ಮಂಗಳೂರಿನ ಕುಖ್ಯಾತ ದರೋಡೆಕೋರರ ಮೇಲೆ ಪೊಲೀಸ್ ಫೈರಿಂಗ್

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ರಾಮನಗುಳಿ ಬಳಿ ಅನಾಮದೇಯ ಕಾರಿನಲ್ಲಿ ದೊರೆತಿದ್ದ ಒಂದು ಕೋಟಿ ಹಣದ ಕುರಿತು ತನಿಖೆ ಕೈಗೊಂಡಿದ್ದ ಅಂಕೋಲ ಪೊಲೀಸರು ಮಂಗಳೂರು ಮೂಲದ ಮೂವರು ದರೋಡೆಕೋರರನ್ನು ಬೆಳಗಾವಿಯಲ್ಲಿ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ಇಬ್ಬರು ಆರೋಪಿಗಳು ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ನಾಲ್ಕು ಜನ ಪೊಲೀಸರಿಗೆ ಗಾಯವಾಗಿದ್ದು ಈ ವೇಳೆ ಆತ್ಮ ರಕ್ಷಣೆಗಾಗಿ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಹಳಿಯಾಳದ ತಟ್ಟಿಗೇರಾ ಕ್ರಾಸ್ನಲ್ಲಿ ನಡೆದಿದೆ.

ಇದನ್ನೂ ಓದಿ:-ಮನುಧರ್ಮದ ಹಾದಿಯಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ನಾವು ಬಿಡುವುದಿಲ್ಲ -ಬೃಂದಾ ಕಾರಟ್

ಪಿ.ಎಸ್.ಐ ಗಳಾದ ಉದ್ದಪ್ಪ ಧರೆಪ್ಪನವರ್ , ಪರಶುರಾಮ್ ಮಿರ್ಜಿಗಿ ಸಿಬ್ಬಂದಿಗಳಾದ ಬಸವರಾಜ್ , ಕೋಟೇಶ್ ನಾಗರವಳ್ಳಿ ಗಾಯಗೊಂಡವರಾಗಿದ್ದು , ಆರೋಪಿಗಳಾದ ತಲ್ಹತ್ ತಂಗಲ್ ,ಎಂಬಿ ನೌಪಾಲ ಗುಂಡೇಟು ತಿಂದ ಆರೋಪಿಗಳಾಗಿದ್ದಾರೆ. ದರೋಡೆ ಪ್ರಕರಣ ಸಂಬಂಧ ಮಂಗಳೂರು ಮೂಲದ ಆರೋಪಿಗಳಾದ ತಲ್ಹತ್ ತಂಗಲ್ ,ಎಂಬಿ ನೌಪಾಲ,ಮೊಹ್ಮಮದ್ ಸಾಹಿಲ್ ರನ್ನು ಬೆಳಗಾವಿಯ ವಂಟಮೂರಿ ಕ್ರಾಸ್ ಬಳಿ ದಸ್ತಗಿರಿ ಮಾಡಿ ತನಿಖೆಗಾಗಿ ಅಂಕೋಲದ ಕಡೆ ಕರೆತರುತಿದ್ದರು.

ಇದನ್ನೂ ಓದಿ:-ಸಿಪಿಐ(ಎಂ) 24 ನೇ ಮಹಾಧಿವೇಶನ: ರಾಜಕೀಯ ನಿರ್ಣಯದ ಮೇಲೆ ಚರ್ಚೆ ಆರಂಭ

ಈ ವೇಳೆ ಹಳಿಯಾಳ ತಾಲೂಕಿನ ತಟ್ಟಿಗೇರಾ ಕ್ರಾಸ್ ಬಳಿ ಮೂತ್ರ ವಿಸರ್ಜನೆಗಾಗಿ ನಿಲ್ಲಿಸಿದಾಗ ಆರೋಪಿಗಳಾದ ತಲ್ಹತ್ ತಂಗಲ್ ,ಎಂಬಿ ನೌಪಾಲ್ ಪೊಲೀಸರ ಮೇಲೆ ಕಲ್ಲು ತೂರಿ ಹಲ್ಲೆ ಮಾಡಿ ಹತ್ಯೆಗೆ ಪ್ರಯತ್ನಿಸಿದ್ದರು. ಈ ವೇಳೆ ಅನಿವಾರ್ಯವಾಗಿ ಗುಂಡುಹಾರಿಸಲಾಗಿದ್ದು ಗಾಯಗೊಂಡ ಆರೋಪಿಗಳಿಗೆ ಹೆಚ್ವಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಿದ್ದು ,ಗಾಯಗೊಂಡ ಪೊಲೀಸರಿಗೆ ಹಳಿಯಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಗಾಯಗೊಂಡ ಪೊಲೀಸ್ ಅಧಿಕಾರಿಗಳನ್ನು ಎಸ್.ಪಿ ಎಂ. ನಾರಾಯಣ್ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Donate Janashakthi Media

Leave a Reply

Your email address will not be published. Required fields are marked *