ನವದೆಹಲಿ: ಇಂದು ಸಂಜೆ 5 ಗಂಟೆಗೆ ದೇಶದ ಜನರನ್ನ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಈ ಕುರಿತು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಯಾವ ವಿಚಾರದ ಬಗ್ಗೆ ಮೋದಿ ಮಾತನಾಡಲಿದ್ದಾರೆ ಅನ್ನೋದನ್ನ ಟ್ವೀಟ್ನಲ್ಲಿ ಸ್ಪಷ್ಟಪಡಿಸಿಲ್ಲ.
Prime Minister Shri @narendramodi will address the nation at 5 PM today, 7th June.
— PMO India (@PMOIndia) June 7, 2021
ಈ ಹಿಂದೆ ದೇಶಾದ್ಯಂತ ಲಾಕ್ಡೌನ್ ಹೇರಿಕೆ ಸಂದರ್ಭಗಳಲ್ಲಿ ಹಾಗೂ ವ್ಯಾಕ್ಸಿನೇಷನ್ ಮತ್ತು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಲು ಮೋದಿ ದೇಶವನ್ನುದ್ದೇಶಿಸಿ ಹಲವು ಬಾರಿ ಮಾತನಾಡಿದ್ರು.
ಈಗ ಕಳೆದ ಏಪ್ರಿಲ್ ಹಾಗೂ ಮೇನಲ್ಲಿ ದೇಶದಲ್ಲಿ ಉಲ್ಬಣಗೊಂಡಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಕ್ರಮೇಣವಾಗಿ ಕೊರೊನಾ ಎರಡನೇ ಅಲೆ ಇಳಿಯುತ್ತಿದೆ. ಆದರೆ ಪೆಟ್ರೋಲ್, ಡೀಸೈಲ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ದರ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಜಿಡಿಪಿ ದರವೂ ಕುಸಿತ ಕಂಡಿದ್ದು, ಈ ಸಂದರ್ಭದಲ್ಲಿ ಮೋದಿ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಲು ಮುಂದಾಗಿದ್ದು, ಇಂದು ಅವರು ಯಾವ ವಿಚಾರವಾಗಿ ಮಾತನಾಡಲಿದ್ದಾರೆ, ಈ ಭಾಷಣದಲ್ಲಾದರೂ ಸಂಕಷ್ಟದಲ್ಲಿರುವ ಜನರಿಗೆ ಕೋವಿಡ್ ಪ್ಯಾಕೇಜ್ ಘೋಷಿಸಿಬಹುದಾ ಅಥವಾ ಹಿಂದಿನ ಭಾಷಣೆಗಳಂತೆ ಇದು ಕೇವಲ ಮಾತಾಗಿ ಹೋಗಿಬಿಡಬಹುದಾ?! ಎಂಬುದು ಜನರಲ್ಲಿ ಕುತೂಹಲ ಕೆರಳಿಸಿದೆ.