ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನಕ್ಕೆ, ಬೆಲೆ ಇಳಿಕೆಯ ಸುದ್ದಿಯೇ ಸಿಗುತ್ತಿಲ್ಲ. ಬದಲಾಗಿ ಮತ್ತೊಂದು ಅಗತ್ಯತೆಯ ಬೆಲೆ ಏರಿಕೆ ಸುದ್ದಿ ಕಣ್ಣಲ್ಲಿ ನೀರಾಕಿಸುತ್ತಿದೆ. ಬೆಂಗಳೂರು
ಈಗಾಗಲೇ ಕರ್ನಾಟಕದಲ್ಲಿ ಹಾಲಿನ ದರ, ಡೀಸೆಲ್ ದರ, ಟೋಲ್ ದರ ಹೀಗೆ ನಾನಾ ದರಗಳು ಹೆಚ್ಚಾದವು. ಇದೀಗ ಇದೆಲ್ಲದರ ಪರಿಣಾಮದಿಂದ ಖಾಸಗಿ ಬಸ್‌ನವರು ಕೂಡ ಬೆಲೆ ಏರಿಕೆಯ ಬಿರುಗಾಳಿ ಬೀಸಿದ್ದಾರೆ. ಬೆಂಗಳೂರು
ಹೌದು, ಕರ್ನಾಟಕದ ಸಾರಿಗೆ ಕ್ಷೇತ್ರದಲ್ಲಿ ಹೊಸ ಆರ್ಥಿಕ ಬಿರುಗಾಳಿ ಎಬ್ಬಿಸಲು ಕಾರಣವಾಗುವಂತಹ ಈ ನಿರ್ಧಾರ ಪ್ರಕಟವಾಗಿದೆ. ಡೀಸೆಲ್ ಬೆಲೆ ಹಾಗೂ ಟೋಲ್ ಶುಲ್ಕದಲ್ಲಿ ಹೆಚ್ಚಳದ ಪ್ರತಿಫಲವಾಗಿ, ರಾಜ್ಯದ ಖಾಸಗಿ ಬಸ್ ಮಾಲೀಕರ ಸಂಘವು ಮೇ 2025ರಿಂದ ಪ್ರಯಾಣ ದರವನ್ನು ಶೇಕಡಾ 1ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಬೆಂಗಳೂರು
ಇದನ್ನೂ ಓದಿ: ಟ್ರಂಪ್ ಹೊಸ ಸುಂಕ ನೀತಿ – ಚೀನಾದ ಮೇಲೆ ಶೇ.104ರಷ್ಟು ತೆರಿಗೆ
ಇದರೊಂದಿಗೆ, ರಾಜ್ಯಾದ್ಯಂತ ಲಾರಿ ಮಾಲೀಕರ ಬೃಹತ್ ಬಂದ್‌ಗೆ ಈ ಸಂಘ ಬೆಂಬಲ ಘೋಷಿಸಿರುವುದು ಜನ ಸಾಮಾನ್ಯರಿಗೆ ಮತ್ತೊಂದು ತೊಂದರೆಯ ಸಂಕೇತವಾಗಿದೆ.
ಡೀಸೆಲ್-ಟೋಲ್ ದರ ಏರಿಕೆಯೇ ಕಾರಣ:
ಸಾವಿರಾರು ಪ್ರಯಾಣಿಕರು ಪ್ರತಿದಿನ ಟ್ರಾವೆಲ್ ಮಾಡುತ್ತಾರೆ. ಜನರನ್ನು ಸ್ಥಳಾಂತರಿಸುತ್ತಿರುವ ಖಾಸಗಿ ಬಸ್‌ಗಳ ನಿರ್ವಹಣಾ ವೆಚ್ಚ ಕಳೆದ ಕೆಲವು ತಿಂಗಳಿನಿಂದ ಗಣನೀಯವಾಗಿ ಏರಿದೆ. ಡೀಸೆಲ್ ಬೆಲೆ ಲೀಟರ್‌ಗೆ ₹5ರಿಂದ ₹7ರವರೆಗೆ ಹೆಚ್ಚಾಗಿರುವುದು, ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕಗಳೂ ಪ್ರತಿ ತಿಂಗಳಿಗೆ ಸಾವಿರಾರು ರೂ. ಹೆಚ್ಚಾಗಿ ಬಸ್ ಮಾಲೀಕರಿಗೆ ಹೊರೆ ತಂದಿದೆ.
ಈ ಪರಿಸ್ಥಿತಿಯಲ್ಲಿ, ಬಸ್ ಮಾಲೀಕರು ಶೇಕಡಾ 15ರಷ್ಟು ಟಿಕೆಟ್ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಸಂಘದ ಪ್ರತಿನಿಧಿಗಳು ಹೇಳಿದ್ದಾರೆ. ಈ ಮುಂದಿನ ದರ ಏರಿಕೆಯಲ್ಲಿ, ಪ್ರತಿ ಹಂತದ ಪ್ರಯಾಣ ದರದಲ್ಲಿ ಕನಿಷ್ಠ ₹2ರಷ್ಟು ಹೆಚ್ಚಳ ಆಗಲಿದೆ. ಇದರಿಂದಾಗಿ ದಿನನಿತ್ಯದ ಪ್ರಯಾಣಿಕರ ಬಜೆಟ್‌ನಲ್ಲಿ ನೇರ ಹೊಡೆತ ಸಂಭವಿಸಲಿದೆ.
ಬಸ್ ದರ ಏರಿಕೆಯಿಂದ ಜನರ ಮೇಲೆ ದೊಡ್ಡ ಹೊರೆ:
ಈಗಾಗಲೇ ಜನರು ಬೆಲೆ ಏರಿಕೆಗಳಿಂದ ಕಂಗಾಲಾಗಿ ಹೋಗಿದ್ದಾರೆ. ಸಾಮಗ್ರಿಗಳ ಬೆಲೆ, ವಿದ್ಯುತ್ ಬಿಲ್ಲುಗಳು ಇತ್ಯಾದಿಗಳಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ ಈ ಹೊಸ ದರ ಏರಿಕೆ ಮತ್ತೊಂದು ಆರ್ಥಿಕ ಸಂಕಷ್ಟವನ್ನು ತಂದಿರಬಹುದು.
ಬಸ್ ಪ್ರಯಾಣವನ್ನು ಆಧಾರವಾಗಿಟ್ಟುಕೊಂಡು ನಿತ್ಯ ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರಗಳಿಗೆ ತೆರಳುವವರು ಹೆಚ್ಚಿನ ವೆಚ್ಚವನ್ನು ಭರಿಸುವ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಪ್ರತಿ ಹಂತಕ್ಕೆ ₹2 ಹೆಚ್ಚಿದರೆ ದಿನಕ್ಕೆ ಕನಿಷ್ಠ ₹10 ಹೆಚ್ಚಾಗುತ್ತದೆ. ತಿಂಗಳಿಗೆ ₹300 ಹೆಚ್ಚಾಗುವುದು ನಮ್ಮ ಕುಟುಂಬದ ಬಜೆಟ್‌ನಲ್ಲಿ ದೊಡ್ಡ ಪ್ರಭಾವ ಬೀರುತ್ತದೆ” ಎಂದು ವಿಜಯಪುರದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾರಿ ಬಂದ್‌ಗೆ ಬೆಂಬಲ:
ಈ ಎಲ್ಲಾ ಬೆಳವಣಿಗೆಯ ನಡುವೆಯೇ ಲಾರಿ ಮಾಲೀಕರ ಸಂಘ, ಡೀಸೆಲ್ ಹಾಗೂ ಟೋಲ್ ದರ ಏರಿಕೆಯ ವಿರುದ್ಧ ಆಕ್ರೋಶಗೊಂಡು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯಮಟ್ಟದ ಬಂದ್‌ಗೆ ಕರೆ ನೀಡಿದೆ.
ಖಾಸಗಿ ಬಸ್ ಮಾಲೀಕರ ಸಂಘವು ಈ ಬಂದ್‌ಗೆ ಬೆಂಬಲ ಘೋಷಿಸಿದ್ದು, ಇದರಿಂದ ಖಾಸಗಿ ಸಾರಿಗೆ ಸೇವೆ ಸಹ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.ಲಾರಿ ಮಾಲೀಕರ ಸಂಘ ನೀಡಿರುವ ಬಂದ್‌ಗೆ ನಮ್ಮ ಬೆಂಬಲ ಇದೆ. ಆದರೆ ಖಾಸಗಿ ಬಸ್‌ಗಳನ್ನು ಬಂದ್ ಮಾಡಬೇಕೋ ಇಲ್ಲವೋ ಎಂಬ ನಿರ್ಧಾರ ಇನ್ನೂ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕತೆಯ ಅಭಿಪ್ರಾಯ:
ಈಗಾಗಲೇ ದರ ಏರಿಕೆಯಿಂದ ದಿಕ್ಕು ತೋಚದಂತಾಗಿರುವ ಸಾರ್ವಜನಿಕರ ಅನಿಶ್ಚಿತತೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ರಾಜ್ಯಾದ್ಯಂತ ವ್ಯವಹಾರ ವಲಯಗಳು, ರೈತ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳ ಪ್ರತಿನಿಧಿಗಳು ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ, ಖಾಸಗಿ ಬಸ್ ದರ ಹೆಚ್ಚಳವು ಸರ್ಕಾರದ ವಿರುದ್ಧದ ಅಸಮಾಧಾನಕ್ಕೆ ಇಂಧನ ನೀಡಲಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ನೋಡಿ: ಸ್ವರಗಳು ಮತ್ತು ವ್ಯಂಜನಗಳು | Vowels and Consonants | ತೇಜಸ್ವಿನಿ Janashakthi Media