ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆ, ತಮಿಳುನಾಡು ಮತ್ತು ಉತ್ತರ ಪ್ರದೇಶದ ಒಂದು ಕ್ಷೇತ್ರಕ್ಕೆ ಉಪ ಚುನಾವಣೆಗೆ ಎರಡೇ ದಿನ ಬಾಕಿ ಇದ್ದೂ, ನಾಳಿದ್ದು ಬುಧವಾರ ಫೆಬ್ರವರಿ 5ರಂದು ಮತದಾನ ನೆಡಯಲಿದೆ. ಬೆಳಗ್ಗೆ 07 ಗಂಟೆಯಿಂದಲೇ ಬೆಳಿಗ್ಗೆ 7.00 ರಿಂದ ಸಂಜೆ 6.30 ರವರೆಗೆ ಯಾವುದೇ ಎಕ್ಸಿಟ್ ಪೋಲ್ (ಚುನಾವಣೋತ್ತರ) ಸಮೀಕ್ಷೆಗಳನ್ನು ನೀಡದಂತೆ ಕೇಂದ್ರ ಚುನಾವಣೆ ಆಯೋಗವು ನಿಷೇಧ ಹೇರಿದೆ. ತಮಿಳುನಾಡು
ಚುನಾವಣೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣೆ ಆಯೋಗಯು ಜನವರಿ 22 ರಂದು ಅಧಿಸೂಚನೆ ಹೊರಡಿಸಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳ ಅಡಿ ಮತದಾನದ ಬಳಿಕ ಸೂಚಿತ ಸಮಯದಲ್ಲಿ ಅಭಿಪ್ರಾಯ ಇನ್ನಾವುದೇ ಸಮೀಕ್ಷೆ ಪ್ರಕಟಿಸದಂತೆ ಎಚ್ಚರಿಕೆ ನೀಡಲಾಗಿದೆ. ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ಚುನಾವಣಾಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
70 ಸೀಟುಗಳು ಇರುವ ದೆಹಲಿ ವಿಧಾನಸಭಾ ಚುನಾವಣೆಯು ಒಂದೇ ಹಂತದಲ್ಲಿ ನಡೆಯಲಿದೆ. ಇದೇ ಫೆ.5ರಂದು ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ತಮಿಳುನಾಡಿನ ಈರೋಡ್ (ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಇದರ ಫಲಿತಾಂಶವನ್ನು ಫೆಬ್ರವರಿ 08ರಂದು ಬಿಡುಗಡೆಯಾಗಲಿದೆ. ತಮಿಳುನಾಡು
ಇದನ್ನೂ ಓದಿ: ನವ ಉದಾರವಾದ ಕಾರ್ಪೋರೇಟೀಕರಣದ ಮತ್ತೊಂದು ಕಡತ
ದೆಹಲಿ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲೇ ದೆಹಲಿಯಲ್ಲಿ ವಿವಿಧ ರಾಜಕೀಯ ಪಕ್ಷಗಳೂ ಪ್ರಚಾರ ಭರಾಟೆಯನ್ನು ತೀವ್ರಗೊಳಿಸಿವೆ. ಆರೋಪ ಪ್ರತ್ಯಾರೋಪಗಳಲ್ಲಿ, ವಾಗ್ದಾಳಿಗಳನ್ನು ಮುಂದುವರೆಸಿವೆ. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಮಾತನಾಡಿ, ಅರವಿಂದ್ರ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ ಇಬ್ಬರು ಭ್ರಷ್ಟಚಾರಿಗಳು ಮತ್ತು ಹೇಡಿಗಳು ಎಂದು ಟೀಕಿಸಿದ್ದರು. ಇತ್ತ ರಾಹುಲ್ ಗಾಂಧಿಯವರು, ಪ್ರಧಾನಿ ಹಾಗೂ ಕೇಜ್ರಿವಾಲ್ ಇಬ್ಬರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಫೆಬ್ರವರಿ 2ರಂದು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, “AAP-DA” ಸರ್ಕಾರ ದೆಹಲಿ ರಾಜ್ಯದಲ್ಲಿ ಕಳೆದ ಹನ್ನೊಂದು ವರ್ಷಗಳಲ್ಲಿ ದೆಹಲಿಯನ್ನು ಹಾಳು ಮಾಡಿದೆ. ಇಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಒಂದೇ ಒಂದು ಕೊಳೆಗೇರಿಯನ್ನು ಕೆಡವಲಾಗುವುದಿಲ್ಲ. ಯಾವುದೇ ಕಲ್ಯಾಣ ಯೋಜನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಮತದಾರರಿಗೆ ಭರವಸೆ ನೀಡುವ ಜೊತೆಗೆ ಎಎಪಿಗೆ ಟಕ್ಕರ್ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಮತ್ತೆ ಐದು ವರ್ಷದ ಮಹತ್ವದ ಸಮಯವನ್ನು ವ್ಯರ್ಥ ಮಾಡಲು ಎಎಪಿ ಅಧಿಕಾರ ಹಿಡಿಯಲು ಮುಂದಾಗುತ್ತಿದೆ. ಇದಕ್ಕೆ ಅವಕಾಶ ಕೊಡದೇ ಮತದಾರರು ಬಿಜೆಪಿಗೆ ಮತ ನೀಡುವಂತೆ, ಕಮಲ ಅರಳಿಸುವಂತೆ ಕೋರಿದ್ದಾರೆ. ದೆಹಲಿ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
ಇದನ್ನೂ ನೋಡಿ: ಮೋದಿ ಆಡಳಿತದಿಂದ ನಮ್ಮ ಜೀವನ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ ಎಂದ ಶೇ. 37ರಷ್ಟು ಜನಸಂಖ್ಯೆ… Janashakthi Media