ಮಧ್ಯಪ್ರದೇಶ| ಗರ್ಭಿಣಿ ಮಹಿಳೆಯ ಚಿಕಿತ್ಸೆ ನಿರಾಕರಣೆ; ನವಜಾತ ಶಿಶು ಸಾವು

ಮಧ್ಯಪ್ರದೇಶ: ರಾಜ್ಯ ರತ್ಲಂ ಜಿಲ್ಲೆಯ ಸೈಲಾನಾ ಪಟ್ಟಣದಲ್ಲಿ  ಗರ್ಭಿಣಿ ಮಹಿಳೆಗೆ ಎರಡು ಬಾರಿ ಆರೋಗ್ಯ ಕೇಂದ್ರದಿಂದ ಚಿಕಿತ್ಸೆ ನಿರಾಕರಿಸಿದ ಪರಿಣಾ, ನವಜಾತ ಶಿಶು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಸಂಭವಿಸಿದೆ.

ಕೃಷ್ಣ ಗ್ವಾಲಾ ಮಾರ್ಚ್ 23 ರಂದು ಬೆಳಿಗ್ಗೆ 9 ಗಂಟೆಗೆ ತಮ್ಮ ಪತ್ನಿ ನೀತು ರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಮಧ್ಯಪ್ರದೇಶ

ಅಲ್ಲಿ ನರ್ಸ್, ಹೆರಿಗೆಗೆ ಇನ್ನೂ ಎರಡು ಮೂರು ದಿನಗಳಿವೆ ಎಂದು ಹೇಳಿ ವಾಪಸ್ ಕಳುಹಿಸಿದರು. ರಾತ್ರಿ 1 ಗಂಟೆಗೆ ನೀತುಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಾಗ, ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: ಕರ್ನಾಟಕ | ಸೊರಗುತ್ತಿರುವ ಸಾರ್ವಜನಿಕ ಆರೋಗ್ಯ

ಆದರೆ ಈ ಬಾರಿ ಪರೀಕ್ಷೆಯ ನಂತರ ನರ್ಸ್ ನೀತು ಅವರನ್ನು ದಾಖಲಿಸಲು ನಿರಾಕರಿಸಿದರು ಮತ್ತು ಹೆರಿಗೆ 15 ಗಂಟೆಗಳ ನಂತರ ನಡೆಯುತ್ತದೆ ಎಂದು ಹೇಳಿದರು. ಇದರಿಂದ ದಂಪತಿ ಮನೆಗೆ ಮರಳಿದರು.

ಆದರೆ, ಸ್ವಲ್ಪ ಸಮಯದ ನಂತರ ನೀತುಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಾಗ, ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯ ಪತಿ ಆಕೆಯನ್ನು ಬಂಡಿಯಲ್ಲಿ ಮೂರನೇ ಬಾರಿಗೆ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಾರ್ಗಮಧ್ಯೆ ಬೆಳಿಗ್ಗೆ 3 ಗಂಟೆಗೆ ಹೆರಿಗೆಯಾಯಿತು. ಇದರಿಂದ ನವಜಾತ ಶಿಶು ಸಾವನ್ನಪ್ಪಿದ್ದು, ಗರ್ಭಿಣಿ ಮಹಿಳೆಯನ್ನು ಬಂಡಿಯಲ್ಲಿ ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿನ ತನಿಖೆಯಲ್ಲಿ ಕರ್ತವ್ಯ ಲೋಪ ಕಂಡುಬಂದಿದೆ. ಸೈಲಾನಾ ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ಡಾ. ಪಿಸಿ ಕೋಲಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಇದಲ್ಲದೆ, ಕರ್ತವ್ಯದಲ್ಲಿದ್ದ ವೈದ್ಯ ಶೈಲೇಶ್ ಡಾಂಗೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಸೇವೆಗಳ ಆಯುಕ್ತರಿಗೆ ಪತ್ರ ಕಳುಹಿಸಲಾಗಿದೆ. ಇದಲ್ಲದೆ, ನರ್ಸಿಂಗ್ ಅಧಿಕಾರಿ ಚೇತನಾ ಚಾರೆಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ದಂಪತಿಗಳನ್ನು ವಾಪಸ್ ಕಳುಹಿಸಿದ ನರ್ಸ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಇದನ್ನೂ ನೋಡಿ: ವಚನಾನುಭವ 24| ನಿಮ್ಮ ತೊತ್ತು ಸೇವೆಯೇ ಸಾಕು | ಗಜೇಶ ಮಸಣಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *