ಗಂಗಾವತಿ : ಭಾರತ ರಕ್ಷಿಸಿ, ಬಿಜೆಪಿ ತಿರಸ್ಕರಿಸಿ ಘೋಷಣೆಯಡಿ ಜನವರಿ 12, 2024 ರಂದು SFI ನೇತೃತ್ವದಲ್ಲಿ ಪಾರ್ಲಿಮೆಂಟ್ ಚಲೋ ನಡೆಯಲಿದ್ದು, ಇದರ ಭಾಗವಾಗಿ ಗಂಗಾವತಿಯಲ್ಲಿ ಪೋಸ್ಟರ್ ಪ್ರದರ್ಶನ ನಡೆಸಲಾಯಿತು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಲು ಆಗ್ರಹಿಸಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆದಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ನಿಂದ ಪಾರ್ಲಿಮೆಂಟ್ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಸಂಘಟನೆ ರಾಜ್ಯಾಧ್ಯಕ್ಷ ಅಮರೇಶ ಕಡಗದ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಣ
ಅವರು ಇಂದು ಗಂಗಾವತಿ ನಗರದ ಜಗಜ್ಯೋತಿ ಬಸವೇಶ್ವರ ಸರ್ಕಲ್ ನಲ್ಲಿ ಸಂಘಟನೆ ಪಾರ್ಲಿಮೆಂಟ್ ಚಲೋ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಕೇಂದ್ರೀಕರಣವನ್ನು ನಿಲ್ಲಿಸಿ ಸ್ನಾತಕೋತ್ತರ ಹಂತದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿಬೇಕು ಸರ್ವರಿಗೂ ಶಿಕ್ಷಣ ಮತ್ತು ಉದ್ಯೋಗವನ್ನು ಖಾತರಿಪಡಿಸಲು ಭಗತ್ ಸಿಂಗ್ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆಯನ್ನು ಜಾರಿಗೊಳಿಸಿಬೇಕು ಎಂದರು. ಶಿಕ್ಷಣ
ಇದನ್ನು ಓದಿ: ಕೇರಳದ ಇನ್ನೊಂದು ಪ್ರಥಮ : ನಗರೀಕರಣ ಕಮಿಶನ್
ಉನ್ನತ ಶಿಕ್ಷದಲ್ಲಿ ಹೊಸ ಶಿಕ್ಷಣ ನೀತಿ – 2020, ಜಾರಿಯಿಂದ ವಿದ್ಯಾರ್ಥಿಗಳಿಗೆ ಅನೇಕ ತೊಂದರೆ ಸಮಸ್ಯೆ ಆಗುತ್ತಿದ್ದು ವಿದ್ಯಾರ್ಥಿಗಳ ವಿರೋಧಿ NEP ರದ್ದು ಮಾಡಿ, NEET, ಮತ್ತು ಇತ್ತೀಚೆಗೆ ಜಾರಿಗೆ ತಂದ ಗುಜರಾತ್ ಸಾಮಾನ್ಯ ವಿಶ್ವವಿದ್ಯಾಲಯ ಕಾಯಿದೆಯನ್ನು ರದ್ದುಗೊಳಿಸಬೇಕು ಎಂದು ಸಂಘಟನೆಯ ಆಗ್ರಹಿಸುತ್ತದೆ. ಶಿಕ್ಷಣ
ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಅವುಗಳ ವಿದ್ಯಾರ್ಥಿ ಸಾಮರ್ಥ್ಯವನ್ನು ಹೆಚ್ಚಿಸಬೇಕು,ನಿಯಮಿತ ವಿದ್ಯಾರ್ಥಿವೇತನಗಳು ಮತ್ತು ಫೆಲೋಶಿಪ್‌ಗಳನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇತರ ಸರ್ಕಾರಿ ವಲಯಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು, ವಿದ್ಯಾರ್ಥಿಗಳ ಸಂಖ್ಯೆಗುಣವಾಗಿ ಹಾಸ್ಟೆಲ್ ಮುಂಜೂರು ಮಾಡಬೇಕು, ಶೈಕ್ಷಣಿಕ ವರ್ಷ ಮುಗಿತ್ತಾ ಬಂದರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆ ಮಾಡಲಾರದ ರಾಜ್ಯ ಮತ್ತು ಕೇಂದ್ರ ಸರಕಾರದ ಧೋರಣೆಯನ್ನು SFI ಸಂಘಟನೆ ಖಂಡಿಸುತ್ತದೆ ಮತ್ತು ಈ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದರು. ಪ್ರತಿ ನಿರುದ್ಯೋಗಿಗಳಿಗೆ ಕನಿಷ್ಠ 5000 ರೂ. ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ಬೇಡಿಕೆಗಳು ಸೇರಿದಂತೆ ಅನೇಕ ಬೇಡಿಕೆಗಳನ್ನಿಟ್ಟುಕೊಂಡು ಪಾರ್ಲಿಮೆಂಟ್ ಚಲೋ ನಡೆಸಲಾಗುತ್ತಿದೆ ಎಂದರು. ಶಿಕ್ಷಣ
ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಗ್ಯಾನೇಶ್ ಕಡಗದ. ಮುಖಂಡರಾದ ನಾಗರಾಜ್. ಬಸಯ್ಯ್. ಶಂಕರ. ರಾಜಭಕ್ಸಿ. ರುದ್ರಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಣ
ಇದನ್ನು ನೋಡಿ : ಬಿಲ್ಕಿಸ್ ಬಾನು ಪ್ರಕರಣ : ಗುಜರಾತ್ ಸರಕಾರದ ಆದೇಶ ರದ್ದು ಮಾಡಿದ ಸುಪ್ರೀಂ ಕೋರ್ಟ್