ರಾಯ್ಪುರ: ಕ್ರೈಸ್ತ ಧರ್ಮಕ್ಕೆ ಮತಾಂತರವಾದವರಿಗೆ ಹಾಗೂ ಧರ್ಮ ಗುರುಗಳಿಗೆ ಗ್ರಾಮಗಳಿಗೆ ಪ್ರವೇಶ ನಿರಾಕರಿಸುವ ಫಲಕಗಳನ್ನು ನಿಲ್ಲಿಸುವುದು ಅಸಾಂವಿಧಾನಿಕವಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಅಕ್ಟೋಬರ್.28ರಂದು ಹೇಳಿದೆ.
ಸ್ಥಳೀಯ ಬುಡಕಟ್ಟುಗಳು ತಮ್ಮ ಸ್ಥಳೀಯ ಸಾಂಸ್ಕೃತಿಕ ಪರಂಪರೆಯ ಹಿತಾಸಕ್ತಿಗಳನ್ನು ರಕ್ಷಿಸಲು ಈ ಫಲಕಗಳನ್ನು ನಿಲ್ಲಿಸಿವೆ ಎಂಬ ವಿಚಾರವನ್ನು ನ್ಯಾಯಪೀಠ ಗಮನಿಸಿತು.
ಇದನ್ನೂ ಓದಿ: ಆರ್ಥಿಕ ಅನುದಾನದಡಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ವಿತರಣೆ
ಆಮಿಷ ಅಥವಾ ಮೋಸದ ಮೂಲಕ ಬಲವಂತದ ಮತಾಂತರಗಳನ್ನು ತಡೆಯಲು ಈ ಫಲಕಗಳನ್ನು ಸ್ಥಾಪಿಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಕಾಂಕೇರ್ ಜಿಲ್ಲೆಯ ಘೋಟಿಯಾ ಗ್ರಾಮ ಪಂಚಾಯತಿಯಲ್ಲಿ ಫಲಕಗಳ ಅಳವಡಿಕೆ ಪ್ರಶ್ನಿಸಿ, 2 ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಅರ್ಜಿಯಲ್ಲಿ ರಾಜ್ಯದ ಇನ್ನಾವ ಗ್ರಾಮಗಳಲ್ಲಿ ಇಂತಹ ನಿಯಮಗಳನ್ನು ರೂಪಿಸಲಾಗಿದೆ ಎಂದೂ ಉಲ್ಲೇಖಿಸಲಾಗಿತ್ತು.
ಇದನ್ನೂ ನೋಡಿ: ನಿರಂಜನ |ಕ್ರಿಯಾ ಮಾಧ್ಯಮದ ಕೆಲಸ ವಿಶೇಷವಾದುದು – ಎಲ್.ಎನ್.ಮುಕುಂದರಾಜ್ Janashakthi Media
