ಬೆಂಗಳೂರು: ರಾಜ್ಯದ ಜನರಿಗೆ ಸರ್ಕಾರವು ಮೇಲಿಂದ ಮೇಲೆ ಶಾಕ್ ನೀಡುತ್ತಿದ್ದೂ, ಇದೀಗ ಸಾರಿಗೆ ಬಸ್, ಮೆಟ್ರೋ, ವಿದ್ಯುತ್ ಬೆಲೆ ಹೆಚ್ಚಿಸಿದ್ದ ಸರ್ಕಾರ , ಪ್ರತಿ ಲೀಟರ್ ಹಾಲಿನ ಬೆಲೆ ಹೆಚ್ಚಳದ ಪ್ರಸ್ತಾವ ಸ್ವೀಕರಿಸಿದೆ. ಇಂದಿನ ಸಭೆಯಲ್ಲಿ ಮನವಿ ಪುರಸ್ಕಾರಗೊಂಡರೆ, ಹಾಲಿನ ದರ ಮತ್ತಷ್ಟು ದುಬಾರಿಯಾಗಲಿದೆ. ಬೆಂಗಳೂರು
ಉಚಿತ ಯೋಜನೆಗಳ ಮಧ್ಯೆ ಬೆಲೆ ಏರಿಕೆಗೆ ತತ್ತರಿಸಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ.
ಈ ಹಿಂದೆಯು ಹಾಲಿನ ದರ ಏರಿಕೆ ಮಾಡಿ ಅದಕ್ಕೆ ತಕ್ಕಂತೆ ಹೆಚ್ಚುವರಿ ಹಾಲನ್ನು ಸೇರಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಇಂದು ಬೆಂಗಳೂರಿನಲ್ಲಿ ರಾಜ್ಯ ಹಾಲು ಉತ್ಪಾದಕರ ಮಂಡಳಿ, ಹಾಲು ಉತ್ಪಾದಕರ ಒಕ್ಕೂಟದ ಸದಸ್ಯರು ಜೊತೆಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ನ ಲೈಂಗಿಕ ದೌರ್ಜನ್ಯದ ತೀರ್ಪು ಖಂಡನೀಯ: ಮೀನಾಕ್ಷಿ ಬಾಳಿ
ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ 5 ರೂಪಾಯಿ ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ವಿವಿಧ ಕಾರಣಗಳನ್ನು ನೀಡಿ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಸದ್ಯ ಹಾಲಿನ ದರ ಏರಿಕೆ ಮಾಡಿದರೆ ಜನರಿಗೆ ಆಗುವ ಹೊರೆ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಬಸ್, ಮೆಟ್ರೋ, ವಿದ್ಯುತ್ ದರ ಏರಿಕೆಗೆ ವ್ಯಕ್ತವಾದ ಆಕ್ರೋಶ ಇದೆಲ್ಲ ಪರಿಗಣಿಸಿ ಹಾಲಿನ ದರ ಏರಿಕೆ ಮಾಡಬೇಕೋ ಬೇಡವೋ ಎಂದು ಸರ್ಕಾರ ನಿರ್ಧರಿಸಲಿದೆ.
ಇಂದೇ ಹಾಲಿನ ದರ ಏರಿಕೆ ಅಧಿಕೃತ ಘೋಷಣೆ?
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಕೆಲವು ತಿಂಗಳುಗಳ ಹಿಂದಿನಿಂದಲೂ ರಾಜ್ಯ ಸರ್ಕಾರಕ್ಕೆ ನಂದಿನ ಹಾಲಿನ ದರ ಪ್ರತಿ ಲೀಟರ್‌ಗೆ ಐದು ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡುತ್ತಲೇ ಬಂದಿತ್ತು. ಆದರೆ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಸರ್ಕಾರ. ಇದೀಗ ಹಾಲು ಉತ್ಪಾದಕರ ಮಂಡಳಿ ಸದಸ್ಯರ ಜೊತೆಗೆ ಮಹತ್ವದ ಸಭೆಗೆ ಮುಂದಾಗಿರುವುದು ದರ ಹೆಚ್ಚಳದ ಕುತೂಹಲಕ್ಕೆ ಕಾರಣವಾಗಿದೆ.
ಇಂದಿನ ಸಭೆ ಸೇರಿರುವುದು ನೋಡಿದರೆ, ರಾಜ್ಯ ಸರ್ಕಾರ ಹಾಲಿನ ದರ ಏರಿಕೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಇದರಿಂದ ಜನರಿಗೆ ಆರ್ಥಿಕ ಹೊರೆ ಆಗುವ ಸಾಧ್ಯತೆ ಇದೆ. ಜೊತೆಗೆ ಸರ್ಕಾರದ ಬೆಲೆ ಏರಿಕೆ ನಿರ್ಧಾರ, ಘೋಷಣೆ ವಿರುದ್ಧ ಜನರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ಸಾರಿಗೆ ಬಸ್, ಮೆಟ್ರೋ, ವಿದ್ಯುತ್ ದರ ಏರಿಕೆ
ಜನವರಿಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ಬಸ್ ದರವನ್ನು ಶೇಕಡಾ 15ರಷ್ಟು ಹಚ್ಚಳ ಮಾಡಿತ್ತು. ಇದಾದ ಬಳಿಕ ಬೆಂಗಳೂರು ನಮ್ಮ ಮೆಟ್ರೋ ಗರಿಷ್ಠ ದರ 60ರಿಂದ 100 ರೂಪಾಯಿವರೆಗೆ ಹೆಚ್ಚಿಸಿ ಜನರಿಗೆ ಬರೆ ನೀಡಿತು. ಮೊನ್ನೆಯಷ್ಟೇ ಪ್ರತಿ ಯೂನಿಟ್ ವಿದ್ಯುತ್ ದರದ ಮೇಲೆ ರೂ.36 ಪೈಸೆ ಹೆಚ್ಚಿಸಿ, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆದೇಶಿಸಿದೆ. ಇದರ ಬೆನ್ನಲ್ಲೆ ಹಾಲಿನ ದರ ಏರಿಕೆಗೆ ಮುಂದಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ನೋಡಿ: ಸದನದಲ್ಲಿ ‘ಹನಿ ಟ್ರ್ಯಾಪ್’ ಸದ್ದು! – ಮೀನಾಕ್ಷಿ ಬಾಳಿ, ಕೆ.ಎಸ್. ವಿಮಲಾ ಮಾತುಕತೆ Janashakthi Media