ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿಸ್ತರಣೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,ಬೆಂಗಳೂರಿನಾದ್ಯಂತ ಖಾಸಗಿ ಸಾರಿಗೆ ಒಕ್ಕೂಟ ಬಂದ್ ನಡೆಸುತ್ತಿವೆ ಹೀಗಾಗಿ ಈ ಬಂದ್ ಹಿನ್ನೆಲೆಯಲ್ಲಿ ಸಾಕಷ್ಟು ಜನ ಪ್ರಯಾಣಿಕರು ಮೆಟ್ರೋ ಕಡೆಗೆ ಮುಖ ಮಾಡುತ್ತಿದ್ದಾರೆ. ಖಾಸಗಿ ಸಾರಿಗೆ ಬಂದ್
ಇದನ್ನೂ ಓದಿ:ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಸಾರಿಗೆ ಬಂದ್
ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಪ್ರಯಾಣಕ್ಕೆ ಸಿದ್ದರಾಗುತ್ತಿರುವುದು ಸರ್ವೇಸಾಮಾನ್ಯವಾಗಿ ಸೆ-11 ಕಂಡುಬಂದಿದೆ. ಸೋಮವಾರ ಸೆ-11 ಬಂದ್ ಹಿನ್ನೆಲೆ ಬೆಂಗಳೂರಿನ ಬಹುತೇಕ ಮೆಟ್ರೋ ನಿಲ್ದಾಣಗಳ ಬಳಿ ಸಾಮಾನ್ಯಕ್ಕಿಂತ ಹೆಚ್ಚು ಜನ ಪ್ರಯಾಣಿಕರು ಕಂಡುಬಂದಿರುವ ಕುರಿತು ವರದಿಯಾಗುತ್ತಿದೆ, ಹೀಗಾಗಿ ಇವತ್ತು ಮೆಟ್ರೋ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತದೆ,
ಇನ್ನು ಇದರ ಜೊತೆಗೆ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಸಂಜೆಯ ವೇಳೆಗೆ ಬಿಎಂಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯನ್ನು ಮೀರಿ ಹೆಚ್ಚಾಗಬಹುದು ಎನ್ನಲಾಗುತ್ತದೆ. ಖಾಸಗಿ ಸಾರಿಗೆ ಬಂದ್ ಎಫೆಕ್ಟ್, ಮೆಟ್ರೊ ನಿಲ್ದಾಣದ ಮುಂದೆ ಸಾಲಿನಲ್ಲಿ ನಿಂತ ಪ್ರಯಾಣಿಕರ ದಂಡು..!
ಹೀಗಾಗಿ ಸದ್ಯದ ಮಟ್ಟಿಗೆ ಸರ್ಕಾರಿ ಸಾರಿಗೆ ಇಲಾಖೆಯಿಂದ ಹೆಚ್ಚುವರಿ ಬಸ್ ಗಳನ್ನು ಬಿಡಲಾಗಿದ್ದು ಯಾವುದೇ ರೀತಿಯಾದ ತೊಂದರೆಗಳು ಆಗದೆ ಇರುವ ರೀತಿಯಲ್ಲಿ ಸರ್ಕಾರ ಇದೀಗ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ. ಖಾಸಗಿ ಸಾರಿಗೆ ಬಂದ್