ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟ ಹಿನ್ನೆಲೆಯಲ್ಲಿ ನವೆಂಬರ್ 9 ರಿಂದ 18ರಿಂದ ಶಾಲೆಗಳನ್ನು ಬಂದ್ ಮಾಡುವಂತೆ ಕೇಜ್ರಿವಾಲ್ ಸರ್ಕಾರ ಆದೇಶಿಸಿದೆ.
ಮುಂದಿನ ಕೆಲವು ದಿನಗಳವರೆಗೂ ಪ್ರತಿಕೂಲ ವಾತಾವರಣ ಮುಂದುವರಿಯಲಿದೆ ಎಂದು ಮುನ್ಸೂಚನೆಯಿದೆ. ಹಾಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬುಧವಾರ ಶಿಕ್ಷಣ ನಿರ್ದೇಶನಾಲಯ ತಿಳಿಸಿದೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಚಳಿಗಾಲದ ರಜೆಯನ್ನು ಡಿಸೆಂಬರ್ ಜನವರಿಯಲ್ಲಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಹವಾಮಾನದ ವೈಪರೀತ್ಯದ ಹಿನ್ನೆಲೆ ಅವಧಿಗೂ ಮುನ್ನ ಅಂದರೆ ನವೆಂಬರ್ 9ರಿಂದ 18ವರೆಗೆ ನೀಡಲಾಗುತ್ತಿದೆ.
ಪರಿಸರ ಸಚಿವ ಗೋಪಾಲ್ ರೈ, ಶಿಕ್ಷಣ ಸಚಿವ ಅತಿಶಿ, ಸಾರಿಗೆ ಸಚಿವ ಕೈಲಾಶ್ ಗೆಹ್ಲೋತ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಅಸಮರ್ಪಕ ಬಿಸಿಯೂಟ ವಿತರಣೆ: ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಶಾಲಾ ವಿದ್ಯಾರ್ಥಿಗಳು
ಈ ಹಿಂದೆ ಪ್ರಾಥಾಮಿಕ ಶಾಲೆಗಳಿಗೆ ನ. 10ವರೆಗೆ ಮಾತ್ರ ರಜೆ ಘೋಷಿಸಿ,6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮುಖಾಂತರ ಪಾಠ ಮಾಡುವ ಅವಕಾಶ ನೀಡಲಾಗಿತ್ತು.
Delhi government announces early winter break in schools from 9th to 18th November amid severe air pollution in the national capital pic.twitter.com/g9TDdHouot
— ANI (@ANI) November 8, 2023
ವಿಡಿಯೋ ನೋಡಿ: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು Janashakthi Media