ಪಾಕ್ ಪರ ಘೋಷಣೆ : ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳ ರಾಜಕಾರಣಿಗಳೂ ಕಲಿಯಬೇಕಾದ ಪಾಠವೇನು?

ಬಿ.ಎಂ. ಹನೀಫ್ – ಪತ್ರಕರ್ತರು

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳ ಹೆಸರುಗಳು ಸ್ಪಷ್ಟವಾಗಿವೆ. ಗುಂಪಿನಲ್ಲಿ ಹಲವರು ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದು, ಒಬ್ಬ ಪಾಕಿಸ್ತಾನ ಎಂದೂ, ಇನ್ನಿಬ್ಬರು ಜಿಂದಾಬಾದ್ ಎಂದೂ ಕೂಗಿರುವುದೂ ಸ್ಪಷ್ಟವಾಗಿದೆ. SFL ವರದಿಯಲ್ಲಿ ಇದು ದೃಢೀಕರಣವಾಗಿದೆ ಎಂದು ಎಲ್ಲ ಮಾಧ್ಯಮಗಳೂ ವರದಿ ಮಾಡಿವೆ. ಪಾಕ್ ಪರ ಘೋಷಣೆ

ಈ ಕೃತ್ಯ ಮಾಡಿದ ಕಿಡಿಗೇಡಿಗಳನ್ನು ರಕ್ಷಿಸುವ ಯಾವ ಪ್ರಯತ್ನವನ್ನೂ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮಾಡಬಾರದು. ಆರೋಪಿಗಳು ಮಾಡಿರುವುದು ದೇಶದ್ರೋಹಕ್ಕೆ ಸಮನಾದ ಕೃತ್ಯ. ಕಾನೂನು ಪ್ರಕಾರ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಪಾಕ್ ಪರ ಘೋಷಣೆ

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳ ರಾಜಕಾರಣಿಗಳೂ ಕಲಿಯಬೇಕಾದ ಪಾಠಗಳಿವೆ. ನಿಮ್ಮ ಹಿಂಬಾಲಕರು ಯಾರು? ಅವರ ಮಾನಸಿಕತೆ ಏನು? ಅವರ ಅರ್ಹತೆಗಳೇನು? ಅವರು ಕ್ರಿಮಿನಲ್ ಅಪರಾಧಿಗಳ ಪಟ್ಟಿಯಲ್ಲಿ ಇದ್ದಾರೆಯೆ? ವಿಧಾನಸೌಧದ ಒಳಗೆ ಅಭಿಮಾನಿಗಳು ಬರಲು ಪಾಸ್ ಗೆ ಸಹಿ ಹಾಕುವಾಗ ನೀವು ವಹಿಸಬೇಕಾದ ಎಚ್ಚರಿಕೆಗಳೇನು? ಈ ಎಲ್ಲದರ ಬಗ್ಗೆಯೂ ಅಧಿಕಾರಸ್ಥರು ಕಣ್ಣಿಡಬೇಕಾದ ಅಗತ್ಯವಿದೆ. ಪಾಕ್ ಪರ ಘೋಷಣೆ

ಇದನ್ನು ಓದಿ : ಜನವಿರೋಧಿ ಸಾಂಸ್ಕೃತಿಕ ತಾಂಡವವನ್ನು ಸೋಲಿಸಬೇಕಿದೆ – ಡಾ. ಜಿ.ರಾಮಕೃಷ್ಣ

ಇತ್ತೀಚೆಗೆ ಪಾರ್ಲಿಮೆಂಟಿನ ಒಳಗೆ ದಾಂಧಲೆ ಎಬ್ಬಿಸಿದ ಸಂಸದ ಪ್ರತಾಪಸಿಂಹ ಅವರ ಅಭಿಮಾನಿಗಳ ಘಟನೆ ಇಲ್ಲಿ ನೆನಪಾಗುತ್ತದೆ. ಆ ಘಟನೆಯಲ್ಲಿ ದೇಶದ ಸಾರ್ವಭೌಮತೆಯ ಸಂಕೇತವಾದ ಪಾರ್ಲಿಮೆಂಟಿನ ಒಳಗೆ ನುಗ್ಗಿ ಭದ್ರತಾ ಲೋಪಕ್ಕೂ ಆ ಆರೋಪಿಗಳು ಕಾರಣರಾಗಿದ್ದರು. ಇಲ್ಲಿ ವಿಧಾನಸಭೆಯ ಹೊರಗೆ, ವಿಧಾನ ಸೌಧದ ಒಳಗೆ ಪಾಕಿಸ್ತಾನ ಪರ ಜಿಂದಾಬಾದ್ ಕೂಗಿದ್ದಾರೆ. ಪಾಕ್ ಪರ ಘೋಷಣೆ

ಎರಡೂ ಪ್ರಕರಣಗಳಲ್ಲಿ ಆಳುವವರಿಗೆ ಆರೋಪಿಗಳ ಜಾತಿ, ಧರ್ಮ ಮುಖ್ಯವಾದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ. ಇಲ್ಲಿ ಆರೋಪಿಗಳ ದೇಶವಿರೋಧಿ ಕೊಳಕು ಮಾನಸಿಕತೆಯೇ ಮುಖ್ಯ. ಗೃಹ ಸಚಿವರು ಯಾವ ಮುಲಾಜಿಗೂ ಒಳಗಾಗದೆ ಪೊಲೀಸರಿಗೆ ಮುಕ್ತಹಸ್ತ ನೀಡಿ, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

ದೇಶದ ಸಾರ್ವಭೌಮತೆಯ ಮುಂದೆ ಪಕ್ಷ, ಜಾತಿ, ಧರ್ಮಗಳ ಯಾವ ರಾಜಕೀಯ ಲೆಕ್ಕಾಚಾರಗಳೂ ಕೂಡದು. ಕಾಂಗ್ರೆಸ್ಸಾದರೂ ಅಷ್ಟೆ, ಬಿಜೆಪಿಯಾದರೂ ಅಷ್ಟೆ.

ಇದನ್ನು ನೋಡಿ : ಡೈಲಿ ಹೈಲೈಟ್‌ : ಪಾಕ್ ಪರ ಘೋಷಣೆ : ಬಿಜೆಪಿಗೆ ಚುನಾವಣಾ ಅಸ್ತ್ರವಾಯ್ತಾ?

 

 

Donate Janashakthi Media

Leave a Reply

Your email address will not be published. Required fields are marked *