ಮೂರನೇ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಮತ್ತೆ 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಮೂರನೇ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಎಸ್‌ಐಟಿ ಪೊಲೀಸರು ಪ್ರಜ್ವಲ್ ರೇವಣ್ಣರನ್ನು 5 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹಾಸನದ ಮಾಜಿ ಸಂಸದರ ವಿರುದ್ಧ ದಾಖಲಾಗಿರುವ ಮೂರನೇ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಐದು ದಿನಗಳ ಕಸ್ಟಡಿಗೆ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡಕ್ಕೆ ಬುಧವಾರ ನೀಡಿದೆ.

ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಜೂನ್ 24 ರವರೆಗೆ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ವಶಕ್ಕೆ ನೀಡಲಾಗಿದೆ.
ಎರಡು ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಾಜಿ ಸಂಸದರನ್ನು ಕ್ರಮವಾಗಿ 10 ಮತ್ತು ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡ ಬಳಿಕ ಎಸ್‌ಐಟಿ, ಪ್ರಜ್ವಲ್ ರೇವಣ್ಣರ ಖಾಸಗಿ ಅಂಗಗಳ ವಿಶ್ಲೇಷಣೆ ಮತ್ತು ಹೋಲಿಕೆಗಾಗಿ ತಜ್ಞರ ಸಮಿತಿಯಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ. ಅಮಾನತುಗೊಂಡಿರುವ ಜೆಡಿಎಸ್‌ ನಾಯಕರೇ ರೆಕಾರ್ಡ್ ಮಾಡಿರುವ ಆಪಾದಿತ ಹಲ್ಲೆಗಳ ವಿಡೀಯೋಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳು ಮತ್ತು ತಜ್ಞರಿಂದ ವೈದ್ಯಕೀಯ ಪರೀಕ್ಷೆ ನಡೆಸುವ ಪ್ರಕ್ರಿಯೆ ತಮಗೆ ಮುಜುಗರ ಉಂಟು ಮಾಡುತ್ತಿದೆ ಎಂದು ಪ್ರಜ್ವಲ್ ರೇವಣ್ಣ ಮಂಗಳವಾರ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಎರಡು ಪ್ರಕರಣಗಳಲ್ಲಿ ಎಸ್‌ಐಟಿ ಕಸ್ಟಡಿ ತನಿಖೆಯನ್ನು ಪೂರ್ಣಗೊಳಿಸಿದೆ.

ಪೊಲೀಸ್ ಕಸ್ಟಡಿಯಲ್ಲಿ ಆರು ದಿನಗಳ ತನಿಖೆ ಪೂರ್ಣಗೊಂಡ ನಂತರ ಮಾಜಿ ಸಂಸದರನ್ನು ಮಂಗಳವಾರ ಎರಡನೇ ಪ್ರಕರಣದಲ್ಲಿ (ಮನೆ ಕೆಲಸದವರಸ ಮೇಲೆ ಅತ್ಯಾಚಾರ) 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನು ಓದಿ : ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ: ಸಿ.ಎಂ

ಪ್ರಜ್ವಲ್ ರೇವಣ್ಣ ಅವರು ಮೊದಲ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ (ತಮ್ಮ ಕುಟುಂಬದ ನಿವಾಸದಲ್ಲಿ ಅಡುಗೆಯವರ ಮೇಲೆ ಲೈಂಗಿಕ ದೌರ್ಜನ್ಯ), ಎಸ್‌ಐಟಿ ಕಸ್ಟಡಿ ತನಿಖೆಯನ್ನು ಪೂರ್ಣಗೊಳಿಸಿದೆ.

ಎರಡನೇ ಪ್ರಕರಣದಲ್ಲಿ, ಮಾಜಿ ಸಂಸದರ ವೀಡಿಯೋಗಳು ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಬಹಿರಂಗಪಡಿಸಿದ ನಂತರ ಪ್ರಜ್ವಲ್ ರೇವಣ್ಣ ಅವರ ಪೋಷಕರ ನಿರ್ದೇಶನದ ಮೇರೆಗೆ ಮನೆಕೆಲಸಗಾರರನ್ನು ಏಪ್ರಿಲ್‌ನಲ್ಲಿ ಕಿಡ್ನಾಪ್ ಮಾಡಲಾಗಿದೆ.

ಎರಡನೇ ಪ್ರಕರಣದಲ್ಲಿ ಆಪಾದಿತ ಲೈಂಗಿಕ ದೌರ್ಜನ್ಯವನ್ನು ದಾಖಲಿಸಲು ಮಾಜಿ ಸಂಸದರು ಬಳಸಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡಿರುವುದು ಪ್ರತಿ ಪ್ರಕರಣದ ತನಿಖೆಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಎಸ್‌ಐಟಿ ಉಲ್ಲೇಖಿಸಿರುವ ಕಾರಣಗಳಲ್ಲಿ ಒಂದಾಗಿದೆ.

ಏಪ್ರಿಲ್ 26 ರಂದು ಹಾಸನದಲ್ಲಿ ನಡೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಲೈಂಗಿಕ ದೃಶ್ಯವುಳ್ಳ ಪೆನ್‌ಡ್ರೈವ್‌ ವಿಡೀಯೋಗಳು ಕಾಣಿಸಿಕೊಂಡ ನಂತರ ದೇಶ ತೊರೆದಿದ್ದ ಪ್ರಜ್ವಲ್ ರೇವಣ್ಣ, ಮೇ 31 ರಂದು ಭಾರತಕ್ಕೆ ಮರಳಿದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್‌ಐಟಿಯಿಂದ ಬಂಧಿಸಲಾಯಿತು. ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪ್ರಜ್ವಲ್‌ ಸೋತಿದ್ದಾರೆ.

ಸೆಕ್ಸ್ ವಿಡೀಯೋಗಳಲ್ಲಿ ಸಿಕ್ಕಿರುವ ಪುರಾವೆಗಳ ಆಧಾರದ ಮೇಲೆ ಮತ್ತು ವಿಡೀಯೊಗಳಲ್ಲಿ ಸಿಕ್ಕ ಸಂತ್ರಸ್ತರನ್ನು ಪತ್ತೆಹಚ್ಚಿದ ನಂತರ ಎಸ್‌ಐಟಿ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದೆ.

ಇದನ್ನು ನೋಡಿ : ಬಾ ಬಾರೋ ಪ್ರಜ್ವಲ, ನಿನ್ನ ಪಾಪದ ಕೊಡ ತುಂಬೈತೆ – ಜನಪರ ಕಲಾವಿದರಿಂದ ಹಾಡುJanashakthi Media

Donate Janashakthi Media

Leave a Reply

Your email address will not be published. Required fields are marked *