ದಿಲ್ಲಿ ವಾಯುಮಾಲಿನ್ಯ : ವಾಯು ಗುಣಮಟ್ಟದ ಕುಸಿತವು ಜನರ ಆರೋಗ್ಯದ ಹತ್ಯೆ: ಸುಪ್ರಿಂ ಕಳವಳ

ನವದೆಹಲಿ: ರಾಜಧಾನಿ ದಿಲ್ಲಿಯ ಕಳೆದ ದಿನಗಳಿಂದ ಬಹಳಷ್ಟು ತೀವ್ರ ವಾಯು ಮಾಲಿನ್ಯವನ್ನು ಎದುರಿಸುತ್ತಿದೆ. ಕುಸಿಯುತ್ತಿರುವ ವಾಯು ಗುಣಮಟ್ಟದ ಬಗ್ಗೆ ಇಂದು ಸುಪ್ರೀಂ ಕೋರ್ಟ್‌ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ, ದಿಲ್ಲಿಯ ವಾಯು ಮಾಲಿನ್ಯವು ರಾಜಕೀಯ ಯುದ್ಧವಾಗಲು ಸಾಧ್ಯವಿಲ್ಲ ಈ ವಾಯು ಗುಣಮಟ್ಟದ ಕುಸಿತವು ಜನರ ಆರೋಗ್ಯದ ಹತ್ಯೆ ಎಂದು ಹೇಳಿದೆ.‌ ವಾಯುಮಾಲಿನ್ಯ

ಪ್ರತಿ ಚಳಿಗಾಲದಲ್ಲಿ ದಿಲ್ಲಿಯ ವಾಯು ಮಾಲಿನ್ಯಕ್ಕೆ ನೆರೆಯ ಪಂಜಾಬ್‌ ಮತ್ತು ಹರ್ಯಾಣಾದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದೇ  ಕಾರಣ ಎಂದು ಹೇಳಿದ ನ್ಯಾಯಾಲಯ, ಪಂಜಾಬ್‌ ಸರ್ಕಾರಕ್ಕೆ  ಈ ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅದು ನಿಲ್ಲಬೇಕು. ನೀವು ಅದನ್ನು ಹೇಗೆ ಮಾಡುವಿರೋ ನಮಗೆ ಗೊತ್ತಿಲ್ಲ, ಅದು ನಿಮ್ಮ ಕೆಲಸ ಆದರೆ ಅದು ನಿಲ್ಲಬೇಕು.ಏನಾದರೂ ತಕ್ಷಣ ಮಾಡಬೇಕು ಎಂದು ಪಂಜಾಬ್‌ ಸರ್ಕಾರದ ವಕೀಲರಿಗೆ ನ್ಯಾಯಾಲಯ ಹೇಳಿದೆ.

ಶುಕ್ರವಾರ  ಮುಂದಿನ ವಿಚಾರಣೆ ನಡೆಯಲಿದೆ ಎಂದು ಹೇಳಿದೆ ನ್ಯಾಯಾಲಯ, ವಾಯು ಮಾಲಿನ್ಯಕ್ಕೆ ಇನ್ನೊಂದು ಕಾರಣ ಎಂದು ಹೇಳಲಾದ ವಾಹನಗಳ ಹೊರಸೂಸುವಿಕೆ ವಿಚಾರವನ್ನೂ ಪರೀಶೀಲಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: ನವಂಬರ್ 7-10: ದೇಶಾದ್ಯಂತ ಅಮೆರಿಕ–ವಿರೋಧಿ ಪ್ರತಿಭಟನೆಗೆ ಎಡಪಕ್ಷಗಳ ಕರೆ

ರಾಜಧಾನಿಯು ಕಳೆದ ದಿನಗಳಿಂದ ಬಹಳಷ್ಟು ತೀವ್ರ ವಾಯು ಮಾಲಿನ್ಯವನ್ನು ಎದುರಿಸುತ್ತಿರುವ ಕುರಿತು ದೂರಿ ದಾಖಲಾದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಅರ್ಜಿದಾರರ ಪರ ವಕೀಲೆ ಅಪರಾಜಿತಾ ಸಿಂಗ್‌ ತಮ್ಮ ವಾದ ಮಂಡನೆ ವೇಳೆ ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯನ್ನು ನಿಯಂತ್ರಿಸಲಾಗಿಲ್ಲ ಎಂದು ಹೇಳಿದರು.

ವಿಡಿಯೋ ನೋಡಿ: ಪಿಚ್ಚರ್ ಪಯಣ – 141 ಸಿನೆಮಾ : ಓಮರ್ನಿರ್ದೇಶಕ : ಹನಿ ಅಬು ಅಸಾದ್ಪ್ರಸ್ತುತಿ: ಎಮ್.ನಾಗರಾಜ ಶೆಟ್ಟಿJanashakthi Media

Donate Janashakthi Media

Leave a Reply

Your email address will not be published. Required fields are marked *