ಅಮೆರಿಕ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ಉಕ್ರೇನ್‌ಗೆ ರಕ್ಷಣೆ ನೀಡಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
‘ನಾನು ಅಧ್ಯಕ್ಷ. ಹಾಗಾಗಿ ಭರವಸೆ ನೀಡುತ್ತೇನೆ. ಉಕ್ರೇನ್‌ಗೆ ಸೇನೆಯನ್ನು ಕಳುಹಿಸುವುದಿಲ್ಲ’ ಎಂದು ಟ್ರಂಪ್ ಮಂಗಳವಾರ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬೀದಿ ವ್ಯಾಪಾರಿಗೆ ಕಿರುಕುಳ ಆತ್ಮಹತ್ಯೆಗೆ ಯತ್ನ; ಮಹಿಳೆ ಗಂಭೀರ
ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಸ್ಥಾಪನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್, ‘ನ್ಯಾಟೊಕ್ಕೆ ಸೇರುವ ಮತ್ತು ರಷ್ಯಾದಿಂದ ಕ್ರಿಮಿಯಾವನ್ನು ಮರಳಿ ಪಡೆಯುವ ಉಕ್ರೇನ್ ಆಶಯ ಈಡೇರುವುದಿಲ್ಲ’ ಎಂದು ಹೇಳಿದರು.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ಇತರ ನಾಯಕರೊಡನೆ ಸೋಮವಾರ ಸಭೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ್ದ ಟ್ರಂಪ್ ಉಕ್ರೇನ್‌ಗೆ ಸೇನಾ ನೆರವು ನೀಡುವ ವರದಿಗಳನ್ನು ನಿರಾಕರಿಸಿರಲಿಲ್ಲ.
ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಸ್ಥಾಪನೆ ಕುರಿತ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಂಪ್ರದಾಯಿಕ ಬೇಸಿಗೆ ರಜೆಯನ್ನು ರದ್ದುಗೊಳಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ‘ಟ್ರಂಪ್ ಅವರು ಬೇಸಿಗೆ ರಜೆಯಲ್ಲಿ ನ್ಯೂಜೆರ್ಸಿಗೆ ತೆರಳಬೇಕಿತ್ತು. ಆದರೆ ಟ್ರಂಪ್ ತಮ್ಮ ರಜೆಯನ್ನೇ ರದ್ದುಗೊಳಿಸಿದ್ದಾರೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೆವಿಟ್ ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: ‘ಎಡಿಟೆಡ್ ವಿಡಿಯೋ’ ಬಗ್ಗೆ ಘನಘೋರ ಚರ್ಚೆ ನಾಚಿಗೆಗೇಡು | ‘ಹರೀಶ್ ಪೂಂಜಾರನ್ನು ಅಮಾನತು ಮಾಡಿ’ – ನವೀನ್ ಸೂರಿಂಜೆ
