ಏಪ್ರಿಲ್‌ 1 ರಿಂದ ಔಷಧಿಗಳ ಬೆಲೆ ದುಪ್ಪಟ್ಟು

ವದೆಹಲಿ : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗಅಯದ ಮೇಲೆ ಬರೆ ಎಳೆದಂತೆ ಏಪ್ರಿಲ್‌ 1 ರಿಂದ ಅಗತ್ಯ ಔಷಧಗಳ ಬೆಲೆ ಏರಿಕೆ ಬಿಸಿ ತಟ್ಟಲಿದೆ.ಸಾಮಾನ್ಯ ಬಳಕೆ ಔಷಧಿಗಳ ಬೆಲೆಯನ್ನು ಶೇ.12.12 ರಷ್ಟು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ.ಇದು ಈವರೆಗಿನ ಅತ್ಯಧಿಕ ಬೆಲೆ ಏರಿಕೆ ಎಂದು ಹೇಳಲಾಗಿದೆ.ಹೃದ್ರೋಗ ಔಷಧ,ನೋವು ನಿವಾರಕ,ಆಂಟಿ ಬಯೋಟಿಕ್‌,ಗಂಟಲಿಗೆ ಸಂಬಂದಿಸಿದ ಔಷಧ,ಆಂಟಿ ಫಂಗಲ್‌,ಆಂಟಿ ಸೆಪ್ಟಿಕ್‌ ಸೇರಿದಂತೆ 800 ಔಷಧಗಳ ಬೆಲೆ ಹೆಚ್ಚಳ ಆಗಲಿದೆ.

ಕಳೆದ ವರ್ಷ ಶೇ.10.76 ರಷ್ಟು ದರ ಏರಿಕೆ ಮಾಡಲಾಗಿತ್ತು, ಈ ವರ್ಷ ರಾಷ್ಟ್ರೀಯ ಔಷದ ಬೆಲೆ ನಿಯಂತ್ರಣ ಪ್ರಾಧಿಕಾರ ಶೇ.12.12 ರಷ್ಟು ಬೆಲೆ ಏರಿಕೆಗೆ ಅನುಮೋದನೆ ನೀಡಿದೆ.ಪ್ರಾಧಿಕಾರ ಬೆಲೆ ನಿಯಂತ್ರಿಸುವ 800 ಔಷಧಗಳನ್ನು ಶೆಡ್ಯೂಲ್ಡ್‌ ಡ್ರಗ್ಸ್‌ ಎಂದು ವರ್ಗೀಕರಿಸಲಾಗುತ್ತದೆ.ನಾನ್‌ ಶೆಡ್ಯೂಲ್ಡ್‌ ಔಷಧಗಳ ಬೆಲೆಗಳು ನಿಯಂತ್ರಣದಲ್ಲಿ ಇರುವುದಿಲ್ಲ.ಅವುಗಳ ಬೆಲೆಯನ್ನು ವಾರ್ಷಿಕ ಶೇ.10 ರಷ್ಟು ಹೆಚ್ಚಳ ಮಾಡಲು ಅವಕಾಶ ಇರುತ್ತದೆ.

ಇದನ್ನೂಓದಿ : ಔಷಧಿ ಬೆಲೆ ನಿಗದಿ ಅಧಿಕಾರ ಖಾಸಗಿ ಕಂಪನಿಗಳಿಗೆ: ಮಾರಾಟ ಪ್ರತಿನಿಧಿಗಳ ವಿರೋಧ

ಪ್ರಸ್ತುತ ಆರ್ಥಿಕ ಸಲಹೆಗಾರರ ಕಚೇರಿ,ಆಂತರಿಕ ವ್ಯಾಪಾರ,ಪ್ರಚಾರ ಇಲಾಖೆ,ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರದ ಮೇಲೆ ಪ್ರತಿ ವರ್ಷ ಸಗಟು ಬೆಲೆ ಸೂಚ್ಯಾಂಕವನ್ನು ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಪರಿಷ್ಕರಿಸಿ ಅದರ ಆಧಾರದ ಮೇಲೆ ಔಷಧ ಬೆಲೆ ಏರಿಕೆ ಮಾಡಲಾಗಿದೆ.

ಪ್ರಮುಖವಾಗಿ ಸಗಟು ಬೆಲೆ ಸೂಚ್ಯಂಕ ಅಥವಾ ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ (ಡಬ್ಲ್ಯೂಪಿಐ) ಭಾರೀ ಏರಿಕೆಯಾದ ಪರಿಣಾಮದಿಂದಾಗಿ ಅಗತ್ಯ ಔಷಧಿಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1, 2023ರಿಂದ ಅಗತ್ಯ ಔಷಧಿಗಳ ದರ ಏರಿಕೆಯಾಗುವ ಕಾರಣದಿಂದಾಗಿ ಜನರು ಕೆಲವು ಅಗತ್ಯ ಔಷಧಿಗಳಿಗಾಗಿ ಸಾಮಾನ್ಯವಾಗಿ ಪಾವತಿ ಮಾಡುತ್ತಿದ್ದ ಮೊತ್ತಕ್ಕಿಂತ ಇನ್ನು ಮುಂದೆ ಅಧಿಕ ಮೊತ್ತವನ್ನು ಪಾವತಿ ಮಾಡಬೇಕಾಗಿ ಬರುತ್ತದೆ. ಪ್ರಮುಖವಾಗಿ ಜನರು ಹೆಚ್ಚಾಗಿ ಬಳಕೆ ಮಾಡುವಂತಹ ಅಗತ್ಯ ಔಷಧಿಯಾದ ಪೇನ್‌ಕಿಲ್ಲರ್ (ನೋವು ನಿರೋಧಕ ಔಷಧಿ), ಆಂಟಿ-ಇನ್‌ಫೆಕ್ಷನ್ ಔಷಧಿ, ಹೃದಯ ಕಾಯಿಲೆಗಳಿಗೆ ಬಳಸುವ ಔಷಧಿಗಳು ಹಾಗೂ ಆಂಟಿ ಬಯೋಟಿಕ್‌ಗಳ (ಸೋಂಕು ನಿರೋಧಕ ಔಷಧಿ) ದರವು ಏಪ್ರಿಲ್ 1ರಿಂದ ಶೇಕಡ 12ರಷ್ಟು ಏರಿಕೆ ಕಾಣಲಿದೆ.

ಡಬ್ಲ್ಯೂಪಿಐ ಆಧಾರಿತ ನಿರ್ಧಾರ, ಏನಿದು? ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ (ಎನ್‌ಎಲ್‌ಇಎಂ) ಇರುವ ಔಷಧಿಗಳ ಬೆಲೆಗಳಲ್ಲಿ ವಾರ್ಷಿಕ ಹೆಚ್ಚಳವು ಸಗಟು ಬೆಲೆ ಸೂಚ್ಯಂಕ ಅಥವಾ ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ (ಡಬ್ಲ್ಯೂಪಿಐ) ಅನ್ನು ಆಧರಿಸಿದೆ. ಈ ಬಗ್ಗೆ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ಮಾರ್ಚ್ 25 ರಂದು ಹೇಳಿಕೆಯನ್ನು ನೀಡಿದೆ. 2022 ರ ಕ್ಯಾಲೆಂಡರ್ ವರ್ಷಕ್ಕೆ ಡಬ್ಲ್ಯೂಪಿಐನಲ್ಲಿ ವಾರ್ಷಿಕ ಬದಲಾವಣೆಯು ಶೇಕಡ 12.12ರಷ್ಟಿದೆ ಎಂದು ಹೇಳಿದೆ. ಕಳೆದ ವರ್ಷ, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (NPPA) ಸಗಟು ಬೆಲೆ ಸೂಚ್ಯಂಕದಲ್ಲಿ ಶೇಕಡ 10.7ರಷ್ಟು ಬದಲಾವಣೆಯನ್ನು ಘೋಷಣೆ ಮಾಡಿದೆ.

ಇನ್ನು ಪ್ರತಿ ವರ್ಷವೂ ಕೂಡ ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013, ಅಥವಾ ಡಿಪಿಸಿಒ, 2013ರ ಅನುಸಾರವಾಗಿ ಎನ್‌ಪಿಪಿಎ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯೂಪಿಐ) ಬದಲಾವಣೆಯನ್ನು ಪ್ರಕಟ ಮಾಡುತ್ತದೆ. ಮಾರುಕಟ್ಟಯಲ್ಲಿ ಔಷಧಿಗಳ ಕೊರತೆ ಉಂಟಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಬೆಲೆ ಏರಿಕೆಯನ್ನು ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಹಾಗೂ ಉತ್ಪಾದಕರಿಗೆ ಸರಿಯಾದ ಪ್ರಯೋಜನ ಲಭ್ಯವಾಗಲಿದೆ ಎಂದು ಕೂಡಾ ತಿಳಿಸಿದೆ

Donate Janashakthi Media

Leave a Reply

Your email address will not be published. Required fields are marked *