ರಾಜ್ಯ ಬಜೆಟ್: ಸಿದ್ಧತೆಗಳು ಆರಂಭ, ಫೆಬ್ರವರಿಯಲ್ಲಿ ಮಂಡನೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ವಿತ್ತ ವರ್ಷದ ಬಜೆಟ್‌ ಸಿದ್ಧತೆ ಪ್ರಾರಂಭಿಸಲಿದ್ದಾರೆ. ಜನವರಿ ಮೊದಲ ವಾರದಿಂದಲೇ ಬಜೆಟ್‌ ಸಿದ್ಧತಾ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಫೆಬ್ರವರಿಯಲ್ಲಿ ಆಯವ್ಯಯ ಮಂಡಿಸುವ ನಿರೀಕ್ಷೆಯಿದೆ. ರಾಜ್ಯ

ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿಂದಲೂ ನಾಯಕತ್ವದ ಸಂಬಂಧದಲ್ಲಿ ಗೊಂದಲವಿದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಿಎಂ ಮತ್ತು ಡಿಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿ ಒಗ್ಗಟ್ಟಿನ ಸಂದೇಶ ಸಾರಿದ್ದರು. ಹೈಕಮಾಂಡ್‌ ಸೂಚನೆಯಂತೆ ಸಿಎಂ ನಿವಾಸದ ಉಪಹಾರ ಕೂಟಕ್ಕೆ ಡಿಸಿಎಂ ತೆರಳಿದ್ದರು. ನಂತರ ಸಿಎಂರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು.

ಉಭಯರ ನಡುವಿನ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಕಾರಣ ಬೆಳಗಾವಿ ಅಧಿವೇಶನದ ದಾರಿ ಸುಸೂತ್ರವಾಗಿತ್ತು. ಆದರೆ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಡಿನ್ನರ್‌ ಮೀಟಿಂಗ್‌ಗಳಾಗಿದ್ದವು. ಅವಧಿ ಪೂರೈಸುವುದಾಗಿ ಸದನದಲ್ಲೆ ಸಿಎಂ ಘೋಷಿಸಿದ್ದರು. ತಮ್ಮಿಬ್ಬರ ನಡುವೆ ಒಪ್ಪಂದವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಹಾಗಾಗಿ ಬೆಳಗಾವಿ ಅಧಿವೇಶನ ಮುಗಿಯುವ ಹೊತ್ತಿಗೆ ನಾಯಕತ್ವದ ವಿಚಾರವಾಗಿ ಹೇಳಿಕೆ, ಪ್ರತಿ ಹೇಳಿಕೆಗಳ ಅಬ್ಬರ ಹೆಚ್ಚಾಗುದ್ದನ್ನು ಗಮನಿಸಿದ್ದೇವೆ.

ಇದನ್ನೂ ಓದಿ: ಸಾಂತಾಕ್ಲಾಸ್ ಸ್ಕಿಟ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ಎಎಪಿ ನಾಯಕರ ವಿರುದ್ಧ ಎಫ್ಐಆರ್

ಹೊಸ ಬಜೆಟ್‌ ಮಂಡಿಸುವ ವಿಶ್ವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಸರಕಾರ ಮತ್ತು ಪಕ್ಷದಲ್ಲಿ ಏನೇ ಗೋಜಲುಗಳಿದ್ದರೂ ಆಡಳಿತಾತ್ಮಕ ಚಟುವಟಿಕೆಯನ್ನು ಎಂದಿನಂತೆ ಮುಂದೆ ಕೊಂಡೊಯ್ಯಬೇಕಾಗುತ್ತದೆ. ಹಣಕಾಸಿನ ವಿಷಯಕ್ಕೆ ಬಂದರೆ ಸಂಪನ್ಮೂಲ ಸಂಗ್ರಹಣೆ ಬಗ್ಗೆ ವಿಶೇಷ ಒತ್ತು ಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸಿರುವ ಸಿಎಂ ಅವರು, ಚಳಿಗಾಲದ ಅಧಿವೇಶನಕ್ಕೂ ಮೊದಲೇ ತೆರಿಗೆ ಸಂಗ್ರಹಣೆ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದರು. ಸಂಪನ್ಮೂಲ ಕೋಡೀಕರಣದ ಗುರಿಯಲ್ಲಿ ರಾಜ್ಯ ಸರಿಯಾದ ದಿಕ್ಕಿನಲ್ಲಿ ಇರುವುದನ್ನು ಸದನದಲ್ಲೂ ಸ್ಪಷ್ಟ ಪಡಿಸಿದ್ದರು.

ಹೊಸ ಬಜೆಟ್‌ ಸಂಬಂಧ ಪ್ರಸ್ತಾವನೆ ಕಳುಹಿಸುವಂತೆ ಹಣಕಾಸು ಇಲಾಖೆಯಿಂದ ಈಗಾಗಲೇ ಸೂಚನೆ ನೀಡಲಾಗಿದೆ. ನಾನಾ ಇಲಾಖೆಗಳೂ ಪ್ರಸ್ತಾವನೆ ಸಿದ್ಧಪಡಿಸಿ ಹಣಕಾಸು ಇಲಾಖೆಗೆ ಕಳುಹಿಸಿ ಕೊಡುತ್ತಿವೆ.

ಜನವರಿ ಮೊದಲ ವಾರದಿಂದಲೇ ಬಜೆಟ್‌ ಕುರಿತ ಸಭೆಗಳು ಆರಂಭಗೊಳ್ಳಲಿವೆ. ಮುಖ್ಯಮಂತ್ರಿಯವರು ಹಣಕಾಸು ಇಲಾಖೆಯೊಂದಿಗೆ ಸಭೆ ನಡೆಸಿ ಸಂಪನ್ಮೂಲ ಸಂಗ್ರಹಣೆ ಸಂಬಂಧದ ಅವಲೋಕನವನ್ನು ಮತ್ತೊಮ್ಮೆ ಕೈಗೊಳ್ಳಲಿದ್ದಾರೆ. ಆ ಬಳಿಕ ಇಲಾಖಾವಾರು ಸಭೆಗಳು ನಡೆಯಲಿವೆ. ರೈತ ಸಂಘಟನೆಗಳು ಸೇರಿದಂತೆ ನಾನಾ ಸಂಘಟನೆಗಳೊಂದಿಗೂ ಸಭೆ ನಡೆಸಲಿದ್ದಾರೆ.

ಇದನ್ನೂ ನೋಡಿ: ಏನಿದು ಪರ್ಯಾಯ ರಾಜಕಾರಣ? ರಾಜ್ಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಸಿಪಿಐ(ಎಂ) Janashakthi Media

Donate Janashakthi Media

Leave a Reply

Your email address will not be published. Required fields are marked *