ಬೆಂಗಳೂರು: ದಸರಾ ಹಬ್ಬದ ನೆಪದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ದರ ಏರಿಕೆಯಾಗಿದ್ದೂ, ಊರಿಗೆ ತೆರಳುವವರಿಗೆ ಟಿಕೆಟ್ ಸಿಗುತ್ತಿಲ್ಲ, ಸಿಕ್ಕರೂ ಟಿಕೆಟ್ ದರ ಕೇಳಿದರೇ ಶಾಕ್ ಆಗುವಂತಿದೆ. ಬೆಂಗಳೂರಿನಿಂದ ದಸರಾ ಹಬ್ಬದ ನಿಮಿತ್ತ ಸೆಪ್ಟೆಂಬರ್ 30ರಿಂದ ತಮ್ಮ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ.
ನಗರದಲ್ಲಿ ಟ್ರಾಫಿಕ್ ಜಾಮ್ ಕೂಡಾ ಮಿತಿ ಮೀರುವ ಸಾಧ್ಯತೆಯಿದೆ. ಇದರ ನಡುವೆ ಟಿಕೆಟ್ ದರವೂ ದುಬಾರಿಯಾಗಿದೆ.
ಇದನ್ನೂ ಓದಿ: ಅಪ್ರಾಪ್ತೆ ಜೊತೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷಕ್ಕೆ ಬೇಡಿಕೆ ಇಟ್ಟ ದುರುಳರ ಬಂಧನ
ಕೆಎಸ್‌ಆರ್ ಟಿಸಿ ಟಿಕೆಟ್ ದರ ದೂರ ಪ್ರಯಾಣಕ್ಕೆ 100 ರಿಂದ 200 ರೂ. ಏರಿಕೆ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿನಗೆ 20 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ಬಸ್ ಗಳನ್ನು ಹಾಕಲಾಗಿದ್ದು ಬೆಲೆ ಮಾತ್ರ 1500 ರೂ.ವರೆಗೆ ತಲುಪಿದೆ.
ಇನ್ನು, ಖಾಸಗಿ ಬಸ್ ಗಳದ್ದೂ ಇದೇ ಕತೆ. ಬೆಂಗಳೂರಿನಿಂದ ಬೆಳಗಾವಿಗೆ ಈ ಮೊದಲು 1200 ರೂ.ಗಳಿತ್ತು. ಆದರೆ ಈಗ 2500 ರೂ.ವರೆಗೆ ತಲುಪಿದೆ. ಬೆಂಗಳೂರಿನಿಂದ ಮಂಗಳೂರಿಗೆ ಈ ಮೊದಲು 1200 ರೂ.ಗಳಿತ್ತು. ಆದರೆ ಈಗ 1600 ರೂ.ಗಳಿಂದ 1800 ರೂ.ವರೆಗೆ ತಲುಪಿದೆ.
ಇದನ್ನೂ ನೋಡಿ: ಜಿಎಸ್ ಟಿ 1.O: ಲೂಟಿ ಉತ್ಸವ್, ಜಿಎಸ್ ಟಿ 2.O: ಜುಮ್ಲಾ ಉತ್ಸವ್ Janashakthi Media
