ಮಂಡ್ಯ: ಜುಲೈ 12 ಶನಿವಾರ ರಾತ್ರಿ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ಮುತ್ತತ್ತಿ ಮುತ್ತುರಾಯಸ್ವಾಮಿ ದೇವಾಲಯದ ಬಳಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಬೆಳಕವಾಡಿ ಪೋಲೀಸರು ದಾಳಿ ಮಾಡಿ 24 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮುತ್ತತ್ತಿಯಲ್ಲಿ ಹಲವಾರು ಮಂದಿ ಲಕ್ಷಾಂತರ ರೂಪಾಯಿಯೊಂದಿಗೆ ಜೂಜಾಟದಲ್ಲಿ ತೊಡಗಿದ್ದರು ಎಂದು ಖಚಿತ ಮಾಹಿತಿ ಮೇರೆಗೆ, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ಹಾಗೂ ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ರವರ ಸೂಚನೆ ಮೇರೆಗೆ ದಾಳಿ ನಡೆಸಿದ ಬೆಳಕವಾಡಿ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ.ವಿ.ಪ್ರಕಾಶ್ ಹಾಗೂ ಸಿಬ್ಬಂದಿಗಳು ಭಾನುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ದಾಳಿ ಮಾಡಿ ಸುಮಾರು 4 ಲಕ್ಷದ 38 ಸಾವಿರದ 770 ರೂ ನಗದು ಹಾಗೂ 13 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ| 1 ಗಂಟೆ 20 ನಿಮಿಷ ಹೇಳಿಕೆ ದಾಖಲು
ಈ ಸಂಬಂಧ ಹಲಗೂರು ಪೋಲೀಸ್ ಠಾಣೆಯಲ್ಲಿ 24 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ನೋಡಿ: ಬೆಂಗಳೂರು | ಜುಲೈ13ರಂದು ಸಾಮ್ರಾಟ್ ಅಶೋಕ ನಾಟಕ ಪ್ರದರ್ಶನJanashakthi Media
