ಗಾಂಧಿನಗರ : 1995 ರಿಂದ ಗುಜರಾತ್ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ ಮೋಧಿಯವರು ಪ್ರತಿನಿಧಿಸುವ ರಾಜ್ಯ ಇದು. 1995 ರ ಬಳಿಕ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯೇ ಆಗಿಲ್ಲ. ಆದ್ರೆ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 2023 ರಲ್ಲಿ ಅನುಮತಿ ನೀಡಲಾಗಿದೆ ಅಂತ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಎರಡು ವರ್ಷಗಳಲ್ಲಿ 508 ಹೊಸ ನರ್ಸಿಂಗ್ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಒಂದು ಮಾತ್ರ ರಾಜ್ಯ ಸರ್ಕಾರದ ಉಪಕ್ರಮದಲ್ಲಿದೆ ಅಂತ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ತನ್ನ ವರದಿಯಲ್ಲಿ ಹೇಳಿದೆ. ಪ್ರಧಾನಿ
ಕಳೆದ ಗುರುವಾರ ಫೆಬ್ರವರಿ 29 ರಂದು ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಅಮಿತ್ ಚಾವ್ಡಾ ಅವರು ಕೇಳಿರೋ ಪ್ರಶ್ನೆಗೆ ಉತ್ತರಿಸಿರುವ ಬಿಜೆಪಿ, ರಾಜ್ಯದಲ್ಲಿ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದೆ. ಮೊದಲನೆಯದನ್ನು 1871 ರಲ್ಲಿ ಅಹಮದಾಬಾದ್ನಲ್ಲಿ 2022 ಅಥವಾ 2023 ರಲ್ಲಿ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಅನುಮೋದಿಸಲಾಗಿಲ್ಲ, ಆದರೆ ಕಳೆದ ವರ್ಷ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ. 2022 ರಲ್ಲಿ, “ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ (ಗುಜರಾತ್ ಸರ್ಕಾರದ ನೋಂದಾಯಿತ ಟ್ರಸ್ಟ್) ನಡೆಸುತ್ತಿರುವ ಐದು ವೈದ್ಯಕೀಯ ಕಾಲೇಜುಗಳು ಸರ್ಕಾರದ ಅನುಮೋದನೆಯನ್ನು ಪಡೆದಿವೆ”. ಅಲ್ಲದೆ, “ಕಳೆದ ಎರಡು ವರ್ಷಗಳಲ್ಲಿ, ಆಯುರ್ವೇದ ಮತ್ತು ಹೋಮಿಯೋಪತಿ ಪದವಿಗಾಗಿ ಯಾವುದೇ ಹೊಸ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳನ್ನು ರಾಜ್ಯದಲ್ಲಿ ಮಂಜೂರು ಮಾಡಲಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಪ್ರಧಾನಿ
ಕಾಂಗ್ರೆಸ್ ಶಾಸಕ ಗನಿಬೆನ್ ಠಾಕೂರ್ ಕೇಳಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ಬಿಜೆಪಿ, ತಮ್ಮ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 508 ಹೊಸ ನರ್ಸಿಂಗ್ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯಲಾಗಿದೆ. ಆದ್ರೆ ಅದ್ರಲ್ಲಿ 508 ರಲ್ಲಿ ಕೇವಲ ಒಂದು ಸಾರ್ವಜನಿಕ ನರ್ಸಿಂಗ್ ಸಂಸ್ಥೆಯಾಗಿದೆ ಎಂದು ಹೇಳಿದೆ. ಉಳಿದ 507 ಎಲ್ಲಾ ಖಾಸಗಿ ಕಾಲೇಜುಗಳಾಗಿವೆ.2023-24ರಲ್ಲಿ ಸ್ಥಾಪಿತವಾದ ಒಟ್ಟು 315 ಸಂಸ್ಥೆಗಳಲ್ಲಿ ಕೇವಲ ಒಂದು, MSC ನರ್ಸಿಂಗ್ ಸರ್ಕಾರಿ ಕಾಲೇಜು ಮಾತ್ರ ಸರ್ಕಾರದಿಂದ ನಡೆಸಲ್ಪಡುತ್ತಿತ್ತು.ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಅಂತ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಹೇಳಿದ್ದಾರೆ. ಪ್ರಧಾನಿ
ಇದನ್ನು ಓದಿ : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿರುವುದು ಎಫ್ ಎಸ್ ಎಲ್ ನಲ್ಲಿ ಸಾಬೀತು: ಡಾ. ಜಿ ಪರಮೇಶ್ವರ್
“2027 ರ ವೇಳೆಗೆ, ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು 12,200 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ”. ಪ್ರಧಾನಿ
ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ವೈದ್ಯರಾಗಲು ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳ ಶುಲ್ಕ ಕಡಿಮೆ ಇರಬೇಕು, ಆದರೆ ಗುಜರಾತ್ ಸರ್ಕಾರವು ಕಳೆದ 29 ವರ್ಷಗಳಲ್ಲಿ ಯಾವುದೇ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿಲ್ಲ ಏಕೆಂದರೆ ಈ ಸರ್ಕಾರವು ಶ್ರೀಮಂತರಿಗೆ ಮಾತ್ರ ಕಾಳಜಿ ವಹಿಸುತ್ತದೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ವೈದ್ಯರಾಗಲು ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳ ಶುಲ್ಕ ಕಡಿಮೆ ಇರಬೇಕು. ಆದ್ರೆ ಗುಜರಾತ್ ಸರ್ಕಾರವು ಕಳೆದ 29 ವರ್ಷಗಳಲ್ಲಿ ಯಾವುದೇ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿಲ್ಲ . ಏಕೆಂದರೆ ಈ ಸರ್ಕಾರವು ಶ್ರೀಮಂತರಿಗೆ ಮಾತ್ರ ಕಾಳಜಿ ವಹಿಸುತ್ತದೆ ಮತ್ತು ಕೈಗಾರಿಕೋದ್ಯಮಿಗಳು,” ಮತ್ತು ಕೊನೆಯದಾಗಿ 1995 ರಲ್ಲಿ ಭಾವನಗರದಲ್ಲಿ ಸ್ಥಾಪಿಸಲಾಯಿತು ಅಂತ ಆರೋಗ್ಯ ಸಚಿವರು ಆಗಿರೋ ಎಂದು ಗುಜರಾತ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಮಿತ್ ಚಾವ್ಡಾ ಉಲ್ಲೇಖಿಸಿದ್ದಾರೆ.
ದೇಶಾದ್ಯಂತ, ಕೆಲವೇ ವಾರಗಳಲ್ಲಿ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವಾಗ, ಬಿಜೆಪಿ ಸರ್ಕಾರವು ತನ್ನ ಪ್ರಚಾರವನ್ನು ಹೆಚ್ಚಿಸಿದೆ ಆದರೆ ಎಷ್ಟು ಸಾರ್ವಜನಿಕ ವೈದ್ಯಕೀಯ ಸಂಸ್ಥೆಗಳು, ವಿಶೇಷವಾಗಿ AIIMS, ಬಿಜೆಪಿ ಸರ್ಕಾರವು ನಿಖರವಾಗಿ ಎಷ್ಟು ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಸ್ಥಾಪಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಐದನ್ನು ಪ್ರಧಾನಿ ಮೋದಿ ಭಾರತದಾದ್ಯಂತ ಉದ್ಘಾಟಿಸಿದ್ದರಾದರೂ ಅವು ಎಷ್ಟು ‘ಹೊಸ’ವು ? ಗುಜರಾತ್ ಮಾಡೆಲ್ ಅಂದರೆ ಖಾಸಗೀಕರಣವಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ
ಇದನ್ನು ನೋಡಿ : ನೇಮಕಾತಿ ಆದೇಶ ಪತ್ರಕ್ಕೆ ಆಗ್ರಹಿಸಿ ಸಹಾಯಕ ಪ್ರಾಧ್ಯಾಪಕರಿಂದ ಅನಿರ್ಧಿಷ್ಠ ಧರಣಿ Janashakthi Media