ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿಖಾಸಗಿ ಬಸ್ಗಳ ದರ ಹಿಗ್ಗಾಮುಗ್ಗಾ ಏರಿಕೆಯಾಗಿದೆ. ದೀಪಾವಳಿ ಹಬ್ಬದ ನೆಪದಲ್ಲಿ ಟಿಕೆಟ್ ದರ ಒನ್ ಟು ತ್ರಿಬಲ್ ಹೆಚ್ಚಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಎಲ್ಲಾ ಕಡೆಗಳಿಗೆ ಖಾಸಗಿ ಬಸ್ ದರ ಮೂರು ಪಟ್ಟು ಏರಿಕೆಯಾಗಿದೆ.
ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳಲು ಟಿಕೆಟ್ ಬುಕ್ ಮಾಡಲು ಹೋದವರಿಗೆ ಶಾಕ್ ಎದುರಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ಬಸ್ ಟಿಕೆಟ್ನ ದರ ದುಪ್ಪಟ್ಟು ಮಾಡಿದ್ದಾರೆ. ಇಂದಿನ ಬಸ್ ಟಿಕೆಟ್ ದರಕ್ಕೆ ಹೊಲಿಸಿದರೆ ನವೆಂಬರ್ 10ಕ್ಕೆ ದ್ವಿಗುಣಗೊಳಿಸಿದ್ದಾರೆ.
ಹಬ್ಬಗಳು ಬಂದರೆ ಸಾಕು ಖಾಸಗಿ ಬಸ್ನವರು ಟಿಕೆಟ್ ದರ ದುಪ್ಪಟ್ಟು ಮಾಡ್ತಾರೆ. ಖಾಸಗಿ ಬಸ್ಗಳ ಸುಲಿಗೆಗೆ ಸರ್ಕಾರ ಕ್ರಮ ಕೈಗೊಳ್ಳದೆ ಮೌನವಹಿಸಿದೆ. ವಿಮಾನ ದರಕ್ಕಿಂತಲೂ ದುಪ್ಪಟ್ಟು ಹಣವನ್ನು ವಸೂಲು ಮಾಡುತ್ತಿರುವುದು ಬೇಸರದ ಸಂಗತಿ. ಖಾಸಗಿ ಬಸ್ಗಳ ಸುಲಿಗೆಗೆ ಕಡಿವಾಣ ಬೀಳಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬಸ್ ದರ ಈ ರೀತಿ ಇದೆ.
ಬೆಂಗಳೂರು–ಶಿವಮೊಗ್ಗ
ಬೆಂಗಳೂರು-ಶಿವಮೊಗ್ಗ(ನಾನ್ ಎಸಿ)
ನವೆಂಬರ್ 6 ದರ ₹500-₹700
ನವೆಂಬರ್ 10 ದರ ₹1500-₹2000
ಬೆಂಗಳೂರು-ಶಿವಮೊಗ್ಗ(ಎಸಿ)
ನವೆಂಬರ್ 6 ದರ ₹600-₹700
ನವೆಂಬರ್ 10 ದರ ₹2000-₹2500
ಬೆಂಗಳೂರು–ಹುಬ್ಬಳ್ಳಿ
ಬೆಂಗಳೂರು- ಹುಬ್ಬಳ್ಳಿ(ನಾನ್ ಎಸಿ)
ನವೆಂಬರ್ 6 ದರ ₹600-₹800
ನವೆಂಬರ್ 10 ದರ ₹1600-₹2000
ಬೆಂಗಳೂರು- ಹುಬ್ಬಳಿ( ಎಸಿ)
ನವೆಂಬರ್ 6 ದರ ₹750-₹1200
ನವೆಂಬರ್ 10 ದರ ₹1700-₹1800
ಬೆಂಗಳೂರು–ಮಂಗಳೂರು
ಬೆಂಗಳೂರು-ಮಂಗಳೂರು(ನಾನ್ ಎಸಿ)
ನವೆಂಬರ್ 6 ದರ ₹650-₹700
ನವೆಂಬರ್ 10 ದರ ₹1600-₹1900
ಬೆಂಗಳೂರು-ಮಂಗಳೂರು(ಎಸಿ)
ನವೆಂಬರ್ 6 ದರ ₹850-₹950
ನವೆಂಬರ್ 10 ದರ ₹2000-₹2500
ಬೆಂಗಳೂರು–ಉಡುಪಿ
ಬೆಂಗಳೂರು – ಉಡುಪಿ(ನಾನ್ ಎಸಿ)
ನವೆಂಬರ್ 6 ದರ ₹700-₹850
ನವೆಂಬರ್ 10 ದರ ₹1600-₹2000
ಬೆಂಗಳೂರು – ಉಡುಪಿ( ಎಸಿ)
ನವೆಂಬರ್ 6 ದರ ₹900-₹1000
ನವೆಂಬರ್ 10 ದರ ₹2000-₹2500
ಬೆಂಗಳೂರು–ಧಾರವಾಡ
ಬೆಂಗಳೂರು-ಧಾರವಾಡ( ನಾನ್ ಎಸಿ)
ನವೆಂಬರ್ 6 ದರ ₹650-₹800
ನವೆಂಬರ್ 10 ದರ ₹1600-₹2000
ಬೆಂಗಳೂರು-ಧಾರವಾಡ( ಎಸಿ)
ನವೆಂಬರ್ 6 ದರ ₹800-₹1200
ನವೆಂಬರ್ 10 ದರ ₹2000-₹3000
ಬೆಂಗಳೂರು–ಬೆಳಗಾವಿ
ಬೆಂಗಳೂರು-ಬೆಳಗಾವಿ( ನಾನ್ ಎಸಿ)
ನವೆಂಬರ್ 6 ದರ ₹700-₹800
ನವೆಂಬರ್ 10 ದರ ₹2000-₹2800
ಬೆಂಗಳೂರು-ಬೆಳಗಾವಿ ( ಎಸಿ)
ನವೆಂಬರ್ 6 ದರ ₹1000-₹1500
ನವೆಂಬರ್ 10 ದರ ₹3000-₹4000
ಬೆಂಗಳೂರು – ದಾವಣಗೆರೆ
ಬೆಂಗಳೂರು – ದಾವಣಗೆರೆ( ನಾನ್ ಎಸಿ)
ನವೆಂಬರ್ 6 ದರ ₹500-₹600
ನವೆಂಬರ್ 10 ದರ ₹1200-₹1800
ಬೆಂಗಳೂರು – ದಾವಣಗೆರೆ(ಎಸಿ)
ನವೆಂಬರ್ 6 ದರ ₹800-₹1200
ನವೆಂಬರ್ 10 ದರ ₹2000-₹3000
ಬೆಂಗಳೂರು – ಚಿಕ್ಕಮಗಳೂರು
ಬೆಂಗಳೂರು – ಚಿಕ್ಕಮಗಳೂರು( ನಾನ್ ಎಸಿ)
ನವೆಂಬರ್ 6 ದರ ₹600-₹650
ನವೆಂಬರ್ 10 ದರ ₹1200-₹1700
ಬೆಂಗಳೂರು – ಚಿಕ್ಕಮಗಳೂರು( ಎಸಿ)
ನವೆಂಬರ್ 6 ದರ ಎಸಿ ಬಸ್ ಇಲ್ಲ
ನವೆಂಬರ್ 10 ದರ ₹1000-₹1200
ಬೆಂಗಳೂರು – ಕಲಬುರ್ಗಿ
ಬೆಂಗಳೂರು – ಕಲಬುರ್ಗಿ (ನಾನ್ ಎಸಿ)
ನವೆಂಬರ್ 6 ದರ ₹900-₹1200
ನವೆಂಬರ್ 10 ದರ ₹2500-₹3000
ಬೆಂಗಳೂರು – ಕಲಬುರ್ಗಿ(ಎಸಿ)
ನವೆಂಬರ್ 6 ದರ ₹900-₹1300
ನವೆಂಬರ್ 10 ದರ ₹3100-₹3800
ಬೆಂಗಳೂರು – ಬೀದರ್
ಬೆಂಗಳೂರು – ಬೀದರ್ (ನಾನ್ ಎಸಿ)
ನವೆಂಬರ್ 6 ದರ ₹800-₹900
ನವೆಂಬರ್ 10 ದರ ₹2500-₹3000
ಬೆಂಗಳೂರು – ಬೀದರ್ (ಎಸಿ)
ನವೆಂಬರ್ 6 ದರ ₹900-₹1300
ನವೆಂಬರ್ 10 ದರ ₹3150-₹3800
ಬೆಂಗಳೂರು – ರಾಯಚೂರು
ಬೆಂಗಳೂರು – ರಾಯಚೂರು (ನಾನ್ ಎಸಿ)
ನವೆಂಬರ್ 6 ದರ ₹650- ₹900
ನವೆಂಬರ್ 10 ದರ ₹1500-₹1950
ಬೆಂಗಳೂರು – ರಾಯಚೂರು (ಎಸಿ)
ನವೆಂಬರ್ 6 ದರ ₹900
ನವೆಂಬರ್ 10 ದರ ₹1800-₹2000
ಬೆಂಗಳೂರು – ವಿಜಯಪುರ
ಬೆಂಗಳೂರು – ವಿಜಯಪುರ (ನಾನ್ ಎಸಿ)
ನವೆಂಬರ್ 6 ದರ ₹550- ₹1000
ನವೆಂಬರ್ 10 ದರ ₹1900-₹2200
ಬೆಂಗಳೂರು – ವಿಜಯಪುರ (ಎಸಿ)
ನವೆಂಬರ್ 6 ದರ ₹800-₹1200
ನವೆಂಬರ್ 10 ದರ ₹2500-₹2900
ಖಾಸಗಿ ಬಸ್‌ಗಳ ದುಪ್ಪಟ್ಟು ದರಕ್ಕೆ ಪರ್ಯಾಯವಾಗಿ ಕರ್ನಾಟಕ ತಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ರಿಯಾಯತಿ ನೀಡುತ್ತಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ & ಬರುವ ಪ್ರಯಾಣದ ಟಿಕೆಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಡಿಯೋ ನೋಡಿ : ವಿಸ್ಮಯಕಾರಿ ಗೆದ್ದಲು ಪ್ರಪಂಚ !! ಪ್ರಕ್ರತಿಗೆ ಸಾಕಷ್ಟು ಉಪಕಾರ ಮಾಡುವ ಗೆದ್ದಲು ಹುಳು Janashakthi Media