ಖಾಸಗಿ ಬಸ್ ಗೆ ಬೆಂಕಿ – ಸಂಪೂರ್ಣ ಸುಟ್ಟು ಭಸ್ಮ, ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಬೆಂಗಳೂರು ವೃತ್ತದಲ್ಲಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸಿಗೆ ಆಕಸ್ಮಿಕ ಬೆಂಕಿ ತಗುಲಿ ಬಸಗ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಮುಂಜಾನೆ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇನ್ನೂ ಬಸ್ ಹಿಂಭಾಗದ ದೂರವಾಣಿ ಇಲಾಖೆಗೆ ಸೇರಿದ ಜಾಗದಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಅಪಘಾತ ಮತ್ತು ಇತರರ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿರುವ ದ್ವಿಚಕ್ರ ವಾಹನಗಳು ಪಾರ್ಕ್ ಮಾಡಿದ್ದರು. ಘಟನೆಯಿಂದ ಬೈಕ್ ಗಳಿಗೂ ಬೆಂಕಿ ಬಿದ್ದು ಅವು ಸಹ ಸಂಪೂರ್ಣ ಸುಟ್ಟು ಕರಕಲಾಗಿವೆ.

ಇದನ್ನು ಓದಿ :ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ: 2000ಕ್ಕೂ ಅಧಿಕ ಮೃತರು, 3900ಕ್ಕೂ ಹೆಚ್ಚು ಗಾಯಾಳುಗಳು  

ಇನ್ನೂ ಪಕ್ಕದಲ್ಲಿ ಇರುವ ಪೆಟ್ರೋಲ್ ಬಂಕ್ ಗೆ ಬೆಂಕಿ ವ್ಯಾಪಿಸಿ ಬೆಂಕಿ ಅವಘಡ ಆಗದಂತೆ ಬೆಂಕಿ ನಿಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಲೋಕೇಶ್ ಮತ್ತು ಅವರ ತಂಡ ಹಾಗೂ ಪೋಲೀಸರು ಯಶಸ್ವಿಯಾಗಿದ್ದಾರೆ.

ಪ್ರತಿದಿನ ಬೆಳಿಗ್ಗೆ 7:00 ಗೆ ಚಿಂತಾಮಣಿಯಿಂದ ಹೊಸಕೋಟೆ ಇಂಡಸ್ಟ್ರಿಯಲ್ ಏರಿಯಾಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದ ಅನ್ನಪೂರ್ಣೇಶ್ವರಿ ಖಾಸಗಿ ಬಸ್ ಬೆಂಗಳೂರು ವೃತ್ತದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರಿ ನಿಲ್ಲಿಸಲಾಗುತ್ತಿತ್ತು. ರಾತ್ರಿ ಗಸ್ತು ಮಾಡುತ್ತಿದ್ದ 112 ಪೊಲೀಸರು ಬಸ್ ಗೆ ಬೆಂಕಿ ಹೊತ್ತಿಕೊಂಡಿರೋದು ಕಂಡು ಆಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ :ಮ್ಯಾನ್ಮಾರ್​ ಭೂಕಂಪ: ಮೃತರ ಸಂಖ್ಯೆ 1,700ಕ್ಕೆ ಏರಿಕೆ

Donate Janashakthi Media

Leave a Reply

Your email address will not be published. Required fields are marked *