ಪ್ರಣಬ್ ಮುಖರ್ಜಿಗೆ ರಾಹುಲ್ ಗಾಂಧಿ ಬಗ್ಗೆ ಅಸಮಾಧಾನವಿತ್ತು: ಶರ್ಮಿಷ್ಠಾ ಮುಖರ್ಜಿ

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರಂತಹ ನಾಯಕರನ್ನು ಅನರ್ಹತೆಯಿಂದ ರಕ್ಷಿಸಲು 2013 ರಲ್ಲಿ ಅಂದಿನ ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಕಸದ ಬುಟ್ಟಿಗೆ ಹಾಕಿದ್ದರ ಬಗ್ಗೆ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ದಿವಂಗತ ಮಾಜಿ ರಾಷ್ಟ್ರಪತಿ ಮತ್ತು ಕಾಂಗ್ರೆಸ್ ಹಿರಿಯ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರರೂ ಆಗಿರುವ ಶರ್ಮಿಷ್ಠಾ ಮುಖರ್ಜಿ ಅವರು ತಮ್ಮ ಮುಂಬರುವ ಪುಸ್ತಕ ‘ಇನ್ ಪ್ರಣಬ್, ಮೈ ಫಾದರ್: ಎ ಡಾಟರ್ ರಿಮೆಂಬರ್ಸ್’ ಬಗ್ಗೆ ಮಾತನಾಡುತ್ತಿದ್ದರು. ಇದರಲ್ಲಿ ಅವರ ತಂದೆಯ ದೃಷ್ಟಿಕೋನಗಳು ಮತ್ತು ಅವರ ಕೆಲವು ವೈಯಕ್ತಿಕ ವಿಚಾಗಳನ್ನು ವಿವರಿಸಲಾಗಿದೆ.

ಇದನ್ನೂ ಓದಿ: Belagavi Winter Session| ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

ರಾಹುಲ್ ಗಾಂಧಿಯವರ ಮಾತುಗಳು ರಾಜಕೀಯವಾಗಿ ಅಪಕ್ವವಾಗಿವೆ ಎಂದು ಆಕೆಯ ತಂದೆ ಹೇಳಿದ್ದಾಗಿ ತಿಳಿಸಿದ ಶರ್ಮಿಷ್ಠಾ, “ಅವರು (ಪ್ರಣಬ್ ಮುಖರ್ಜಿ) ತಾನು ಬಹುಶಃ ಗ್ರಹಿಕೆಯ ಯುದ್ಧವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಭಾವಿಸಿದ್ದರು” ಎಂದು ಹೇಳಿದ್ದಾರೆ.

2014 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಪ್ರದರ್ಶನದ ನಂತರ ರಾಹುಲ್ ಗಾಂಧಿ ಅವರು ಸಂಸತ್ತಿಗೆ ಆಗಾಗ್ಗೆ ಗೈರುಹಾಜರಾಗುತ್ತಿರುವುದರ ಬಗ್ಗೆ ಪ್ರಣಬ್ ಮುಖರ್ಜಿ ಅವರು ಅತೃಪ್ತರಾಗಿದ್ದರು ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ. “ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿಯನ್ನಾಗಿ ಮಾಡುವ ಬಗ್ಗೆ ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ” ಎಂದು ತನ್ನ ತಂದೆ ಪತ್ರಕರ್ತರೊಬ್ಬರಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಶರ್ಮಿಷ್ಠಾ ಹೇಳಿದ್ದಾರೆ.

“2004 ರಲ್ಲಿ ಸೋನಿಯಾ ಗಾಂಧಿ ತಾನು ಪ್ರಧಾನಿ ಆಗುವುದಿಲ್ಲ ಎಂದು ಹೇಳಿದ ನಂತರ, ಮಾಧ್ಯಮಗಳಲ್ಲಿ ಪ್ರಧಾನಿ ಯಾರಾಗುತ್ತಾರೆ ಎಂಬ ಬಗ್ಗೆ ಊಹಾಪೋಹಗಳು ಇದ್ದವು. ಈ ವೇಳೆ ನನ್ನ ತಂದೆ ಮತ್ತು ಮನಮೋಹನ್ ಸಿಂಗ್ ಅವರ ಹೆಸರುಗಳು ಮುನ್ನೆಲೆಗೆ ಬಂದವು. ಆಗ ನಾನು ಪ್ರಧಾನಿಯಾಗಿ ಎಂದು ಅವರನ್ನು ಉತ್ಸಾಹದಿಂದ ಕೇಳಿದೆ. ಆದರೆ ಅವರು ಬೇಡ ಎಂದಿದ್ದರು ಮತ್ತು ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ ಎಂದಿದ್ದರು” ಎಂದು ಶರ್ಮಷ್ಠಾ ಹೇಳಿದ್ದಾರೆ.

 ವಿಡಿಯೊ ನೋಡಿ: ಮಹಾಧರಣಿ | ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್‌

Donate Janashakthi Media

Leave a Reply

Your email address will not be published. Required fields are marked *