ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆಯವರ ಮೇಲೆ ನಡೆದ ಹಲ್ಲೆಗೆ ಆಕ್ರೋಶ

ದಾಂಡೇಲಿ: ದಾಂಡೇಲಿ ನಗರದ ಅಬ್ದುಲ್ ಕಲಾಮ್ ವಸತಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಹುಲಸದಾರ ಎಂಬುವರ ದುರ್ವರ್ತನೆ ಬಗ್ಗೆ ಇತ್ತಿಚಿನ ದಿನಗಳಲ್ಲಿ ವರದಿ ಬಂದಿತ್ತು. ಆ ನಂತರ ಸ್ಥಳೀಯ ಕೆಲವು ಜನಪರ ಸಂಘಗಳು ಜನಪ್ರತಿನಿಧಿಗಳು ತಾಲೂಕು ದಂಡಾಧಿಕಾರಿಗಳು ಒಳಗೊಂಡಂತೆ ಶಾಲೆಯ ಒಳಿತಿನ ದೃಷ್ಟಿಯಿಂದ ಈ ವಿಷಯದಲ್ಲಿ ಕಾಳಜಿಯಿಂದ ಮಧ್ಯಪ್ರವೇಶಿಸಿದ್ದರು ಮತ್ತು ಅಲ್ಲಿ ನಡೆಯುತ್ತಿರುವ ಹಲವಾರು ಘಟನೆ ಮತ್ತು ಬೆಳವಣಿಗೆಗಳ ಬಗ್ಗೆ ವಿಚಾರಿಸಿದ್ದರು. ಆ ವೇಳೆ ಅಲ್ಲಿನ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಅಲ್ಲಿನ ಸಿಬ್ಬಂದಿಗಳಿಂದ ಪ್ರಾಂಶುಪಾಲರ ವಿರುದ್ಧ ಸಾಕಷ್ಟು ಆರೋಪಗಳನ್ನು ಹೇಳಿದ್ದರು. ಕನ್ನಡ 

ಪ್ರಾಂಶುಪಾಲರ ದುರ್ವರ್ತನೆ, ಅಲ್ಲಿನ ಕಟ್ಟಡ ಕಾಮಗಾರಿ ವಿಚಾರದಲ್ಲಿ ಅಕ್ರಮ ಎಸಗಿದ್ದು ಮತ್ತು ತನ್ನ ಚಾರ್ಜ್ ಅನ್ನು ಕೊಡದೆ ಪ್ರಭಾರ ವಹಿಸದೇ ಏಕಾಏಕಿ ತಿಂಗಳುಗಳ ಕಾಲ ರಜೆಗೆ ತೆರಳಿದ್ದುದರಿಂದ ವಸತಿ ನಿಲಯದಲ್ಲಿ ಮಕ್ಕಳಿಗೆ ಆಹಾರ ಮತ್ತು ಇನ್ನಿತರ ಸಮಸ್ಯೆಗಳು ಎದುರಾಗಿದ್ದವು. ಅಷ್ಟೇ ಅಲ್ಲದೆ ವಿದಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ದುರ್ವರ್ತನೆಯಿಂದ ನಡೆದುಕೊಂಡಿರುವುದು ಮತ್ತು ಸಿಬ್ಬಂದಿಗಳಿಗೂ ಕಿರುಕುಳ ನೀಡಿರುವುದು ಇಂತಹ ಹತ್ತು ಹಲವು ಆರೋಪಗಳು ಕೇಳಿಬಂದಿದ್ದುವು. ಇವೆಲ್ಲವೂ ಸ್ಥಳೀಯ ದಿನಪತ್ರಿಕೆಯಲ್ಲಿ ಕೂಡ ವರದಿಯಾಗಿತ್ತು.

ಇದನ್ನು ಓದಿ : ಜಾತಿ ಗಣತಿಗೆ ಎನ್‌ಡಿಎ ಹಿಂದೇಟು ಅಸಮಾಧಾನಗೊಂಡ ನಿತೀಶ್ ಕುಮಾರ್

ಆದರೆ ದಿಢೀರನೆ ನಿನ್ನೆ ದಿನ ಏಕಾಏಕಿಯಾಗಿ ವಸತಿ ನಿಲಯಕ್ಕೆ ಬಂದು ಚಾರ್ಜ್ ತೆಗೆದುಕೊಂಡಿರುತ್ತಾರೆ. ಇವರ ಮೇಲಿನ ಆರೋಪಗಳ ಸತ್ಯಾಸತ್ಯತೆಯ ತನಿಖೆ ಆಗಿದೆಯೇ, ವರದಿ ಬಂದಿದೆಯೇ, ಅವರ ದುರ್ವರ್ತನೆ ಸಮರ್ಥನೆಗೆ ಪ್ರಾಚಾರ್ಯರು ಯಾವ ಸಮರ್ಥನೆ ನೀಡಿ ಕೆಲಸಕ್ಕೆ ಹಾಜರಾಗಿದ್ದಾರೆ ಎಂಬುದು ಜನತೆಗೂ ಪಾಲಕರಿಗೂ ವರದಿಗಾರರಿಗೂ ತಿಳಿದಿಲ್ಲ. ಇದನ್ನ ಗಮನಿಸಿದ ಕೆಲವು ಮಾದ್ಯಮದವರು, ಜನಪ್ರತಿನಿಧಿಗಳು, ಸಂಘಟಕರು ಇಂತಹ ದುರ್ವರ್ತನೆಯ ಪ್ರಾಂಶುಪಾಲರು ಈ ವಸತಿ ನಿಲಯಕ್ಕೆ ಬೇಡ ಎಂದು ಶಾಂತಿಯುತವಾಗಿ ಪ್ರತಿಭಟಿಸುವಂತಹ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ನೂರಾರು ವಿದ್ಯಾರ್ಥಿಗಳ ಮತ್ತು ಪಾಲಕರ ನೋವು, ಅವರ ಭಾವನೆಗಳನ್ನ ಅರಿಯಲಾಗದೆ ಪ್ರತಿಭಟನಾಕಾರರ ಮೇಲೆಯೇ ದೈಹಿಕವಾಗಿ ಎರಗಿ ತಳ್ಳಿ ಬಂಧನದ ಬೆದರಿಕೆ ಹಾಕಿ ದರ್ಪದಿಂದ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ವಿಶೇಷವಾಗಿ ಹಿರಿಯ ಪತ್ರಕರ್ತರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ಎನ್ ವಾಸರೆ ಅವರ ಮೇಲೆ ದಬ್ಬಾಳಿಕೆ ನಡೆಸಿ ಬಂಧನದ ಬೆದರಿಕೆ ಹಾಕಿದ್ದಾರೆ. ಇದು ಅತ್ಯಂತ ಖಂಡನಾರ್ಹ.

ಈ ಘಟನೆ ನಡೆಯುವ ಸಂದರ್ಭದಲ್ಲಿ ಸ್ವತಃ ಪೊಲೀಸ್ ಅಧಿಕಾರಿಗಳು ನಿಂತು ಪ್ರಾಂಶುಪಾಲರು ಪಲಾಯನ ಮಾಡಲು ಸಹಕರಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ.

ಈ ವೇಳೆ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕರಾದ ಡಿ ಸ್ಯಾಮ್ಸನ್ ಹಾಜರಿದ್ದರು. ಕನ್ನಡ 

ಇದನ್ನು ನೋಡಿ : ರೈತರ ಭೂಮಿ ಜಿಂದಾಲ್‌ಗೆ! ರೈತರ ಬೆನ್ನಿಗೆ ಚೂರಿ ಹಾಕಿದ ರಾಜ್ಯ ಸರ್ಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *