ರಾಯಚೂರು: ಖೋಟಾನೋಟು ದಂಧೆಯಲ್ಲಿ ತೊಡಗಿದ್ದಂತ ಅಡ್ಡೆಯ ಮೇಲೆ ಜಿಲ್ಲೆಯ ಪೊಲೀಸರು ದಾಳಿ ನಡೆಸಿದ್ದೂ, ಸಶಸ್ತ್ರ ಮೀಸಲಿ ಪಡೆಯ ಕಾನ್ಸ್ ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಖೋಟಾನೋಟು ದಂಧೆಯಲ್ಲಿ ತೊಡಗಿದ್ದಂತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾಸನ ವಿವಿ ಉಳಿಸೋಣ – ಸಂಸದ ಶ್ರೇಯಸ್. ಎಂ. ಪಟೇಲ್
ರಾಯಚೂರು ಪೊಲೀಸರಿಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿಯನ್ನು ನಡೆಸಿದ್ದಾರೆ. ನಗರದಲ್ಲಿ ನಡೆಯುತ್ತಿದ್ದಂತ ಖೋಟಾ ನೋಟು ದಂಧೆಯ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೊತೆಗೆ ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಒಬ್ಬರು ಈ ದಂಧೆಯಲ್ಲಿ ಭಾಗಿಯಾದ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ರಾಜ್ಯ ಬಜೆಟ್ 2025 | ಸಾರಿಗೆ ವಲಯಕ್ಕೆ ಸಿಕ್ಕಿದ್ದೆಷ್ಟು – ಕೈ ಬಿಟ್ಟಿದ್ದೆಷ್ಟು