ದೆಹಲಿ: ಜಹಾಂಗೀರ್ ಪುರಿಯಲ್ಲಿ ಹನುಮಾನ್ ಜಯಂತಿಯಂದು(ಏಪ್ರಿಲ್ 16) ನಡೆದ ಕೋಮು ಘರ್ಷಣೆ ನಡೆದಿತ್ತು. ಈ ಮೆರವಣಿಗೆಗೆ ಅನುಮತಿ ಇರಲಿಲ್ಲ. ಆದರೂ ಮೆರವಣಿಗೆ ಮಾಡಲಾಯಿತು. ಇದಕ್ಕೆ ಪೊಲೀಸರು ಕೂಡಾ ಸಾಕ್ಷಿಯಾಗಿದ್ದರು. ಪೊಲೀಸರ ವೈಫಲ್ಯವೇ ಕಾರಣವೆಂದು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಜಹಾಂಗೀರ್ ಪುರಿಯ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ ಎಂಟು ಮಂದಿ ಆಪಾದಿತರಿಗೆ ಜಾಮೀನು ನಿರಾಕರಿಸಿದ ಸೆಷನ್ಸ್ ನ್ಯಾಯಲಯದ ನ್ಯಾಯಧೀಶ ಗಗನ್ ದೀಪ್ ಸಿಂಗ್ ಪೋಲೀಸರಿಂದಾಗಿರುವ ತಪ್ಪುಗಳನ್ನು ತೊಡಕುಗಳಿದ್ದರೆ ಅವನ್ನು ತನಿಖೆ ಮಾಡುವ ಅಗತ್ಯವಿದೆ ಎಂದರು.
“ಯಾವುದೇ ಅನುಮತಿ ಇಲ್ಲದೆ ನಡೆದ ಮೆರವಣಿಗೆ ತಡೆಯುವಲ್ಲಿ ಸ್ಥಳೀಯ ಪೊಲೀಸರ ಸಂಪೂರ್ಣ ವೈಫಲ್ಯವನ್ನು ಮೇಲ್ನೋಟಕ್ಕೆ ಇದು ಬಿಂಬಿಸುತ್ತದೆ. ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಸರಳವಾಗಿ ತಳ್ಳಿಹಾಕಿದಂತಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸರು ಸುಮ್ಮನೆ ಕೂಡುವುದು ಸರಿಯಾದ ವಿಧಾನವಲ್ಲ. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆಯನ್ನು ಸರಿಪಡಿಸಬೇಕು. ಅವರಿಂದ ಯಾವುದಾದರೂ ತೊಡಕುಗಳಿದ್ದರೆ, ಅದರ ಬಗ್ಗೆಯೂ ತನಿಖೆ ನಡೆಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರೋಪಿಗಳಾದ ಇಮ್ತಿಯಾಜ್, ನೂರ್ ಆಲಂ, ಶೇಖ್ ಹಮೀದ್, ಅಹ್ಮದ್ ಅಲಿ, ಶೇಖ್ ಹಮೀದ್, ಎಸ್ ಕೆ ಸಹಾಹದಾ, ಶೇಖ್ ಜಾಕಿರ್ ಹಾಗೂ ಅಹಿರ್ ಅವರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ “ಇವರನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಲಾಗಿದ್ದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಭೀತಿ ಇದೆ” ಎಂಬ ವಾದವನ್ನು ಗಣನೆಗೆ ತೆಗೆದುಕೊಂಡಿದೆ. ರಾಮ ನವಮಿಯಂದು ಜಹಾಂಗೀರ್ ಪುರಿ ಸೇರಿದಂತೆ ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶನಲ್ಲಿಯೂ ಹಿಂಸಾಚಾರ ನಡೆಯಿತು.