ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಗ್ಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ಸಂಚಾರ ನಡೆಸಿದರು. ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ .
ಇದನ್ನೂ ಓದಿ : ಬೆಂಗಳೂರು | ಕೋಗಿಲು ಲೇ ಔಟ್ ಸ್ಲಂ ಮನೆಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ – ಎ.ಎ.ರಹೀಮ್
ಗೋವಾದಿಂದ ಬೆಳಿಗ್ಗೆ 9 ಗಂಟೆ ಸುಮಾರಿಗೆ ನೌಕಾದಲದ ವಿಶೇಷ ಹೆಲಿಕಾಪ್ಟರ್‌ನಲ್ಲಿ ನೌಕಾನೆಲೆಗೆ ಬಂದಿಳಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಬರಮಾಡಿಕೊಂಡರು.
ಬಳಿಕ ಜಲಾಂತರ್ಗಾಮಿ ನೌಕೆಯ ಬಳಿ ತೆರಳಿದ ಅವರು ನೌಕಾದಳದ ಸಿಬ್ಬಂದಿಯತ್ತ ಕೈಬೀಸುತ್ತ ಜಲಮಾಂತರ್ಗಾಮಿ ನೌಕೆಯೊಳಗೆ ತೆರಳಿದರು. ಸಮುದ್ರದ ಆಳದಲ್ಲಿ ನೌಕೆ ಸಂಚರಿಸುತ್ತಿದ್ದು, ತಾಸಿಗೂ ಹೆಚ್ಚು ಕಾಲ ರಾಷ್ಟ್ರಪತಿ ನೌಕೆಯೊಳಗೆ ಸಂಚರಿಸಲಿದ್ದಾರೆ.
ಇದನ್ನೂ ನೋಡಿ : ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ ಜೊತೆ ಮಾತುಕತೆ Janashakthi Media
