ಬೆಂಗಳೂರು : ಮೇ.15ರಂದು ಪ್ರಬುದ್ಧ ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವವಾಗಿ ಬಾತ್‌ರೂಮಿನಲ್ಲಿ ಪಾತ್ತೆಯಾಗಿದ್ದರು. ಈ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರ ತನಿಖೆ ವೇಳೆ ಪ್ರಬುದ್ಧಳನ್ನ ಕೊಲೆಮಾಡಿರುವುದು ಧೃಡವಾಗಿದೆ. ಈ ಹಿನ್ನಲೆ ಓರ್ವ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ಮೇ.15ರಂದು ಪ್ರಬುದ್ಧ ಶವ ಪತ್ತೆಯಾಗಿತ್ತು. ಇದನ್ನು ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಿದ್ದರು. ಆದ್ರೆ, ಮೃತದೇಹ ಪತ್ತೆಯಾದ ಮೂರು ದಿನಗಳ ನಂತರ ಮೃತ ಯುವತಿ ತಾಯಿ ಸೌಮ್ಯ ಅವರು ನೀಡಿದ ದೂರಿನ ಮೇಲೆ ಸೆಕ್ಷನ್ 302ರಡಿ ಕೊಲೆ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಭುಧ್ಯಾ ತಲೆಗೆ ಹೊಡೆದು, ಕತ್ತು ಕೊಯ್ದು, ಮುಖಕ್ಕೂ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಾಯಿ ಸೌಮ್ಯ ಆರೋಪಿಸಿದ್ದರು.
ಅಪ್ರಾಪ್ತ ಹುಡುಗ ಯಾರಿಗೂ ತಿಳಿಯದ ಹಾಗೇ ₹2 ಸಾವಿರ ಹಣವನ್ನು ಕಳ್ಳತನ ಮಾಡಿದ್ದಾನೆ. ಪ್ರಭುದ್ಯಾಗೆ ತನ್ನ ಹಣ ಎಲ್ಲಿ ಹೋಯಿತು ಎಂದು ತಿಳಿಯದೇ ಇದ್ದಾಗ ಎಲ್ಲ ಕಡೆಯೂ ಹುಡುಕಾಟ ನಡೆಸಿದ್ದಾಳೆ. ಆದರೆ, ಎಲ್ಲೂ ಸಿಕ್ಕಿಲ್ಲ. ಬಳಿಕ, ಆರೋಪಿ ಬಾಲಕನೇ ಹಣ ತೆಗೆದುಕೊಂಡಿದ್ದಾನೆ ಎಂದು ಅರಿತ ಯುವತಿ ಹಣ ವಾಪಾಸ್ ಕೊಡು ಎಂದು ಆರೋಪಿ ಬಾಲಕನನ್ನು ಮನೆಗೆ ಕರೆದು ಕೇಳಿದ್ದಾಳೆ.
ಇದನ್ನು ಓದಿ : ಕತ್ತು ಕೊಯ್ದು ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ
ಹಣ ನೀಡದೇ ಇದ್ದರೇ, ಆರೋಪಿ ಬಾಲಕನ ಪೋಷಕರಿಗೆ ತಿಳಿಸೋದಾಗಿ ಹೇಳಿದ್ದಳು. ಇದಕ್ಕೆ ಹೆದರಿದ ಬಾಲಕ ಅಪ್ಪ-ಅಮ್ಮನಿಗೆ ಹೇಳುತ್ತಾಳೆ ಎನ್ನುವ ಭಯದಲ್ಲಿ ಯುವತಿಯ ಕಾಲು ಹಿಡಿದುಕೊಂಡು ತಪ್ಪಾಯಿತು ಕ್ಷಮಿಸು ಎಂದು ಕೇಳಿದ್ದಾನೆ. ಇದೇ ನೆಪದಲ್ಲಿ ಪ್ರಭುದ್ಯಾಳನ್ನು ಜೋರಾಗಿ ಹಿಂದಕ್ಕೆ ತಳಿದ್ದಾನೆ. ಈ ವೇಳೆ, ಪ್ರಭುದ್ಯಾಳ ತಲೆಗೆ ಫ್ರೀಡ್ಜ್‌ನ ತುದಿ ಭಾಗ ತಾಕಿದೆ. ಈ ವೇಳೆ, ರಕ್ತಸ್ರಾವವಾಗಿ ಪ್ರಭುದ್ಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ.
ಪ್ರಬುದ್ಧ ಸತ್ತಿದ್ದಾಳೆ ಎಂದು ತಿಳಿದ ಬಾಲಕ ಯುವತಿಯ ದೇಹವನ್ನು ಬಾತ್‌ರೂಮ್‌ವರೆಗೂ ಎಳೆದುಕೊಂಡು ಹೋಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಬಾಲಕ ಚಾಕುವಿನಿಂದ ಯುವತಿಯ ಕೈ ಕುಯ್ದಿದ್ದಾನೆ. ರಕ್ತಸ್ರಾವ ಆಗುವವರೆಗೂ ಕಾದ ಆತ ಬಳಿಕ ಯುವತಿಯ ಕುತ್ತಿಗೆ ಕುಯ್ದಿದ್ದಾನೆ. ಈ ನಂತರ, ಹಾಲ್‌ನಲ್ಲಿ ಬಿದ್ದ ರಕ್ತದ ಕಲೆ ಹಾಗೂ ಬಾತ್‌ರೂಮ್‌ನಲ್ಲಿರುವ ರಕ್ತವನ್ನು ತಾನೇ ನೀರು ಹಾಕಿ ತೊಳೆದಿದ್ದಾನೆ. ಈ ನಂತರ ಈ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ತಾನೇ ಲೇಟರ್ ಬರೆದಿಟ್ಟು, ಪರಾರಿಯಾಗಿದ್ದ, ಇದೀಗ ಪೋಲೀಸರು ಆರೋಪಿಯಾದ ಹುಡುಗನನ್ನು ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಪ್ರಭುದ್ದಳ ಸಾವಿಗೆ ನ್ಯಾಯ ಸಿಗಬೇಕು – ಸಂಘಟನೆಗಳ ಆಕ್ರೋಶ