ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ರೂ.15ರಷ್ಟು ಬೆಲೆ ಏರಿಕೆ ಮಾಡಿರುವುದಾಗಿ ಸರ್ಕಾರಿ ತೈಲ ಕಂಪನಿಗಳು ಮಾಹಿತಿ ನೀಡಿವೆ. ಬೆಲೆ ಹೆಚ್ಚಳದಿಂದಾಗಿ ಪ್ರತಿ ಸಿಲಿಂಡರ್ ಬೆಲೆ ಸರಾಸರಿ ₹900 ಸಮೀಪಿಸಿದೆ.
ಪೆಟ್ರೋಲಿಯಂ ಕಂಪೆನಿಗಳು ಇಂಧನ ಬೆಲೆ ಏರಿಕೆ ಮಾಡುತ್ತಿದ್ದಂತೆ ಅಡುಗೆ ಅನಿಲ ಸಿಲಿಂಡರ್ ದರ ಸಹ ಏರಿಕೆ ಮಾಡಿದೆ. ನೂತನ ದರ ದೇಶಾದ್ಯಂತ ಇಂದಿನಿಂದಲೇ ಜಾರಿಗೆ ಬರಲಿದೆ.
ಇದನ್ನು ಓದಿ: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ 43ರೂ. ಹೆಚ್ಚಳ
ಈ ಹಿಂದೆ ಅಕ್ಟೋಬರ್ 1ರಂದು ಪೆಟ್ರೋಲಿಯಂ ಕಂಪೆನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 43 ರೂಪಾಯಿ ಹೆಚ್ಚಳ ಮಾಡಿದ್ದವು. ಇದೀಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.
ನವದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ₹899.50ಕ್ಕೆ ರಷ್ಟು ಇದ್ದು, 5 ಕೆಜಿ ಸಿಲಿಂಡರ್ ದರ ₹502 ಆಗಿದೆ. ಬೆಲೆ ಏರಿಕೆಯಿಂದಾಗಿ ಬೆಂಗಳೂರು ನಗರದಲ್ಲಿ ₹887.50 ದರವಿದೆ.
ನಾಲ್ಕು ಮಹಾನಗರಗಳಲ್ಲಿ ದರ ವಿವರ: ದೆಹಲಿ: ₹899.50., ಕೋಲ್ಕತ್ತಾ: ₹911 ಇಂದ ₹926 , ಮುಂಬೈ: ₹844.50 ಇಂದ ₹899.50., ಚೆನ್ನೈ: ₹915.50ರಷ್ಟು ಮೊತ್ತ ಇದೆ.
ಪೆಟ್ರೋಲಿಯಂ ದರವನ್ನು ಹೆಚ್ಚಳ ಮಾಡಲಾಗಿದೆ. ಸತತ ಎರಡನೇ ದಿನ ದರವನ್ನು ಏರಿಸಲಾಗಿದೆ. ಇಂದಿನ ದರದಂತೆ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.94 ರೂಪಾಯಿ ಮತ್ತು ಡೀಸೆಲ್ 91.42 ರೂಪಾಯಿ ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ₹106.48, ಡೀಸೆಲ್ ₹96.99 ತಲುಪಿದೆ.