ಸಿಪಿಐ ಕಿರುಕುಳ: ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ಪೊಲೀಸ್ ಪೇದೆಯೊಬ್ಬರು ಸಿಪಿಐ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿರುವ ಗಟನೆ ನಡೆದಿದೆ.

ಸಿಪಿಐ ಕಿರುಕುಳ ನೀಡಿದ ಕಾರಣಕ್ಕೆ ಪೇದೆ ವಿಠ್ಠಲ ಮುನ್ನಾಳ ಎಂಬವರು ಐದು ಪುಟಗಳ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ಷಣೆ ಮಾಡಲಾಗಿದೆ. ಉದ್ಯಮಭಾಗ ಪೊಲೀಸ್ ಠಾಣೆ ಸಿಪಿಐ ಧರಗೌಡ ಪಾಟೀಲ ವಿರುದ್ಧ ಕಿರುಕುಳ ಆರೋಪ ಮಾಡಲಾಗಿದೆ.

ಇದನ್ನೂ ಓದಿ : ಮಧ್ಯಪ್ರದೇಶ | ದಲಿತ ಯುವಕನಿಗೆ ಥಳಿಸಿ ಹತ್ಯೆ

ರಜೆ ಹಂಚಿಕೆ ವಿಚಾರದಲ್ಲಿ ಸಿಪಿಐ ಧರೇಗೌಡ ಪಾಟೀಲ ತಾರತಮ್ಯ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿದ್ದರೂ ಗೈರು ಹಾಜರಾತಿ ಎಂದು ತೋರಿಸಿ ಪುಸ್ತಕದಲ್ಲಿ ಬರೆಸುತ್ತಾರೆ. ಠಾಣೆಯಲ್ಲಿ ವಿಪರೀತ ಜಾತೀಯತೆ ಮಾಡುವುದು, ಮಹಿಳಾ ಸಿಬ್ಬಂದಿಗೆ ನಿಂದಿಸುವುದು, ಕಾರ್ಯಾಂಗದ ಅಧಿಕಾರಿ ಎಂಬುದುನ್ನು ಮರೆತು ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ. ಹಫ್ತಾ ವಸೂಲಿ ಮಾಡಿಕೊಡುವ ಸಿಬ್ಬಂದಿಗೆ ನೈಟ್ ಡ್ಯೂಟಿ ಹಾಕಲ್ಲ ಎಂದು ಪತ್ರದಲ್ಲಿ ವಿಠ್ಠಲ ಉಲ್ಲೇಖಿಸಿದ್ದಾರೆ.

ಸದ್ಯ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡ್ತಿರುವ ವಿಠಲ ಆತ್ಮಹತ್ಯೆ ಯತ್ನಕ್ಕೂ ಮುನ್ನ ಕೈ ಬರಹದಲ್ಲಿ ಐದು ಪುಟಗಳ ಪತ್ರಬರೆದಿದ್ದರು.

ಕರ್ತವ್ಯ ಸರದಿ ಪುಸ್ತಕ ಪ್ರತಿ, ವಿವಿಧ ಆದೇಶ ಪ್ರತಿಗಳ ಸಮೇತ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ರವಾನೆ ಮಾಡಲಾಗಿದೆ. ಡಿಜಿಐಜಿಪಿ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಖಡೇಬಜಾರ್ ಎಸಿಪಿ, ಗೃಹಮಂತ್ರಿ ಡಾ. ಜಿ. ಪರಮೇಶ್ವರ ಕಚೇರಿ, ಮಾನವಹಕ್ಕುಗಳ ಆಯೋಗ, ಪೊಲೀಸ್ ದೂರುಗಳ ಪ್ರಾಧಿಕಾರ ಎಸ್‌ಸಿಎಸ್‌ಟಿ ಪ್ರಾಧಿಕಾರ ಘಟಕಕ್ಕೆ ಪತ್ರ ರವಾನೆ ಮಾಡಿದ್ದಾರೆ.

ಪತ್ರದ ಬಗ್ಗೆ, ಮಾಹಿತಿ ತಿಳಿಯುತ್ತಿದ್ದಂತೆ ಮನೆಗೆ ತೆರಳಿ ಪೇದೆ ವಿಠ್ಠಲ ರಕ್ಷಣೆ ನೀಡಲಾಗಿದೆ. ಪೇದೆ ವಿಠಲ ಮುನ್ನಾಳ ಸದ ಗೌಪ್ಯ ಸ್ಥಳದಲ್ಲಿದ್ದಾರೆ.

ಇದನ್ನೂ ನೋಡಿ : ದಲತರಿಂದ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು Janashakthi Media

Donate Janashakthi Media

Leave a Reply

Your email address will not be published. Required fields are marked *