ಬೆಂಗಳೂರು |ಧರ್ಮಸ್ಥಳ ಪ್ರಕರಣದ SIT ವರದಿ ಸ್ವೀಕಾರ ತಾಂತ್ರಿಕ ಕಾರಣದಿಂದ ಮುಂದೂಡಿದ್ದೇವೆ -ಡಾ. ಜಿ. ಪರಮೇಶ್ವರ್

ಬೆಂಗಳೂರು: ‘ ಧರ್ಮಸ್ಥಳ ಪ್ರಕರಣದ ಎಸ್​​ಐಟಿ ತನಿಖೆಗೆ ರಾಜ್ಯ ಮಹಿಳಾ ಆಯೋಗದಿಂದ ಅಸಮಾಧಾನ ಕುರಿತಂತೆ ಪ್ರತಿಕ್ರಿಯಿಸಿದ  ಗೃಹ ಸಚಿವ ಡಾ. ಜಿ. ಪರಮೇಶ್ವರ್ ‘ತಾಂತ್ರಿಕ ಕಾರಣಗಳಿಂದ ಧರ್ಮಸ್ಥಳ ತನಿಖಾ ವರದಿ ವಿಳಂಬವಾಗಿದೆ. ಹೀಗಾಗಿ, ವರದಿ ಪಡೆಯುವುದನ್ನು ಕೆಲ ದಿನಗಳ ಕಾಲ ಮುಂದೂಡಿದ್ದೇವೆ” ಎಂದು ತಿಳಿಸಿದರು. ಬೆಂಗಳೂರು

ಇದನ್ನೂ ಓದಿ : ಪಾಟ್ನಾ | ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತ ಮತದಾನ ವಿಳಂಬಕ್ಕೆ ಆರ್‌ಜೆಡಿ ಆರೋಪ

ಮಹಿಳಾ ಆಯೋಗವು ತನಿಖೆ‌ ಮಾಡಿ ಎಂದಿದೆ. ಸಮಗ್ರ ತನಿಖೆಯಾದರೆ ಎಲ್ಲ‌ ಮಾಹಿತಿ ಗೊತ್ತಾಗುತ್ತದೆ. ಅದಕ್ಕಾಗಿ ಸಮಯ ಹಿಡಿಯಲಿದೆ. ವರದಿಯನ್ನು ಎಲ್ಲಾ ಆಯಾಮಗಳನ್ನು ನೋಡಿಯೇ ಕೊಡಬೇಕು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ” ಎಂದರು.

ಕಬ್ಬು ಬೆಳೆಗಾರರ ಹೋರಾಟ ವಿಚಾರವಾಗಿ ಮಾತನಾಡಿ, ”ಪ್ರತಿ ವರ್ಷ ಕಬ್ಬು ಬೆಲೆ ನಿಗದಿ ವಿಚಾರದ ಚರ್ಚೆ ನಡೆಯುತ್ತದೆ. ಮಹಾರಾಷ್ಟ್ರದಲ್ಲಿನ ಬೆಲೆ ಕೊಡಿ ಅಂತಿದ್ದಾರೆ. ಆದರೆ ಮಹಾರಾಷ್ಟ್ರದ ರಿಕವರಿ ಪರ್ ಟನ್ ಜಾಸ್ತಿ ಇದೆ. ಅದಕ್ಕಾಗಿ ಅಲ್ಲಿ ಬೆಲೆ ಜಾಸ್ತಿ ಕೊಡುತ್ತಾರೆ. ನಮ್ಮಲ್ಲಿ‌ ರಿಕವರಿ ಪರ್ ಟನ್ ಕಡಿಮೆ ಇದೆ. ಹಾಗಾಗಿ ಸಚಿವರೆಲ್ಲರೂ ಮಾತನಾಡಿದ್ದಾರೆ. ನಿನ್ನೆ ಚರ್ಚೆ ಮಾಡಿದರು, ಅದು ವಿಫಲವಾಗಿದೆ‌. ಇವತ್ತು ಕ್ಯಾಬಿನೆಟ್​​ ಮುಂದೆ ಬರುವ ಸಾಧ್ಯತೆ ಇದೆ‌. ರೈತರ‌ ಬಳಿ ಸಂಯಮದಿಂದ ವರ್ತಿಸಬೇಕು ಎಂದು ನಾನು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಯಾಕೆಂದರೆ ಹಿಂದೆ ಬೆಳಗಾವಿಯಲ್ಲಿ ಏನಾಯಿತು ಎಂದು ಗೊತ್ತಿದೆ. ಹಿಂದೆ ರೈತರೊಬ್ಬರು ವಿಷ ತೆಗೆದುಕೊಂಡಿದ್ದರು. ಹಾಗಾಗಿ, ಇದರ ಬಗ್ಗೆ ಕುಳಿತು ಚರ್ಚೆ ಮಾಡಬೇಕು” ಎಂದು ಹೇಳಿದರು.

 ದೆಹಲಿಗೆ ಬರಬೇಡಿ ಎಂಬ ಹೈಕಮಾಂಡ್​​ ಸೂಚನೆ ಬಗ್ಗೆ ಪ್ರತಿಕ್ರಿಯಿಸಿ, ”ಯಾರು ಹೋಗುತ್ತಾರೆ ಅಂತಾ ಗೊತ್ತಿಲ್ಲ. ಅವಶ್ಯಕತೆ ಇದ್ದರೆ ಮಾತ್ರ ನಾನು ಹೋಗುತ್ತೇನೆ. ನಮ್ಮ ಇಲಾಖೆಗೆ ಅಲ್ಲಿ ಹೆಚ್ಚಿನ ಕೆಲಸವಿಲ್ಲ. ಕೇಂದ್ರದ ನೆರವು ಏನಾದರೂ ಇದ್ದರೆ ಹೋಗುವೆ. ನಮಗೆ ವಿಶೇಷ ಅನುದಾನ ಕೊಡುವುದಿದ್ದರೆ ಹೋಗುತ್ತೇನೆ. ಕಳೆದ ಸಲ ನಾನು ದೆಹಲಿಗೆ ಹೋಗಿದ್ದೆ. ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ್ದೆ. ಪೊಲೀಸರಿಗೆ 5 ಸಾವಿರ ಮನೆ ಕಟ್ಟಿಕೊಡಲು ಕೇಳಿದ್ದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಪರಮೇಶ್ವರ್​ ತಿಳಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ವಿಚಾರಕ್ಕೆ, ”ನೀರಾವರಿಗೆ ಸಂಬಂಧಿಸಿದಂತೆ ಹೋಗಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಲು ತೆರಳಿದ್ದಾರೆ. ದೆಹಲಿಗೆ ಹೋಗುತ್ತೇನೆ ಎಂದು ನಿನ್ನೆ ಹೇಳಿದ್ದರು. ಇದರ ಬಗ್ಗೆ ಅವರೇ ಸ್ಷಷ್ಟನೆ ನೀಡಿದ್ದಾರೆ” ಎಂದು ಗೃಹ ಸಚಿವರು ತಿಳಿಸಿದರು.

ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು |ಮಹಿಳಾ ಆಯೋಗ ಮತ್ತೆ ಎಂಟ್ರಿಎಸ್‌ಐಟಿ ವಿರುದ್ಧಅಸಮಾಧಾನ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *