ಬೆಂಗಳೂರು: ಅಕ್ಟೋಬರ್ 3 ರಂದು, ನಗರದಲ್ಲಿ ಯುವತಿಯೊಬ್ಬಳಿಗೆ ತೀರಾ ಅವಾಚ್ಯವಾಗಿ ನಿಂದಿಸಿದ ಆಟೋ ಚಾಲಕನೊಬ್ಬನನ್ನು ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆಟೋ ಚಾಲಕ ಬಿಳೇಕಹಳ್ಳಿ ಮೂಲದ ಸಂತೋಷ್ ಕುಮಾರ್ (26) ಎಂದು ತಿಳಿಸಿದ್ದಾರೆ. ಆಟೋರಿಕ್ಷಾ ಚಾಲಕ ಮಹಿಳೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಿಡಿಯೋ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸೆಪ್ಟೆಂಬರ್ 24 ರಂದು ಘಟನೆ ನಡೆದಿದ್ದು, ಬೆಳಗ್ಗೆ 5.30 ರ ವೇಳೆಗೆ ಸಿಲ್ಕ್ ಬೋರ್ಡ್ ಗೆ ಬಂದಿಳಿದಾಗ ಯುವತಿಗೆ ಯಾವುದೇ ಕ್ಯಾಬ್ ಸಿಕ್ಕಿರಲಿಲ್ಲ. ಈ ವೇಳೆ ಆಟೋ ಹತ್ತಿದ್ದು ಹೇಳಿದ ಸ್ಥಳಕ್ಕೆ ತೆರಳಲು 270 ರೂ ಬಾಡಿಗೆ ಕೇಳಿದ್ದು , ಬಳಿಕ ಇನ್ನೊಂದು ಆಟೋಗೆ ಹತ್ತಲು ಹೇಳಿದ್ದು ಆಕೆ 300 ರೂ ನೀಡಲು ಒಪ್ಪಿದ್ದಳು.
ಇದನ್ನೂ ಓದಿ: ಮುಡಾ ಪ್ರಕರಣ| ಹಗರಣದಲ್ಲಿ ಜಿಟಿ ದೇವೇಗೌಡರ ಅಕ್ರಮವು ಇದೆ: ಸ್ನೇಹಮಯಿ ಕೃಷ್ಣ ಆರೋಪ
ಬನ್ನೇರುಘಟ್ಟ ರಸ್ತೆಯಿಂದ ಬಿಟಿಎಂ ಲೇಔಟ್ ಗೆ ಬಂದಾಗ ಮೀಟರ್ ನಲ್ಲಿ 340 ರೂ ತೋರಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ತೀರಾ ವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆ ಕ್ಷಣದ ವಿಡಿಯೋವನ್ನು ಯುವತಿ ಸೆರೆ ಹಿಡಿದಿದ್ದಳು. ವಿಡಿಯೋವನ್ನು ಯುವತಿಯ ಸ್ನೇಹಿತ ಸಾಮಾಜಿಕ್ ತಾಣದಲ್ಲಿ ಪೋಸ್ಟ್ ಮಾಡಿದ್ದ.
ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸಂತೋಷ್ ಕುಮಾರ್ ನನ್ನ ವಶಕ್ಕೆ ಪಡೆದು ಕಠಿನ ಎಚ್ಚರಿಕೆ ನೀಡಿದ್ದಾರೆ. ಘಟನೆ ನಡೆದಾಗಲೂ ತಾಳ್ಮೆಯಿಂದ ವ್ಯವಹರಿಸಿದ್ದ ಯುವತಿ ಆತನ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯೂಟಿಷಿಯನ್ ಜತೆಗೆ ಅಸಭ್ಯ ವರ್ತನೆ: ಆಟೋ ಡ್ರೈವರ್ ಸೆರೆ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬ್ಯೂಟಿಷಿಯನ್ ಎದುರು ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕ ಮಾಗಡಿ ರಸ್ತೆ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಮಲ್ಲೇಶ್ವರದ ವಿನೋಬಾನಗರ ನಿವಾಸಿ ಅಶೋಕ್ ಕುಮಾರ್ (36) ಬಂಧಿತ ಆರೋಪಿ. ಸೆ.18ರಂದು ಮಧ್ಯಾಹ್ನ ಬ್ಯೂಟಿಷಿಯನ್ಯೊಬ್ಬರು ರಾಜಾಜಿನಗರ 6ನೇ ಬ್ಲಾಕ್ನಲ್ಲಿ ನಡೆದು ಕೊಂಡು ಮನೆಗೆ ಊಟಕ್ಕೆ ಹೋಗುತ್ತಿದ್ದರು. ಮಾರ್ಗಮಧ್ಯೆ ಆಟೋ ಚಾಲಕ ಅಶೋಕ್ ಕುಮಾರ್ ಆಕೆಯನ್ನು ಹಿಂಬಾಲಿ ಸಿಕೊಂಡು ಹೋಗಿ ಪ್ಯಾಂಟ್ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದ.
ತಕ್ಷಣ ಬ್ಯೂಟಿಷಿಯನ್ ಸಹಾಯಕ್ಕಾಗಿ ಕೂಗಿಕೊಂಡಿದ್ದರು. ಇದರಿಂದ ಆತಂಕಗೊಂಡ ಆಟೋ ಚಾಲಕಆಟೋ ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ಈಬಗ್ಗೆ ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿ ಸಿಕೊಂಡು ಆಟೋ ಚಾಲಕನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಇದನ್ನೂ ನೋಡಿ: ಪ್ರತಿಪಕ್ಷಗಳು ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು – ಡಾ ಹಂಪ ನಾಗರಾಜಯ್ಯ Janashakthi Media