ಬೆಂಗಳೂರು ಜ 23: ನಾಳೆ ನಡೆಯಬೇಕಿದ್ದ ಎಫ್ ಡಿಎ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯದರ್ಶಿ ಜಿ. ಸತ್ಯವತಿ ಅವರು ಮಾಹಿತಿ ನೀಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ನಾಳೆ ನಡೆಯಬೇಕಿದ್ದ ಎಫ್ ಡಿಎ (ಪ್ರಥಮ ದರ್ಜೆ ಸಹಾಯಕ) ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಪರೀಕ್ಷಾ ದಿನಾಂಕವನ್ನು ನಿಗದಿ ಘೋಷಣೆ ಮಾಡುತ್ತೇವೆ ಎಂದೂ ಸತ್ಯವತಿ ಅವರು ಮಾಹಿತಿ ನೀಡಿದ್ದಾರೆ.
ಪ್ರಕರಣ ಭೇಧಿಸಿದ ಸಿಸಿಬಿ ಪೊಲೀಸರು: ಈ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಪ್ಪ, ಚಂದ್ರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಇವರಿಂದ ಮೂರು ವಾಹನ, 24 ಲಕ್ಷ ನಗದು ಸೇರಿದಂತೆ ಇತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಆರೇಳು ವರ್ಷಗಳಿಂದ ಕೆಪಿಎಸ್ಸಿ ನೇಮಕಾತಿಯ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ನಿರಂತರವಾಗಿ ಎಸ್.ಡಿ.ಎ, ಎಫ್.ಡಿ.ಎ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿವೆ. ಇದು ಪರೀಕ್ಷೆಗಳ ಮೇಲಿನ ನಂಬಿಕೆಯನ್ನು ಹೋಗಲಾಡಿಸುತ್ತಿದೆ. ಪ್ರಜಾಸತ್ತಾತ್ಮಕವಾಗಿ ನಡೆಯಬೇಕಿದ್ದ ಪರೀಕ್ಷೆಗಳ ಹಣಕ್ಕಾಗಿ ಮಾರಾಟವಾಗುತ್ತಿರುವುದು ದುರಂತ, ನಾನು ನಾಲ್ಕು ಬಾರಿ ಪರೀಕ್ಷೆ ಬರೆದಿದ್ದೇನೆ, ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಲೆ ಇದೆ. ಕೆಲ ಮಧ್ಯವರ್ತಿಗಳು ಹಣ ಪಡೆದು ಡಿವೈಸ್ ನೀಡಿ, ಅವರೇ ಮುಂದೆ ನಿಂತು ಎಲ್ಲಾ ಕೆಲಸ ಮುಗಿಸುತ್ತಾರೆ, ಸಂದರ್ಶನದ ವೇಳೆ ಎಲ್ಲವನ್ನೂ ಮುಗಿಸಿ ಬಿಡುತ್ತಾರೆ. ಅದಕ್ಕಾಗಿ 20 ಲಕ್ಷ ರೂ ಕೊಡಬೇಕು ಎಂದು ಮದ್ಯವರ್ತಿಯೊಬ್ಬರು ಸಂಪರ್ಕಿಸಿದ್ದಾಗಿ ಪರೀಕ್ಷಾ ಅಭ್ಯರ್ಥಿ ಕಿರಣ್ ಕುಮಾರ (ಹೆಸರು ಬದಲಿಸಿದೆ) ನೋವನ್ನು ತೋಡಿಕೊಂಡಿದ್ದಾರೆ.
ಎಸ್.ಎಫ್.ಐ ಖಂಡನೆ : ಪ್ರಶ್ನೆಪತ್ರಿಕೆ ಸೋರಿಕೆ ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳ ನಿರ್ಲಕ್ಷವೇ ಅಥವಾ ಕೆಲವು ಅಧಿಕಾರಿಗಳ ಹಣಕ್ಕಾಗಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿರುವ ಕುರಿತು ಹಿಂದೆ ನಡೆದ ಅನೇಕ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಹಾಗಾಗಿ ಈ ಪ್ರಶ್ನೆ ಪತ್ರಿಕೆ ದುಷ್ಕರ್ಮಿಗಳ ಕೈಗೆ ಸೇರಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ, ಏಕೆಂದರೆ ಕರ್ನಾಟಕ ಲೋಕಸೇವಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು ಅಲ್ಲಿರುವ ಅಧಿಕಾರಿಗಳು ತಾವು ಆಡಿದ್ದೆ ಆಟ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತೆ ರಾಜ್ಯದಲ್ಲಿರುವ ಹಲವಾರು ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ, ಮೋಸ, ವಂಚನೆ ಮಾಡುತ್ತಿದ್ದರೆ ಆದ್ದರಿಂದ ಒಂದು ಸ್ವತಂತ್ರ ಸಂಸ್ಥೆಯ ಅಧಿಕಾರಿಗಳನ್ನು ಸೂಕ್ತ ತನಿಖೆ ಮಾಡಲು ರಾಜ್ಯದ ಹಾಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಸಾರ್ವಜನಿಕ ಹಿತಕ್ಕಾಗಿ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯದಕ್ಕಾಗಿ ತಮ್ಮ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿಕೊಂಡು ಸ್ವಯಂಪ್ರೇರಿತವಾಗಿ ತನಿಖೆಗೆ ಮುಂದಾಗಬೇಕೆಂದು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಲ್ಲಿ ಉದ್ಯೋಗ ಆಕಾಂಕ್ಷಿಗಳು ಪರವಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಸಂಘಟನೆಯು ಮನವಿ ಮಾಡಿದೆ.
ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳನ್ನು ತಪ್ಪಿಸುತ್ತಿರುವುದು ಕಂಡುಬಂದ ಸಂದರ್ಭದಲ್ಲಿ ಹಾಗೂ ಈ ಹಿಂದೆ ನಡೆದ ಅನೇಕ ಪ್ರಶ್ನೆ ಪತ್ರಿಕೆಗಳ ಸೋರಿಕೆಯಾದ ಸಂದರ್ಭದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗದ ಕಾರಣ ಹಾಗು ಈ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಅನೇಕ ರಾಜಕೀಯ ವ್ಯಕ್ತಿಗಳ ಹಾಗೂ ಹಿರಿಯ ಅಧಿಕಾರಿಗಳ ಕೈವಾಡ ಇರುವು ಶಂಕೆ ಇಂದಾಗಿ ತಪ್ಪಿಸುತ್ತ ಧಿಕಾರಿಗಳು ರಾಜಕೀಯ ಒತ್ತಡದಿಂದಾಗಿ ಬಚಾವಾಗುತ್ತಾರೆ, ರಾಜ್ಯದಲ್ಲಿರುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ತಮ್ಮ ತಂದೆ ತಾಯಿ ಹೆಂಡತಿ ಮಕ್ಕಳು ಕುಟುಂಬ ನಿರ್ವಹಣೆಗಾಗಿ ಸರ್ಕಾರಿ ಹುದ್ದೆ ಮಾಡಬೇಕೆಂಬ ಹಂಬಲದಿಂದ ಜಾತಕ ಪಕ್ಷಿಗಳ ತರ ಸುಮಾರು ಎರಡು ಮೂರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಲಕ್ಷಾಂತರ ಯುವಕರು ತಯಾರಿಯನ್ನು ಮಾಡಿಕೊಂಡಿರುತ್ತಾರೆ, ಈ ರೀತಿಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸ್ವರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತುಂಬಾ ನಿರಾಶದಾಯಕ ವಾಗುತ್ತದೆ, ಆದರೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರನ್ನು ಎಸ್ಎಫ್ಐ ಸಂಘಟನೆ ಶ್ಲಾಘಿಸಿದೆ.
ಲಕ್ಷಾಂತರ ವಿದ್ಯಾರ್ಥಿಗಳು ಸುಮಾರು ಮೂರು ನಾಲ್ಕು ವರ್ಷಗಳಿಂದ ಅನೇಕ ಆಶಯಗಳೊಂದಿಗೆ, ಸರ್ಕಾರಿ ಹುದ್ದೆ ಪಡೆಯಬೇಕೆಂಬ ಹಂಬಲದಿಂದ, ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ನಗರಪ್ರದೇಶಗಳಲ್ಲಿ ಮನೆ ಬಾಡಿಗೆ ಮಾಡಿಕೊಂಡು ಸರಿಯಾಗಿ ಊಟ, ನೀರು, ಇಲ್ಲದೆ ವಿದ್ಯಾಭ್ಯಾಸ ಮಾಡುತ್ತಿರುವ ಅನೇಕ ಸ್ಪರ್ಧಾರ್ಥಿಗಳಿಗೆ ಅನ್ಯಾಯ ಆಗಿದೆ ಆದ್ದರಿಂದ ರಾಜ್ಯದ ಹೈಕೋರ್ಟಿನ ಹಾಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಿ ತಪ್ಪಿತಸ್ತರಿಗೆ ನ್ಯಾಯಾಂಗದ ಮೂಲಕ ಶಿಕ್ಷೆಯಾಗಲಿ ಹಾಗೂ ರಾಜ್ಯದ ಸ್ಪರ್ಧಾರ್ಥಿಗಳಿಗೆ ಒಂದು ಸ್ಪೂರ್ತಿಯಾಗಲಿ ಎಂದು ಭಾರತ ವಿದ್ಯಾರ್ಥಿ (ಎಸ.ಎಫ್.ಐ) ಸಂಘಟನೆ ಆಗ್ರಹಿಸಿದೆ.