ವಿಶ್ವದ ವಿವಿಧ ಘನಾವಳಿಗಳು ಮತ್ತು ವ್ಯಕ್ತಿಗಳ ಬಗ್ಗೆ ಬ್ರಿಟನ್ ಮೂಲಕ ʻಬ್ರಿಟಿಷ್ ಬಾಡ್‌ಕಾಸ್ಟಿಂಗ್ ಕಾರ್ಪೊರೇಷನ್ʼ (ಬಿಬಿಸಿ) ಸತತವಾಗಿ ವಿಶೇಷ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿ, ಪ್ರದರ್ಶಿಸಲಿದೆ. ಆದರೆ, ಕೆಲ ದಿನಗಳಿಂದ ಭಾರತದ ಸಾಕ್ಷ್ಯಚಿತ್ರದ ಕುರಿತು, ಅದರಲ್ಲೂ ಪ್ರಧಾನ ನರೇಂದ್ರ ಮೋದಿ ಕುರಿತು ಸಿದ್ಧಪಡಿಸಿರುವ ʻʻಇಂಡಿಯಾ: ದಿ ಮೋದಿ ಕ್ವಶ್ಚನ್ʼʼ ಸಾಕ್ಷ್ಯಚಿತ್ರದ ಕುರಿತು ಸಾಕಷ್ಟು ಚರ್ಚೆಗೆ ಒಳಗಾಗಿದೆ.
ಇದನ್ನು ಓದಿ: ಗುಜರಾತ್ ಹತ್ಯಾಕಾಂಡ: ಪ್ರಜಾಪ್ರಭುತ್ವದ ಬುಡವನ್ನೇ ಶಿಥಿಲಗೊಳಿಸುವ ಯತ್ನ
ಸಿನಿಮಾ ಆಗಲಿ, ಸಾಕ್ಷ್ಯಚಿತ್ರವಾಗಲಿ ಅದು ಅಸಂಖ್ಯಾತ ಜನರನ್ನು ಆಕರ್ಷಿಸುವ ಮುಖ್ಯ ಮಾಧ್ಯಮ. ಸಾಕ್ಷ್ಯಚಿತ್ರಗಳ ಒಂದು ನಿರ್ದಿಷ್ಟ ವಿಷಯದ ಬಗ್ಗೆ ವಸ್ತುನಿಷ್ಠತೆಯನ್ನು ಹೊಂದಿರುತ್ತಿದೆ. ಹಾಗೆ, ಇಡೀ ಸಾಕ್ಷ್ಯಚಿತ್ರದಲ್ಲಿ ಅದೇ ವಿಚಾರವಾಗಿ ಬಹುತೇಕ ಅಂಶಗಳನ್ನು ಒಳಗೊಂಡಿರುತ್ತದೆ ಮತ್ತು ಪರ ವಿರೋಧ ಹೇಳಿಕೆಗಳು ಹೊಂದಿರುತ್ತದೆ.
ಇಂಡಿಯಾ: ದಿ ಮೋದಿ ಕ್ವಷ್ಚನ್
ಬಿಬಿಸಿ ಸಿದ್ಧಪಡಿಸಿರುವ ಇಂಡಿಯಾ: ದಿ ಮೋದಿ ಕ್ವಷ್ಚನ್ ಸಾಕ್ಷ್ಯಚಿತ್ರವು ಎರಡು ಭಾಗ ಹೊಂದಿದೆ. 2002ರ ಗುಜರಾತ್ ಗಲಭೆ ವಿಚಾರ ಒಳಗೊಂಡಿದೆ. ಗುಜರಾತ್ ರಾಜ್ಯದಲ್ಲಿ ಅಂದು ಸಂಭವಿಸಿದ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕೈಗೊಂಡ ಪಾತ್ರದ ಬಗ್ಗೆ ಚಿತ್ರಿಸಲಾಗಿದೆ.
ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ಕುರಿತು ಇರುವ ಧೋರಣೆಯನ್ನು ಬಿಂಬಿಸಲಾಗಿದೆಯಂತೆ. 2002ರಲ್ಲಿ ಗುಜರಾತ್ ರಾಜ್ಯದಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆ ಕುರಿತ ಮಾಹಿತಿ ಇದೆಯಂತೆ. ಎಲ್ಲಕ್ಕಿಂತಾ ಹೆಚ್ಚಾಗಿ ಈ ಗಲಭೆಯಲ್ಲಿ ನರೇಂದ್ರ ಮೋದಿ ಅವರ ಪಾತ್ರದ ಬಗ್ಗೆಯೂ ಉಲ್ಲೇಖವಿದೆ. ಇನ್ನು ಗಲಭೆ ನಂತರ ನಡೆದ ತನಿಖೆಗಳ ಬಗ್ಗೆ ಕೂಡಾ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.
ಇದನ್ನು ಓದಿ: ತೀಸ್ತಾ ಬಂಧನ: ಹಲವೆಡೆಗಳಿಂದ ಖಂಡನೆ
2002ರಲ್ಲಿ ಗೋಧ್ರಾದಲ್ಲಿ 59 ಕರಸೇವಕರನ್ನು ಒಂದು ಕೋಮಿನ ಜನರು ರೈಲಿಗೆ ಬೆಂಕಿ ಹಚ್ಚಿದ್ದರು. ಬಳಿಕ ಸೇಡಿಗಾಗಿ ಇನ್ನೊಂದು ಕೋಮಿನವರು ತಿರುಗಿಬಿದ್ದಿದ್ದರು. ‘ಈ ವೇಳೆ, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪೊಲೀಸರಿಗೆ, ‘ಕ್ರಮಕೈಗೊಳ್ಳದೇ ಸುಮ್ಮನಿರಿ’ ಎಂದಿದ್ದರು. ಈ ಬಗ್ಗೆ ಬ್ರಿಟನ್ ತಂಡ ಪುರಾವೆ ಸಂಗ್ರಹಿಸಿತ್ತು’ ಎಂದು ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ.
ಇದಲ್ಲದೆ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಕೈಗೊಂಡ ಕಲಂ 370 ರದ್ದತಿ ನಿರ್ಧಾರದ ಬಗ್ಗೆಯೂ ಪ್ರಸ್ತಾಪವಿದೆ ಖುದ್ದಾಗಿ ಬಿಬಿಸಿ ಸಂಸ್ಥೆಯೇ ಹೇಳಿದೆ.
ಸಾಕ್ಷ್ಯಚಿತ್ರಕ್ಕೆ ಕೇಂದ್ರದ ವಿರೋಧ
ಇನ್ನೂ ಇಂಡಿಯಾ: ದಿ ಮೋದಿ ಕ್ವಷ್ಚನ್ ಸಾಕ್ಷ್ಯಚಿತ್ರಕ್ಕೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರವಾಗದಂತೆ ಮತ್ತು ಭಾರತದ ವ್ಯಾಪ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನವಾಗದಂತೆ ನಿರ್ಬಂಧ ಹೇರಿದೆ.
ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಸಾಕ್ಷ್ಯಚಿತ್ರ ಪ್ರಸಾರವಾಗದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ನೀಡಿದೆ. ಯೂಟ್ಯೂಬ್ ಮತ್ತು ಟ್ವಿಟ್ಟರ್ ಎರಡೂ ಆದೇಶವನ್ನು ಅನುಸರಿಸಲು ಒಪ್ಪಿಕೊಂಡಿವೆ ಎಂದು ಮೂಲಗಳು ತಿಳಿಸಿದೆ.
ಭಾರತದ ಕೆಲವರು ಸಾಕ್ಷ್ಯಚಿತ್ರ ಸಿದ್ಧಪಡಿಸಿರುವ ಬಿಬಿಸಿಗೆ, ಬ್ರಿಟಿಷ್ ಮಹನೀಯರ ಕರ್ಮಕಾಂಡಗಳ ಬಗ್ಗೆಯೂ ಸಾಕ್ಷ್ಯಚಿತ್ರ ಮಾಡುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಬಿಸಿ ಸಂಸ್ಥೆ ಸಮರ್ಥನೆ
ಗುಜರಾತ್ ಗಲಭೆ ವೇಳೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಪಾತ್ರದ ಬಗ್ಗೆ ಸಿದ್ದಪಡಿಸಿರುವ ಸಾಕ್ಷ್ಯಚಿತ್ರವನ್ನು ಬಿಬಿಸಿ ಸಮರ್ಥಿಸಿಕೊಂಡಿದೆ. ʻಸಂಶೋಧನೆ ನಡೆಸಿ ಸಂಪಾದಕೀಯ ಗುಣಮಟ್ಟ ಕಾಯ್ದುಕೊಂಡು ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದೇವೆ’ ಎಂದು ಸ್ಪಷ್ಟನೆ ನೀಡಿದೆ.
ಇದನ್ನು ಓದಿ: ಬಿಲ್ಕಿಸ್ ಬಾನೊ ಪ್ರಕರಣ; ಅತ್ಯಾಚಾರಿಗಳ ಬಿಡುಗಡೆಗೆ ಅವಕಾಶವೇ ಇಲ್ಲ…
‘ವಿಶ್ವದೆಲ್ಲೆಡೆಯ ಪ್ರಮುಖ ವಿಷಯಗಳ ಕುರಿತು ಬೆಳಕು ಚೆಲ್ಲಲು ನಾವು ಬದ್ಧರಾಗಿದ್ದೇವೆ. ಈ ಸಾಕ್ಷ್ಯಚಿತ್ರವು ಭಾರತದ ಹಿಂದೂ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಮುಸ್ಲಿಮರು ನಡುವಿನ ಉದ್ವಿಗ್ನ ಪರಿಸ್ಥಿತಿ, ಈ ಉದ್ವಿಗ್ನ ಪರಿಸ್ಥಿತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂಬಂಧ ಎಲ್ಲವೂ ಒಳಗೊಂಡಿದೆ. ಇದನ್ನು ತಯಾರಿಸುವ ವೇಳೆ ಗರಿಷ್ಠ ಮಟ್ಟದ ಸಂಪಾದಕೀಯ ಗುಣಮಟ್ಟ ಕಾಪಾಡಿಕೊಂಡು, ಕೂಲಂಕುಷವಾಗಿ ಅಧ್ಯಯನ ನಡೆಸಲಾಗಿದೆ. ಈ ಸಾಕ್ಷ್ಯಚಿತ್ರ ತಯಾರಿಸಲು ನಾವು ಸಾಕಷ್ಟು ಜನರು, ಸಾಕ್ಷಿಗಳು ಮತ್ತು ತಜ್ಞರನ್ನು ಸಂದರ್ಶಿಸಿದ್ದೇವೆ ಮತ್ತು ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ತೋರಿಸಿದ್ದೇವೆ. ಅದರಲ್ಲಿ ಬಿಜೆಪಿಯಲ್ಲಿದ್ದವರ ಪ್ರತಿಕ್ರಿಯೆಯೂ ಇದೆ. ಭಾರತ ಸರ್ಕಾರಕ್ಕೂ ತನ್ನ ಅಭಿಪ್ರಾಯ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತಾದರೂ ಅವರು ಅದನ್ನು ತಿರಸ್ಕರಿಸಿದರು’ ಎಂದು ಬಿಬಿಸಿ ತಿಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ