ಬೀದರ್: ‘ಲಿಂಗಾಯತ ಧರ್ಮ ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆ ಮಾಡಿಸುವ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದಾಗ ಎಲ್ಲರೂ ಸುಮ್ಮನಾದರು. ಒಬ್ಬರೂ ಹೋರಾಟಕ್ಕೆ ಮುಂದಾಗಲಿಲ್ಲ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಬೇಸರ ವ್ಯಕ್ತಪಡಿಸಿದರು. ಲಿಂಗಾಯತರು
“ಲಿಂಗಾಯತರು ಸುಮ್ಮನೆ ಕೈಕಟ್ಟಿ ಮೌನವಾಗಿ ಕುಳಿತರೆ ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿಲ್ಲ. ಅಂತರಂಗವನ್ನು ಗಟ್ಟಿಗೊಳಿಸಿ, ಪಣ ತೊಟ್ಟು ಹೋರಾಡಿದರೆ ಮಾತ್ರ ಪ್ರತ್ಯೇಕ ಧರ್ಮದ ಸ್ಥಾನ ಸಿಗುತ್ತದೆ. ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಿಂದಲೇ ಮತ್ತೆ ಚಳುವಳಿ ಆರಂಭವಾದರೆ ಜಯ ಶತಸಿದ್ಧ,” ಎಂದು ಹೇಳಿದರು.
ಶನಿವಾರ ನಗರದಲ್ಲಿ ನಡೆದ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ`ಲಿಂಗಾಯತ ಹೋರಾಟ: ಮುಂದೇನು?’ ಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರತ್ಯೇಕ ಧರ್ಮ ಮಾನ್ಯತೆಗೆ ಚಳುವಳಿಯನ್ನು ಮುಂದುವರೆಸದ ಲಿಂಗಾಯತರ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.
ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ: ಎನ್‌ಡಿಎಗೆ ಹಿನ್ನಡೆ
ಲಿಂಗಾಯತ ಧರ್ಮಕ್ಕಾಗಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಲಕ್ಷಾಂತರ ಜನರಿಂದ ರ್ಯಾಲಿಗಳನ್ನು ನಡೆಸಲಾಯಿತು. ಆದರೆ, ಅದನ್ನು ತಿರಸ್ಕರಿಸಿದಾಗ ಮಾತ್ರ ಜನರಲ್ಲಿ ಆ ಕಿಚ್ಚು ಕಾಣಲಿಲ್ಲ.
ನನ್ನ ನೇತೃತ್ವದ ಆಯೋಗ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ನೀಡಲು ಶಿಫಾರಸು ಮಾಡಿತ್ತು. ಅದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಕೇಂದ್ರದವರು ಕ್ಷುಲ್ಲಕ ಕಾರಣ ನೀಡಿ ಅದನ್ನು ತಿರಸ್ಕರಿಸಿದಾಗ ಎಲ್ಲರೂ ಸುಮ್ಮನಾದರು. ಒಬ್ಬರೂ ಹೋರಾಟಕ್ಕೆ ಮುಂದಾಗಲಿಲ್ಲ,’ ಎಂದು ಹೇಳಿದರು.
`ಧರ್ಮ ಮಾನ್ಯತೆಗೆ ಅಂತರಂಗವನ್ನು ಗಟ್ಟಿಗೊಳಿಸಿ, ಪಣ ತೊಟ್ಟು ಹೋರಾಡಬೇಕು. ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಿಂದಲೇ ಹೋರಾಟ ಆರಂಭವಾದರೆ ಜಯ ಶತಸಿದ್ಧ,” ಎಂದರು.
ಇದನ್ನೂ ನೋಡಿ: ಒಂದು ದೇಶ, ಒಂದು ಚುನಾವಣೆ | ಸಂವಿಧಾನದ ಮೂಲಭೂತರಚನೆಗೆ ಗಂಡಾಂತರ – ಕೆ.ಎನ್. ಉಮೇಶ್ Janashakthi Media