ಚಿಂತನ ಉತ್ತರ ಕನ್ನಡ, ಸಹಯಾನ ಕೆರೆಕೋಣ, ಸಮುದಾಯ ಕರ್ನಾಟಕ, ಚಿಗುರುಗಳು, ಕ್ರಿಯಾ ಮತ್ತು ಬಂಡಾಯ ಪ್ರಕಾಶನ ವತಿಯಿಂದ ಜಂಟಿಯಾಗಿ ಪ್ರೀತಿ ಪದಗಳ ಸಹಯಾನಿ ವಿಠ್ಠಲ ಭಂಡಾರಿ ನೆನಪಿನ ಕಾರ್ಯಕ್ರಮ ನಡೆಯಲಿದೆ. ಸಹಯಾನದ ಅಂಗಳ, ಕೆರೆಕೋಣ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ. ಇಲ್ಲಿ 2022ರ ಮೇ 7ರಂದು ಇಡೀ ದಿನ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ವಿಠ್ಠಲ ಭಂಡಾರಿ ಅವರಿಗೆ ಗೌರವ ನಮನ ಸಲ್ಲಿಕೆಯೊಂದಿಗೆ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ʻವಿಠ್ಠಲ ನೆನಪಿನ ಪುಸ್ತಕ ಮನೆ ಪ್ರಾರಂಭವಾಗಲಿದೆ. ಉದ್ಘಾಟನಾ ಮಾತುಗಳನ್ನು ರಾಜೇಂದ್ರ ಚೆನ್ನಿ ಆಡಲಿದ್ದಾರೆ. ವಿಠ್ಠಲ ನೆನಪಿನ ಮೊದಲ ಉಪನ್ಯಾಸವನ್ನು ಜಿ.ಎನ್. ದೇವಿ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಿಷ್ಣು ನಾಯ್ಕ ವಹಿಸಲಿದ್ದು, ಶಾಂತರಾಮ ನಾಯಕ, ಹಿಚ್ಕಡ, ಎಂ.ಜಿ.ಹೆಗಡೆ, ವಸಂರಾಜ ಎನ್.ಕೆ. ಉಪಸ್ಥಿತರಿರುವರು.
ಮಧ್ಯಾಹ್ನ 2.30ಕ್ಕೆ ಪ್ರೀತಿ ಪದಗಳ ಸಹಯಾನಿ ವಿಠ್ಠಲ ಭಂಡಾರಿ, ಭೂಮಿನೂ ಬೇಕು ಸ್ವಾತಂತ್ರ್ಯಾನೂ ಬೇಕು (ಡಾ. ವಿಠ್ಠಲ ಭಂಡಾರಿ), ನಟನೆಯ ಕೈಪಿಡಿ (ಶ್ರೀಪಾದ ಭಟ್) ಮೂರು ಪುಸ್ತಕಗಳು ಬಿಡುಗಡೆಯಾಗಿಲಿವೆ. ಪುಸ್ತಕ ಬಿಡುಗಡೆಯನ್ನು ಎಸ್.ಜಿ. ಸಿದ್ದರಾಮಯ್ಯ, ವಿ.ಜೆ.ಕೆ.ನಾಯರ್ ಮಾಡಲಿದ್ದು, ಸಬಿತಾ ಬನ್ನಾಡಿ, ವಿಮಲಾ ಕೆ.ಎಸ್. ಕೆ. ಪ್ರಕಾಶ್, ಮುನೀರ್ ಕಾಟಿಪಳ್ಳ, ಅವಿನಾಶ್, ಶ್ರೀಧರ ನಾಯಕ ಮಾತನಾಡಲಿದ್ದಾರೆ. ಸಂಪಾದಕರ ಮಾತುಗಳನ್ನು ಮೀನಾಕ್ಷಿ ಬಾಳಿ ಆಡಲಿದ್ದಾರೆ.
ಸಂಜೆ 4.30ಕ್ಕೆ ಸಮಾರೋಪವನ್ನು ರಹಮತ್ ತರಿಕೆರೆ ಅವರು ಮಾಡಲಿದ್ದಾರೆ. ಅತಿಥಿಗಳಾಗಿ ಕೆರಣ್ ಭಟ್, ಫಣಿರಾಜ್ ಕೆ., ಅವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ದೇವೇಂದ್ರ ಗೌಡ ವಹಿಸಿಕೊಂಡಿದ್ದಾರೆ. ಸಮಾರೋಪದಲ್ಲಿ ಇಂದಿರಾ ಭಂಡಾರಿ, ಮಾಧವಿ ಭಂಡಾರಿ, ಯಮುನಾ ಗಾಂವ್ಕರ್ ಉಪಸ್ಥಿತಲಿರುವರು.
ಸಂಜೆ 5.30ಕ್ಕೆ ತಾಳಮದ್ದಳೆ ಕಾರ್ಯಕ್ರಮವಿದೆ.