ಪಟಾಕಿ ದುರಂತ : ಹಿಂದೆಯೂ ನಡೆದಿತ್ತು ,ರಾಜಕಾರಣಿಗಳ ಪ್ರಭಾವ ಬಳಸಿ ಮತ್ತೆ ಓಪನ್‌ ಮಾಡಿಸಿದ್ದ ಮಾಲೀಕ!

ಬೆಂಗಳೂರು: ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ  ಗೋದಾಮು ಮಾಲೀಕ ರಾಮಸ್ವಾಮಿನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ನಂತರ, ಹಲವು ಸ್ಫೋಟಕ ಮಾಹಿತಿಗಳು ಇದೀಗ ಬಹಿರಂಗಗೊಳ್ಳುತ್ತಿವೆ.

ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‍ಗೆ ಮಾತ್ರ ಪರವಾನಿಗೆ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡ್ತಿದ್ದ. ಪ್ರೊಸೆಸಿಂಗ್ ಯೂನಿಟ್‍ಗೆ 2028ವರೆಗೆ ಪರವಾನಿಗೆ ಇದ್ದು, ಗೋದಾಮಿಗೆ ಅನುಮತಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಗೋದಾಮು ಮಾಲೀಕ ಈ ಹಿಂದೆ ಸಾಕಷ್ಟು ಬಾರಿ ನಿಯಮಗಳನ್ನು ಗಾಳಿಗೆ ತೂರಿದ್ದು, ಈಗಲೂ ನಿಯಮಗಳನ್ನು ಮೀರಿಯೇ ಹಲವು ಕಿರಿದಾದ ಸ್ಥಳಗಳಲ್ಲಿ ಪಟಾಕಿಗಳ ಗೋದಾಮು ನಡೆಸುತ್ತಿದ್ದಾನೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಬೆಂಗಳೂರಿನ ಆನೇಕಲ್ ಬಳಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ| ಮೃತರ ಸಂಖ್ಯೆ 14ಕ್ಕೆ ಏರಿಕೆ ಪಟಾಕಿ ದುರಂತ

ಪಟಾಕಿ ದುರಂತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಈ ರೀತಿ ನಿಯಮ ಉಲ್ಲಂಘಿಸುತ್ತಿದ್ದ ಗೋದಾಮಿನ ಮಾಲೀಕನಿಗೆ ಕಳೆದ ವರ್ಷ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಅಂಗಡಿಯನ್ನು, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಪೊಲೀಸರು ಸೀಜ್ ಮಾಡಿದ್ದರು. ಆದರೆ, ರಾಜಕಾರಣಿಗಳ ಪ್ರಭಾವ ಬಳಸಿ,  3-4 ಗಂಟೆಗಳಲ್ಲೇ ಗೋದಾಮು ಮರಳಿ ಓಪನ್ ಮಾಡಿಸಿದ್ದ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.

ಈ ಗೋದಾಮಿನ ಮಾಲೀಕ ಅತ್ತಿಬೆಲೆಯಲ್ಲಿ ಅಷ್ಟೇ ಅಲ್ಲದೆ, ಚಿಕ್ಕಪೇಟೆ ಸೇರಿದಂತೆ ನಗರದ ಹಲವು ಜನನಿಬಿಡ ಪ್ರದೇಶಗಳಲ್ಲಿಯೂ ಪಟಾಕಿ ಗೋದಾಮು ನಡೆಸುತ್ತಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಫುಟ್ ಬಾಲ್ ಮೈದಾನವೇ ತುಂಬುವಷ್ಟು ಪಟಾಕಿ ಸರಕುಗಳು ಈತನ ಗೋದಾಮಿನಲ್ಲಿದ್ದು, ಅದು ಕೋಟ್ಯಾಂತರ ರುಪಾಯಿ ಮೌಲ್ಯವುಳ್ಳದ್ದಾಗಿದೆ.  1980ರಲ್ಲಿ ಈತನಿಗೆ ಸೇರಿದ 15 ಪಟಾಕಿ ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 28 ಮಂದಿ ಸಾವನ್ನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ. ಪಟಾಕಿ ದುರಂತ

ಪ್ರಸ್ತುತ ಸಂಭವಿಸಿರುವ ಅತ್ತಿಬೆಲೆ ಪಟಾಕಿ ಅಂಗಡಿ ದುರಂತದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ಕೈಚಳಕ ತೋರಿಸಿದೆ ಎಂದು ಮೂಲಗಳು ತಿಳಿಸಿವೆ. ಸಣ್ಣ ಅಂಗಡಿಗಳಿಗೆ ಪರವಾನಗಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಹಲವು ದಿನಗಳಿಂದ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಪರವಾನಗಿ ನೀಡುವಾಗ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಠಾಣೆ, ಬೆಸ್ಕಾಂ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಜೊತೆಗೆ, ಸ್ಥಳದ ಸುರಕ್ಷತೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ನೀಡಿದ ವರದಿ ಅನ್ವಯ ಪ್ರಕ್ರಿಯೆ ಮುಂದುವರಿಸಲು ನಿಯಮವಿದೆ. ಈ ನಿಯಮಗಳನ್ನು ಗಾಳಿಗೆ ಗೋದಾಮು ಮಾಲೀಕ ಗಾಳಿಗೆ ತೂರಿರುವುದು ಇದೀಗ ಬೆಳಕಿಗೆ ಬಂದಿದೆ.

ಪಟಾಕಿ ದುರಂತದಲ್ಲಿ ತಮಿಳುನಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ.

ವಿಡಿಯೋ ನೋಡಿ:ಕೃಷಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದಎಂಎಸ್ ಸ್ವಾಮಿನಾಥನ್Janashakthi Media ಪಟಾಕಿ ದುರಂತ

 

 

Donate Janashakthi Media

Leave a Reply

Your email address will not be published. Required fields are marked *