ಪೋಪ್‌ ಫ್ರಾನ್ಸಿಸ್‌ ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

ವ್ಯಾಟಿಕನ್ ಸಿಟಿ: ಕ್ಯಾಥೋಲಿಕ್‌ ಚರ್ಚ್‌ನ ಮುಖ್ಯಸ್ಥರಾಗಿರುವ ಪೋಪ್‌ ಫ್ರಾನ್ಸಿಸ್‌ ಅವರನ್ನು ರೋಮ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದು, ಭಾರತಕ್ಕೆ ಬರುವಂತೆ ಅವರಿಗೆ ಆಮಂತ್ರಣ ನೀಡಿದರು.

ಜಿ20 ಶೃಂಗಸಭೆ ಪ್ರಯುಕ್ತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವ್ಯಾಟಿಕನ್‌ನಲ್ಲಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪೋಪ್‌ ಫ್ರಾನ್ಸಿಸ್‌ ಸಭೆಯನ್ನು ಕೇವಲ 20 ನಿಮಿಷಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಒಂದು ಗಂಟೆ ಕಾಲ ಚರ್ಚೆ ನಡೆಯಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನು ಓದಿ: 020ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಕೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇ 24.6

“ಪೋಪ್ ಫ್ರಾನ್ಸಿಸ್ ಅವರೊಂದಿಗೆ ಅತ್ಯಂತ ಆತ್ಮೀಯ ಸಭೆ ನಡೆಸಿದ್ದೇನೆ. ಅವರೊಂದಿಗೆ ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿತು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೋವಿಡ್‌–19 ಸೇರಿದಂತೆ ಜಗತ್ತಿನ ಇತರ ವಿಚಾರಗಳ ಬಗ್ಗೆ ಈ ವೇಳೆ ಮಾತುಕತೆ ನಡೆದಿದೆ. ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ ಕಾಯ್ದುಕೊಳ್ಳುವುದೂ ಸೇರಿದಂತೆ ಹಲವು ಆಸಕ್ತಿಯ ಕ್ಷೇತ್ರಗಳ ಕುರಿತು ಚರ್ಚೆ ನಡೆದಿದೆ.

ಪ್ರಧಾನಿ ಮೋದಿ ಪೋಪ್​ ಫ್ರಾನ್ಸಿಸ್​​ ಅವರೊಂದಿಗೆ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಹೋರಾಡುವ ಬಗ್ಗೆ, ಬಡತನ ನಿರ್ಮೂಲನ ಮಾಡಲು ಇರುಬಹುದಾದ ವಿಧಾನಗಳ ಕುರಿತಾಗಿ ಚರ್ಚಿಸಿದ್ದಾರೆ. ಈ ಭೂಮಿ ಮೇಲೆ ಇನ್ನಷ್ಟು ಉತ್ತಮವಾಗಿ ಜೀವನ ನಡೆಸುವ ಕ್ರಮಗಳ ಬಗ್ಗೆಯೂ ವ್ಯಾಪಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸುತ್ತಿವೆ.

ಇದನ್ನು ಓದಿ: ಎಂಎಸ್‌ಪಿಯನ್ನು ಕಾನೂನು ವ್ಯಾಪ್ತಿಗೆ ತನ್ನಿ- ವರುಣ್ ಗಾಂಧಿ ಆಗ್ರಹ

ನಿನ್ನೆ ಬೆಳಗ್ಗೆ ರೋಮ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವ್ಯಾಟಿಕನ್​ ನಗರದಲ್ಲಿ ಪೋಪ್​ ಫ್ರಾನ್ಸಿಸ್​ರನ್ನು ಭೇಟಿಯಾದರು. ವ್ಯಾಟಿಕನ್​ ಸಿಟಿ ರೋಮ್​ನಿಂದ ಸುತ್ತುವರಿಯಲ್ಪಟ್ಟ ರಾಜ್ಯವಾಗಿದ್ದು, ರೋಮನ್​ ಕ್ಯಾಥೋಲಿಕ್​ ಚರ್ಚ್​​ನ ಪ್ರಧಾನ ಕಚೇರಿಯಿದೆ. ಇಂದು ಸಂಜೆ ನರೇಂದ್ರ ಮೋದಿಯವರು ಟರ್ಮೆ ಡಿ ಡಿಯೊಕ್ಲೆಜಿಯಾನೊಗೆ ತೆರಳಲಿದ್ದಾರೆ. ಅದಾದ ಬಳಿಕ ಜಿ20 ನಾಯಕರೊಂದಿಗೆ ಔತಣಕೂಟ ನಡೆಯಲಿದೆ.

ಫ್ರೆಂಚ್​ ಅಧ್ಯಕ್ಷ ಎಮ್ಯಾನುಯೆಲ್​ ಮ್ಯಾಕ್ರನ್​​ ಜತೆ ಸಭೆ ನಡೆಸಲಿದ್ದು, ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊರನ್ನು ಭೇಟಿಯಾಗುವರು. ಅದರೊಂದಿಗೆ ಸಿಂಗಪುರ ಪ್ರಧಾನಿ ಲೀ ಹೊಸೈನ್​​ ಲೂಂಗ್​​ರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಡಾ ಎಸ್ .ಜೈಶಂಕರ್ ಇದ್ದರು.

Donate Janashakthi Media

Leave a Reply

Your email address will not be published. Required fields are marked *