‘ದಿ ವೈರ್’ ಸಂಪಾದಕರ ಸಾಧನಗಳ ವಶ ಪ್ರಕರಣ: ಹಿಂದಿರುಗಿಸುವ ಆದೇಶ ಎತ್ತಿ ಹಿಡಿದ ದಿಲ್ಲಿ ಕೋರ್ಟ್

ಹೊಸದಿಲ್ಲಿ: ಕಳೆದ ವರ್ಷ ದಿ ವೈರ್‌ ಸಂಪಾದಕರಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನು ಹಿಂದಿರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ನೀಡಿದ ಆದೇಶವನ್ನು ದಿಲ್ಲಿ ನ್ಯಾಯಾಲಯ ಎತ್ತಿ ಹಿಡಿದಿದೆ. ಆದೇಶ 

ದಿ ವೈರ್‌ನ ಕಚೇರಿ ಹಾಗೂ ಅದರ ನಾಲ್ವರು ಸಂಪಾದಕರಾದ ಸಿದ್ದಾರ್ಥ್‌ ವರದರಾಜನ್‌, ಎಂ.ಕೆ.ವೇಣು, ಸಿದ್ದಾರ್ಥ್‌ ಭಾಟಿಯಾ ಹಾಗೂ ಜಾಹ್ನವಿ ಸೇನ್‌ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ  ಸಂದರ್ಭ ಪೊಲೀಸರು ಈ ಸಾಧನಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಸಂಸ್ಥೆಯ ವ್ಯವಹಾರ ಮುಖ್ಯಸ್ಥ ಮಿಥುನ್‌ ಕಿಡಂಬಿ ಅವರ ನಿವಾಸದಲ್ಲಿ ಕೂಡ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ:‘ದಿ ವೈರ್‌’ ಮೇಲೆ ಪೊಲೀಸರ ಕಾರ್ಯಾಚರಣೆ; ಡಿಜಿಪಬ್‌ ಖಂಡನೆ

ಬಿಜೆಪಿ ನಾಯಕ ಅಮಿತ್‌ ಮಾಲವಿಯ ಅವರು ದಾಖಲಿಸಿದ ಎಫ್‌ಐಆರ್‌ನ ತನಿಖೆಯ ಭಾಗವಾಗಿ ಈ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಎಫ್‌ಐಆರ್‌ನಲ್ಲಿ ಅಮಿತ್‌ ಮಾಲವಿಯ ಅವರು, ದಿ ವೈರ್‌ನ ಸಂಪಾದಕರ ವಿರುದ್ಧ ವಂಚನೆ, ನಕಲಿ,ಮಾನಹಾನಿ ಹಾಗೂ ಕ್ರಿಮಿನಲ್‌ ಸಂಚಿನ ಆರೋಪ ಹೊರಿಸಿದ್ದರು.

ಬುಧವಾರ ಅ-18 ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಪವನ್‌ ಸಿಂಗ್‌ ರಾಜವತ್‌ ಅವರು, ಪತ್ರಿಕೋದ್ಯಮವನ್ನು ನಮ್ಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡದೆ ಇದ್ದರೆ. ಅದು ನಮ್ಮ ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾದಲ್ಲಿ (ಫೇಸ್‌ಬುಕ್‌ ಮಾತೃಸಂಸ್ಥೆ) ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು 700ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ದಿ ವೈರ್ ಮತ್ತು ಅದರ ಸಂಪಾದಕರ ವಿರುದ್ಧ ಅಮಿತ್ ಮಾಳವೀಯ ಎಫ್‌ಐಆರ್ ದಾಖಲಿಸಿದ್ದರು.

ದಿ ವೈರ್ ಮತ್ತು ಸಂಪಾದಕರ ವಿರುದ್ಧ ಸೆಕ್ಷನ್ 420, 468, 469 , 120 ಬಿ ಮತ್ತು 34 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

 

ವಿಡಿಯೋ ನೋಡಿ:ಮುಂಬಡ್ತಿ ಗೊಂದಲ ನಿವಾರಣೆಗೆ ಆಗ್ರಹಿಸಿ ಶಿಕ್ಷಕ – ಉಪನ್ಯಾಸಕರ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *