ಗ್ರೇಟರ್ ಬೆಂಗಳೂರು| 400 ವಾರ್ಡ್ ವಿಂಗಡಿಸುವ ಸಾಧ್ಯತೆ

ಬೆಂಗಳೂರು: ನಗರದ ಆಡಳಿತಕ್ಕೆ ಗ್ರೇಟರ್ ಬೆಂಗಳೂರು ಅಥಾರಿಟಿಯ ರೂಪ ನೀಡಿದ್ದ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್​​ಗಳ ಪುನರ್ ವಿಂಗಡಣೆಗೆ ಸಜ್ಜಾಗಿದೆ.  ನಗರದಲ್ಲಿರುವ 198 ವಾರ್ಡ್​ಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿರುವ ಸರ್ಕಾರ, ಇದೀಗ ಜಿಬಿಎ ಮೂಲಕ 198 ವಾರ್ಡ್​ಗಳ ಬದಲು 400 ವಾರ್ಡ್​ಗಳಾಗಿ ವಿಂಗಡಿಸುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು

ಸದ್ಯ ಸರ್ಕಾರದ ಸೂಚನೆಯಂತೆ ಜನಸಂಖ್ಯೆಯ ಆಧಾರದ ಮೇಲೆ ವಾರ್ಡ್ ವಿಂಗಡನೆಗೆ ಮುಂದಾಗಿರುವ ಜಿಬಿಎ ಅಧಿಕಾರಿಗಳು ಜಿಪಿಎಸ್ ಆಧಾರದಲ್ಲಿ ವಾರ್ಡ್​ಗಳನ್ನು ವಿಂಗಡಿಸಲು ಮುಂದಾಗಿದ್ದಾರೆ. ಬೆಂಗಳೂರು

ಇದನ್ನೂ ಓದಿ: ದೆಹಲಿ | ಕೆಂಪುಕೋಟೆಗೆ ವಾಯು ಮಾಲಿನ್ಯ ಹೆಚ್ಚಳ ಎಎಸ್‌ಐ ವಿಜ್ಞಾನಿಗಳ ತಂಡ ಶೋಧ

2011 ರ ಜನಗಣತಿಯ ಪ್ರಕಾರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್​ಗಳನ್ನು ಪುನರ್ ವಿಂಗಡನೆ ಮಾಡಲು ಹೊರಟಿರುವ ಜಿಬಿಎ, ಇದೀಗ ಕೆಲ ಮಾನದಂಡಗಳು ಹಾಗೂ ಸರ್ಕಾರ ನೀಡಿರುವ ಸಲಹೆಯಂತೆ ವಾರ್ಡ್​ಗಳನ್ನ ಪುನರ್ ರಚಿಸಲು ಹೊರಟಿದೆ.

ವಾರ್ಡ್ ಪುನರ್ ವಿಂಗಡಣೆ ಮುಖ್ಯಾಂಶಗಳೇನು?

  • 198 ವಾರ್ಡ್​ಗಳ ಬದಲು 400 ವಾರ್ಡ್​ಗಳ ರಚನೆ ಸಾಧ್ಯತೆ
  • ಜಿಪಿಎಸ್, ಜನಸಂಖ್ಯೆಯ ಆಧಾರದ ಮೇಲೆ ವಾರ್ಡ್ ಪುನರ್ ರಚನೆ
  • 4 ನಗರ ಪಾಲಿಕೆಗಳಿಗೆ 75ವಾರ್ಡ್, ಪಶ್ಚಿಮ ಪಾಲಿಕೆಗೆ 100 ವಾರ್ಡ್​ಗಳಾಗಿ ವಿಂಗಡನೆ ಸಾಧ್ಯತೆ
  • ಪ್ರತಿ ವಾರ್ಡ್​ಗೂ ಸುಮಾರು 17 ರಿಂದ 23 ಸಾವಿರ ಜನಸಂಖ್ಯೆ ನಿಗದಿ
  • 2011 ರ ಜನಗಣತಿಯ ಆಧಾರದ ಮೇಲೆ ವಾರ್ಡ್ ಪುನರ್ ರಚನೆಗೆ ಪ್ಲಾನ್

ಸದ್ಯ ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ವಿಭಾಗಗಳನ್ನ ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಿರೋ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್ ಗಳ ರಚನೆ ಬಗ್ಗೆ ಜಿಬಿಎಗೆ ಜವಬ್ದಾರಿ ನೀಡಿದೆ. ಇತ್ತ ನವೆಂಬರ್ ಒಳಗಾಗಿ ಸರ್ಕಾರದ ಮುಂದೆ ವಾರ್ಡ್ ಪುನರ್ ವಿಂಗಡನೆ ಬಗ್ಗೆ ವರದಿ ಮುಂದಿಡಲಿರೋ ಜಿಬಿಎ, ಯಾವ ರೀತಿ ವರದಿಯನ್ನ ಸರ್ಕಾರದ ಮುಂದಿಡುತ್ತೆ, ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್​ಗಳಿಗೆ ಯಾವ ರೂಪುರೇಷೆ ರೆಡಿಯಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | “ಕೊಂದವರು ಯಾರು ?” ಮಹಿಳಾ ಸಂಘಟನೆಗಳಿಂದ ಅಭಿಯಾನ Janashakthi Media

Donate Janashakthi Media

Leave a Reply

Your email address will not be published. Required fields are marked *