లಖನೌ: ಇಂದು ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಉಪಚುನಾವಣೆ ವೇಳೆ ಮೀರಾಪುರ್ ನಲ್ಲಿ ಪೊಲೀಸ್ ಅಧಿಕಾರಿಗಳಿಂದಲೇ ಚುನಾವಣೆ ನಿಯಮ ಉಲ್ಲಂಘನೆಯಾಗಿರುವ ಆರೋಪ ಕೇಳಿ ಬಂದಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಚುನಾವಣಾ ಆಯೋಗ ಎಸ್ ಪಿ ಸೇರಿ 7 ಅಧಿಕಾರಿಗಳನ್ನು ಅಮಾನತುಗೊಳಿಸಲು ಆದೇಶಿಸಿದೆ. ಮತದಾನ
ಈ ನಡುವೆ, ಉಪಚುನಾವಣೆಗೆ ಮತ ಹಾಕಲು ಆಗಮಿಸುತ್ತಿದ್ದ ಮುಸ್ಲಿಂ ಮಹಿಳೆಯರಡೆಗೆ ಮೀರಾಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪಿಸ್ತೂಲ್ ತೋರುಸಿರುವ ವಿಡಿಯೋ ವೈರಲ್ ಆಗತೊಡಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಪೊಲೀಸರು ತಮ್ಮ ಪಿಸ್ತೂಲ್ ಅನ್ನು ಮಹಿಳೆಯರಿಗೆ ತೋರಿಸಿ ಹಿಂತಿರುಗಿ ಹೋಗುವಂತೆ ಹೇಳುತ್ತಿರುವುದು ದಾಖಲಾಗಿದೆ. ಒಬ್ಬ ಮಹಿಳ ಅಧಿಕಾರಿಯನ್ನು ಎದುರಿಸಿ ತನ್ನ ಮೇಲೆ ಪಿಸ್ತೂಲ್ ತೋರಿಸಲು ನಿಮಗೆ ಹಕ್ಕಿದೆಯೇ ಎಂದು ಕೇಳುತ್ತಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಮೀರಾಪುರದ ಕಾಕರವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಶೇ.58.22, ಜಾರ್ಖಂಡ್ ನಲ್ಲಿ ಶೇ.67.59 ಮತದಾನ
ರಿವಾಲ್ವರ್‌ನಿಂದ ಬೆದರಿಕೆ ಹಾಕುವ ಮೂಲಕ ಮತದಾರರನ್ನು ಮತದಾನ ಮಾಡದಂತೆ ತಡೆಯುತ್ತಿರುವ ಮೀರಾಪುರದ ಕಾಕರವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಚುನಾವಣಾ ಆಯೋಗವು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಅಖಿಲೇಶ್ ಯಾದವ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಭಾರತ ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿದ್ದಾರೆ.
मीरापुर के ककरौली थाना क्षेत्र के SHO को चुनाव आयोग तुरंत निलंबित किया जाए, क्योंकि वो रिवॉल्वर से धमकाकर वोटर्स को वोट डालने से रोक रहे हैं। @ECISVEEP @SECUttarPradesh@rajivkumarec@spokespersonECI@ceoup#ECI#YouAreTheOne#IVoteForSure#UPPolitics#SamajwadiParty pic.twitter.com/WfiygzqO0t
— Akhilesh Yadav (@yadavakhilesh) November 20, 2024
ಎಐಎಂಐಎಂ ಅಭ್ಯರ್ಥಿ ಮೊಹಮ್ಮದ್ ಅರ್ಷದ್ ಅವರು ಕಾಕ್ರೋಲಿಯಲ್ಲಿ ಮತದಾನದ ಪ್ರಮಾಣ ಕಡಿಮೆ ಯಾಗಿದೆ ಎಂದು ಆರೋಪಿಸಿದರು ಏಕೆಂದರೆ ಜನರು ಮನೆಯಿಂದ ಹೊರಬರದಂತೆ ಪೊಲೀಸರು ತಡೆಯುತ್ತಿದ್ದಾರೆ. ಪೊಲೀಸರು ಮತದಾರರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು ಮತ್ತು ಅವರ ಕಾರ್ಯಗಳನ್ನು “ಜನರ ಶತ್ರುಗಳಿಗೆ ಹೋಲಿಸಿದರು. ಎಐಎಂಐಎಂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅರ್ಷದ್ ಹೇಳಿದ್ದಾರೆ.
ಇದನ್ನೂ ನೋಡಿ : ದೇಶದ ರಾಜ ವ್ಯಾಪಾರಿಯಾದ ಕಾರಣ ದೇಶದ ಜನ ಬಿಕಾರಿಯಾಗುತ್ತಿದ್ದಾರೆ – ಡಾ. ಕೆ.ಪ್ರಕಾಶ್ Janashakthi Media