ಎಂಟು ಪಕ್ಷಗಳ ಮಾನ್ಯತೆ ರದ್ದು

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ರಾಜ್ಯದ 8 ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಪಡಿಸಿ, ರಾಜಕೀಯ ಪಕ್ಷಗಳ ಪಟ್ಟಿಯಿಂದ ಕೈಬಿಟ್ಟಿದೆ. ಇವು ಚುನಾವಣ ಆಯೋಗದ ಆದೇಶದಿಂದ ಬಾಧಿತವಾಗಿದ್ದಲ್ಲಿ, ಅಗತ್ಯ ದಾಖಲೆಗಳೊಂದಿಗೆ 30 ದಿನಗಳೊಳಗಾಗಿ ಕರ್ನಾಟಕ ರಾಜ್ಯ ಮುಖ್ಯ ಚುನಾ ವಣಾಧಿಕಾರಿ ಅಥವಾ ಭಾರತ ಚುನಾವಣ ಆಯೋಗವನ್ನು ಸಂಪರ್ಕಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್‌ 29ಸಿ ಅನ್ವಯ ಸ್ವೀಕರಿಸಲಾದ ರಾಜಕೀಯ ವಂತಿಗೆಗಳ ವಿವರಗಳನ್ನು ಪ್ರತಿ ವರ್ಷ ಸೆಪ್ಟಂಬರ್‌ 30ರೊಳಗೆ ಹಾಗೂ ಆಡಿಟ್‌ ವರದಿನ್ನು ಪ್ರತಿ ವರ್ಷ ಅಕ್ಟೋಬರ್‌ ತಿಂಗಳೊಳಗೆ ಮತ್ತು ವಿಧಾನಸಭಾ ಚುನಾವಣೆ ವೆಚ್ಚದ ವಿವರಗಳನ್ನು , ಚುನಾವಣೆ ನಡೆದ 75 ದಿನಗಳೊಳಗಾಗಿ ಹಾಗೂ ಲೋಕಸಭೆ ಚುನಾವಣೆ ನಡೆದ 90 ದಿನಗಳೊಳಗಾಗಿ ಸಲ್ಲಿಸಬೇಕು.  ಆದರೆ ಈ 9 ಪಕ್ಷಗಳು  2017-18, 2018-19 ಮತ್ತು 2019-20ನೇ ಹಣಕಾಸು ವರ್ಷಗಳಲ್ಲಿ ನಿಗದಿತ ಅವಧಿಯೊಳಗೆ ಸಲ್ಲಿಸಿಲ್ಲ. ಹಾಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 

ಮಾನ್ಯತೆ ಕಳೆದುಕೊಂಡ ಪಕ್ಷಗಳು

ಇಂಡಿಯನ್‌ ವೋಟರ್ಸ್‌ ವೆಲ್‌ಫೇರ್‌ ಪಾರ್ಟಿ,

ಕರ್ನಾಟಕ ಕ್ರಾಂತಿ ದಳ,

ನವ ನಿರ್ಮಾಣ ನಾಗರಿಕ ಸಮಿತಿ,

ರಾಷ್ಟ್ರೀಯ ಜನಾಂದೋಲನ ಪಕ್ಷ,

ಸ್ವರ್ಣ ಯುಗ ಪಕ್ಷ,

ಟಿಪ್ಪು ಸುಲ್ತಾನ್ ನ್ಯಾಷನಲ್‌ ಪಬ್ಲಿಕ್‌ ಪಾರ್ಟಿ,

ಯುನೈಟೆಡ್‌ ಇಂಡಿಯನ್‌ ಡೆಮಾಕ್ರಟಿಕ್‌ ಕೌನ್ಸಿಲ್‌,

ಅರಸ್‌ ಸಂಯುಕ್ತ ಪಕ್ಷ.

Donate Janashakthi Media

Leave a Reply

Your email address will not be published. Required fields are marked *