ಕರ್ನೂಲ್ : ಸಹಪಾಠಿಯೊಬ್ಬ ಪೆನ್ಸಿಲ್ ಕದ್ದಿದ್ದಾನೆಂದು ಬಾಲಕನೊಬ್ಬ ದೂರು ನೀಡುವುದಕ್ಕಾಗಿ ಪೊಲೀಸ್ ಠಾಣೆಗೆ ಇತರೆ ಸಹಪಾಠಿಗಳೊಂದಿಗೆ ಆಗಮಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಕರ್ನೂಲ್ ಜಿಲ್ಲೆಯ ಪೇಡಾ ಕಡುಬುರು ಪೊಲೀಸ್ ಠಾಣೆಗೆ ಆಗಮಿಸಿದ ಸಣ್ಣ ಮಕ್ಕಳ ಗುಂಪೊಂದು, ಅದರಲ್ಲಿದ್ದ ಒಬ್ಬ ಬಾಲಕನು ಮತ್ತೊಬ್ಬ ಬಾಲಕನನ್ನು ಪೊಲೀಸರಿಗೆ ತೋರಿಸಿ, ಈತ ಒಂದು ವಾರದಿಂದ ತನ್ನ ಪೆನ್ಸಿಲ್ ನಿಬ್ ಕದಿಯುತಿದ್ದಾನೆ ಎಂದು ದೂರು ನೀಡುತ್ತಾನೆ.
Even Primary School Children trust #APPolice:
There is a paradigm shift in the attitude,behaviour&sensitivity of AP Police in way of giving confidence& reassurance to the people of #AP
AP Police stays as No1 in #SMARTPolicing in the country in @IPF_ORG Survey 2021 only testifies pic.twitter.com/Zs7CQoqqOI— Andhra Pradesh Police (@APPOLICE100) November 25, 2021
ನನ್ನ ಪೆನ್ಸಿಲ್ ಅನ್ನು ವಾಪಸ್ಸು ಕೊಡಿಸಬೇಕು, ಇವನಿಗೆ ಶಿಕ್ಷೆ ಕೊಡಬೇಕು, ಅಂತ ಒಂದೇ ಸಮನೆ ಪೊಲೀಸರ ಮುಂದೆ ಹಠ ಮಾಡುತ್ತಾನೆ. ಬಾಲಕನ ದೂರುಗಳನ್ನು ಆಲಿಸಿದ ಪೊಲೀಸರು, ತಪಿತಸ್ಥ ಹುಡುಗನನ್ನು ಜೈಲಿಗೆ ಕಳುಹಿಸಿದರೆ ಮುಂದೆ ಕಷ್ಟವಾಗುತ್ತದೆ ಅಂದಾಗ ದೂರು ಕೊಟ್ಟ ಹುಡುಗನ ಮನಸು ಕರಗಿ ಹೋಗುತ್ತದೆ.
ಆಗ ಪೊಲೀಸರು ಇಬ್ಬರನ್ನು ರಾಜಿ ಸಂಧಾನವನ್ನು ಮಾಡಿಸಿ ಕೈ ಕುಲಿಕಿಸುತ್ತಾರೆ. ಇದನ್ನು ನೋಡಿದ ಪೊಲೀಸರು ಇತರ ಮಕ್ಕಳೂ ನಗೆಯಾಡಿದ್ದಾರೆ.
ಈ ವಿಡಿಯೋವನ್ನು ಆಂಧ್ರಪ್ರದೇಶ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಪ್ರಾಥಮಿಕ ಶಾಲಾ ಮಕ್ಕಳೂ ಸಹ ಆಂಧ್ರಪ್ರದೇಶ ಪೊಲೀಸರನ್ನು ನಂಬುತ್ತಾರೆ: ಆಂಧ್ರಪ್ರದೇಶದ ಜನರಿಗೆ ವಿಶ್ವಾಸ ಮತ್ತು ಭರವಸೆ ನೀಡುವ ರೀತಿಯಲ್ಲಿ ಪೊಲೀಸರ ವರ್ತನೆ, ನಡವಳಿಕೆ ಮತ್ತು ಸೂಕ್ಷ್ಮತೆಯಲ್ಲಿ ಒಂದು ಮಾದರಿ ಬದಲಾವಣೆಯಾಗಿದೆ” ಎಂದು ತಮ್ಮ ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
ಮಕ್ಕಳ ಮುಗ್ಧತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಹಂಚಿಕೊಂಡಿದ್ದಾರೆ. ಈ ದೃಶ್ಯ ಸಾಕಷ್ಟು ವೈರಲ್ ಆಗುತ್ತಿದೆ.