿ: ಮೋದಿ ಸರ್ಕಾರದ ಪ್ರಕಾರ ಭಾರತದಲ್ಲಿ 3-7 ಕೋಟಿ ಬಡವರಿದ್ದಾರೆ ಅಷ್ಟೇ! ಹೌದಾ ಭಾರತೀಯರೇ?? Janashakthi Media