“ಪ್ರಧಾನಿಗಳ ಹೇಳಿಕೆ ಘನತೆಗೆ ತಕ್ಕುದಲ್ಲ: ಬೆದರಿಕೆ ಇರುವುದು ರೈತರ ಜೀವಗಳಿಗೆ” – ಸಂಯುಕ್ತ ಕಿಸಾನ್‍ ಮೋರ್ಚಾ

ವಿಫಲವಾದ ಒಂದು ರ‍್ಯಾಲಿಗಾಗಿ ಪ್ರಧಾನ ಮಂತ್ರಿ ಮೋದಿಯವರು ಪಂಜಾಬನ್ನು ಮತ್ತು ರೈತರನ್ನು ದೂರುತ್ತಿದ್ದಾರೆ. ಅಜಯ್ ಮಿಶ್ರಾರಂತಹ ಮಂತ್ರಿಗಳು ಆರಾಮವಾಗಿ ತಿರುಗಾಡುತ್ತಿರುವಾಗ ನಿಜವಾದ ಬೆದರಿಕೆ ಇರುವುದು ರೈತರ ಜೀವಗಳಿಗೆ, ಆದರೆ  “ಹೇಗೋ ಜೀವ ಉಳಿಸಿಕೊಂಡು ಬಂದೆ” ಎಂದು ಪ್ರಧಾನಿಗಳು ಹೇಳಿದ್ದಾರೆ. ಅವರಿಂದ ಇಂತಹ ಬೇಜವಾಬ್ದಾರಿ ಹೇಳಿಕೆ, ಕನಿಷ್ಟ ಅವರ ಸ್ಥಾನದ ಘನತೆಯ ದೃಷ್ಟಿಯಿಂದಲಾದರೂ  ಬರಬಾರದಿತ್ತು ಎಂದು ಸಂಯುಕ್ತ ಕಿಸಾನ್‍ ಮೋರ್ಚಾ ಹೇಳಿದೆ.

ಪ್ರಧಾನಿಗಳ ಪಂಜಾಬ್‍ ಭೇಟಿಯ ಬಗ್ಗೆ ಪ್ರಕಟಿಸಿದಾಗ ಸಂಯುಕ್ತ ಕಿಸಾನ್‍ ಮೋರ್ಚಾದ ಹತ್ತು ಸಂಘಟನೆಗಳು ಸಾಂಕೇತಿಕ ಪ್ರತಿಭಟನೆಗಳನ್ನು ಸಂಯೋಜಿಸಿದವು. ಅಜಯ್‍ ಮಿಶ್ರ ಬಂಧನ ಸೇರಿದಂತೆ ರೈತರು ತಮ್ಮ ಬೇಡಿಕೆಗಳನ್ನು ಎತ್ತಿದರು. ಪ್ರಧಾನಿಗಳನ್ನು ಅಡ್ಡಗಟ್ಟುವ  ಅಥವ ಅವರ ರ್ಯಾಲಿಗೆ ಅಡ್ಡಿಯುಂಟು ಮಾಡುವ ಯೋಜನೆಯೇನೂ ಇರಲಿಲ್ಲ.

ರೈತರು ಈ ಮೊದಲೇ ಯೋಜಿಸಿದಂತೆ ಫಿರೋಜ್‍ಪುರ್ ಜಿಲ್ಲೆಯತ್ತ ಹೊರಟಿದ್ದಾಗ ಪೊಲೀಸರು ಅವರನ್ನು ತಡೆದರು. ಪ್ರತಿಭಟನಾಕಾರರು ಆಗ ಅಲ್ಲೇ ರಸ್ತೆಯಲ್ಲಿ ಕೂತರು. ಇದರಿಂದಾಗಿ ಫ್ಯಾರಾನ ಮೇಲ್ಸೇತುವೆ ಸೇರಿದಂತೆ ಆ ರಸ್ತೆಯಲ್ಲಿ ತಡೆಯುಂಟಾಯ್ತು. ಆದರೆ ಪ್ರತಿಭಟನಾಕಾರರಿಗೆ ಪ್ರಧಾನ ಮಂತ್ರಿಗಳು ಮತ್ತು ಅವರ ಭದ್ರತಾ ತಂಡ ಪ್ಯಾರಾನಾ ಮೇಲ್ಸೇತುವೆಯ ಮೂಲಕ  ಹಾದು ಹೋಗುತ್ತಾರೆಂಬ ಯಾವ ಮಾಹಿತಿಯೂ ಇರಲಿಲ್ಲ. ಅಲ್ಲದೆ ರೈತರು ಪ್ರಧಾನಿಗಳ ಮೋಟಾರುಸಾಲಿನತ್ತ ಚಲಿಸಲೇ ಇಲ್ಲ ಎಂದಿರುವ ಸಂಯುಕ್ತ ಕಿಸಾನ್ ಮೋರ್ಚಾ, ಪ್ರಧಾನ ಮಂತ್ರಿಗಳ ಜೀವಕ್ಕೆ ಬೆದರಿಕೆಯಿತ್ತು ಎಂಬುದು ಒಂದು ಹುಸಿ ದಾವೆ ಎಂದಿದೆ.

ವಾಸ್ತವವಾಗಿ ಪ್ರಧಾನಿಗಳ ಮೋಟಾರು ಸಾಲಿನತ್ತ ಸಾಗುತ್ತಿದ್ದವರು ಬಿಜೆಪಿಯ ಬಾವುಟಗಳನ್ನು ಹಿಡಿದಿದ್ದರು, ಮೋದಿ ಜಿಂದಾಬಾದ್‍ ಎಂದು ಕೂಗುತ್ತಿದ್ದರು ಎಂದು ತೋರಿಸುವ ವೀಡಿಯೋ ಹರಿದಾಡುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

Donate Janashakthi Media

Leave a Reply

Your email address will not be published. Required fields are marked *