ಬೆಂಗಳೂರು : ರಸ್ತೆಬದಿ ವ್ಯಾಪಾರಿಗಳ ಮೇಲೆ ಪೋಲಿಸ್ ದರ್ಪ ತೋರಿದ್ದು, ರಸ್ತೆ ಬದಿ ತರಕಾರಿ ಮಾರುವವರ ತಳ್ಳುವ ಗಾಡಿ ಎತ್ತಿಸುವುದಕ್ಕೆ ಬಂದು ನಡುರಸ್ತೆಯಲ್ಲಿಯೇ ತಕ್ಕಡಿ ಎಸೆದು ಪೊಲೀಸ್ ಕಾನ್ಸ್ಟೇಬಲ್ ದರ್ಪ ತೋರಿದ್ದಾರೆ. ವ್ಯಾಪಾರಿ
ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಈ ಘಟನೆ ನಡೆದಿದ್ನೆದು, ಲಕ್ಕೆ ಎಸೆದ ಪರಿಣಾಮ ತಕ್ಕಡಿ ಒಡೆದು ಹೋಗಿದ್ದು, ಪೊಲೀಸ್ ಕಾನ್ಸ್ಟೇಬಲ್ ನಾಗರಾಜ್ ವರ್ತನೆಗೆ ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸೋದು ಎಷ್ಟು ಸರಿ ಅಂತ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನು ಓದಿ : ರಾಣೇಬೆನ್ನೂರು: ಕೊಳೆತ ತರಕಾರಿ ಹಾಕಿ ಅಡುಗೆ – ವಿದ್ಯಾರ್ಥಿಗಳ ಪ್ರತಿಭಟನೆ
ತರಕಾರಿ ಮಾರೋ ವೇಳೆ ಅಂಗಡಿ ಎತ್ತಿಸಲು ನಾಗರಾಜ್ ಬಂದಿದ್ದರು. ಈ ವೇಳೆ ತಳ್ಳುವ ಗಾಡಿ ಮೇಲಿದ್ದ ತಕ್ಕಡಿ ತೆಗೆದುಕೊಂಡು ನೆಲಕ್ಕೆ ಎಸೆದಿದ್ದಾರೆ. ನಡುರಸ್ತೆಯಲ್ಲಿ ತಕ್ಕಡಿ ಎಸೆದು ನಾಗರಾಜ್ ದರ್ಪ ತೋರಿದ್ದಾರೆ. ತಕ್ಕಡಿ ನೆಲಕ್ಕೆ ಎಸೆದ ರಭಸಕ್ಕೆ ಪೀಸ್ ಪೀಸ್ ಆಗಿದೆ.
ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ನಿಯಮ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಹೀಗಾಗಿ ನಾಗರಾಜ್ ಕೂಡ ಬಂದು ವ್ಯಾಪರಿಗಳ ಬಳಿ ಬಂದು ಅಂಗಡಿ ಎತ್ತುವಂತೆ ಕೇಳಿದ್ದರು.ಉಪ್ಪಾರಪೇಟೆ ಸಂಚಾರಿ ಠಾಣೆಯ ಕಾನ್ಸ್ಟೇಬಲ್ ನಾಗರಾಜ್ ಈ ರೀತಿ ನಡೆದುಕೊಂಡಿದ್ದು ಎಷ್ಟು ಸರಿ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನು ನೋಡಿ : ಮೋದಿಯವರ ‘ರೇವ್ಡಿ’ ಪ್ರಪಗಂಡಾದ ಅಸಲಿಯತ್ತೇನು? ಈ ವಾರದ ನೋಟ ಬಿ. ಶ್ರೀಪಾದ ಭಟ್ ಜೊತೆ Janashakthi Media